ಕೊಂಡಜ್ಜಿ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ೮೦ ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ
ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಭಾರತದ ೮೦ ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಡಗರ ಮತ್ತು ದೇಶಭಕ್ತಿ
ಕೊಂಡಜ್ಜಿ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ೮೦ ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ
ಹರಿಹರ: ತಾಲೂಕಿನ ಕೊಂಡಜ್ಜಿ ಗ್ರಾಮದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಭಾರತದ ೮೦ ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಡಗರ ಮತ್ತು ದೇಶಭಕ್ತಿ

ಯ ಸಡಗರದೊಂದಿಗೆ ಆಚರಿಸಲಾಯಿತು.ಶಾಲೆಯ ನೂತನ ಪ್ರಾಂಶುಪಾಲರಾದ ಚಂದ್ರಪ್ಪ ಟಿ.ಕೆ ಹಾಗೂ ಮುಖ್ಯ ಶಿಕ್ಷಕರಾದ ರಮೇಶ್ ಕೆ.ಹೆಚ್. ಅವರ ಜಂಟಿ ನೇತೃತ್ವದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಧ್ವಜಾರೋಹಣದ ನಂತರ ವಸತಿ ಶಾಲೆಯ ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನ (ಮಾರ್ಚ್ ಫಾಸ್ಟ್) ನಡೆಸಿ ಗೌರವ ವಂದನೆ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗವನ್ನು ಸ್ಮರಿಸಿದರು. ವಿದ್ಯಾರ್ಥಿಗಳು ಶಿಸ್ತು ಮತ್ತು ದೇಶಭಕ್ತಿಯನ್ನು ಮೈಗೂಡಿಸಿಕೊಂಡು ದೇಶದ ಪ್ರಗತಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು. ನಂತರ ವಿದ್ಯಾರ್ಥಿಗಳಿಂದ ವಿವಿಧ ದೇಶಭಕ್ತಿ ಗೀತೆಗಳ ಗಾಯನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡು ನೆರೆದಿದ್ದವರ ಗಮನ ಸೆಳೆದವು.ಸಮಾರಂಭದಲ್ಲಿ ಶಾಲೆಯ ಶಿಕ್ಷಕ ವೃಂದದವರಾದ ಮಾರುತಿ ಎಸ್.ಪಿ., ದಿವ್ಯಶ್ರೀ ಎಸ್., ಶಿಜಾಯತ್ ಉಲ್ಲಾ, ಮತ್ತು ಮೆಹಬೂಬ್ ಬಾನು ರೂಬಿಯ.ಮಹಾಲಕ್ಷ್ಮಿ ಅನುಶ್ರೀ .ನಾಗರಾಜ್ ಕೆ.ಸಿ., ಉಮೇಶ್, ರಮೇಶ್, ಮತ್ತು ವಿಶ್ವನಾಥ್ ಗಣೇಶ್.ಶಂಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇವರೊಂದಿಗೆ ವಿದ್ಯಾರ್ಥಿಗಳ ಯೋಗಕ್ಷೇಮ ನೋಡಿಕೊಳ್ಳುವ ನಿಲಯ (ವಾರ್ಡನ್) ರುದ್ರೇಶ್ ಕೆ.ಆರ್. ಹಾಗೂ ಪ್ರಮುಖ ಸಿಬ್ಬಂದಿಗಳಾದ ಹನುಮಂತ ಪ್ಪ ಪವನಕುಮಾರ್.ಹರೀಶ್.ದೇವಣ್ಣ.ಮಂಜುಳಾ.ದಾಯಿಮ.ಜಬೀನಾ.ಹನುಮಂತ ಪ್ಪ ಮುಧ್ದಣ್ಣ ಕಾರ್ಯಕ್ರಮದ ಮುಂಚೂಣಿಯಲ್ಲಿದ್ದು ಆಚರಣೆಯನ್ನು ಯಶಸ್ವಿಗೊಳಿಸಿದರು.ಸ್ಥಳೀಯ ಗ್ರಾಮಸ್ಥರು ಹಾಗೂ ಪಾಲಕರು ಉಪಸ್ಥಿತರಿದ್ದ ಈ ಸಮಾರಂಭವು ಭಾರತ ಮಾತಾ ಕೀ ಜೈ ಘೋಷಣೆಗಳೊಂದಿಗೆ ಮುಕ್ತಾಯವಾಯಿತು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಸಿಹಿ ಹಂಚಲಾಯಿತು.ನಿರೂಪಣೆ ಕನ್ನಡ ಶಿಕ್ಷಕಿರಾದ ಮಹೆಬುಬ್ ಬಾನೂ ರವರು ನಡೆಸಿಕೊಟ್ಟರು