Uncategorized

ಮಲೇಬೆನ್ನೂರು: ಪ್ರಜಾಸೇವಾ ಆಂದೋಲನಕ್ಕೆ ಜಿಲ್ಲಾಧಿಕಾರಿ ಗೈರು; ಸಾರ್ವಜನಿಕರ ತೀವ್ರ ಆಕ್ರೋಶ

ಉದ್ದೇಶಕ್ಕೆ ತಣ್ಣೀರೆರಚಿದ ಅಧಿಕಾರಿಗಳ ನಡೆ:

ಮಲೇಬೆನ್ನೂರು: ಪ್ರಜಾಸೇವಾ ಆಂದೋಲನಕ್ಕೆ ಜಿಲ್ಲಾಧಿಕಾರಿ ಗೈರು; ಸಾರ್ವಜನಿಕರ ತೀವ್ರ ಆಕ್ರೋಶ
ಮಲೇಬೆನ್ನೂರು: ಹರಿಹರ ತಾಲೂಕಿನ ಕೊಮಾರನಹಳ್ಳಿ ಗ್ರಾಮದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಮಹತ್ವಾಕಾಂಕ್ಷೆಯ ‘ಪ್ರಜಾಸೇವಾ ಆಂದೋಲನ’ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳು ಗೈರುಹಾಜರಾಗಿದ್ದು, ಸಾರ್ವಜನಿಕರ ಹಾಗೂ ರೈತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸುವ ಉದ್ದೇಶದಿಂದ ಜಿಲ್ಲಾಡಳಿತವೇ ಆಯೋಜಿಸಿದ್ದ ಈ ಪ್ರಮುಖ ಕಾರ್ಯಕ್ರಮಕ್ಕಾಗಿ ಬೆಳಗ್ಗಿನಿಂದಲೇ ನೂರಾರು ಜನಸಾಮಾನ್ಯರು, ರೈತರು ಮತ್ತು ಪುರಸಭೆ ಸದಸ್ಯರು ಆಗಮಿಸಿದ್ದರು. ಆದರೆ, ಜಿಲ್ಲೆಯ ಉನ್ನತ ಅಧಿಕಾರಿಯೇ ಗಂಟೆಗಟ್ಟಲೆ ಕಾಯಿಸಿದರೂ ಬಾರದೇ ಇರುವುದನ್ನು ಕಂಡು ಸಾರ್ವಜನಿಕರು ತೀವ್ರ ನಿರಾಸೆಗೊಂಡರಲ್ಲದೆ, ಸ್ಥಳದಲ್ಲೇ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಉದ್ದೇಶಕ್ಕೆ ತಣ್ಣೀರೆರಚಿದ ಅಧಿಕಾರಿಗಳ ನಡೆ:
“ಸರ್ಕಾರ ಜನರ ಮನೆ ಬಾಗಿಲಿಗೆ ಬಂದು ಸಮಸ್ಯೆ ಆಲಿಸಬೇಕು ಎನ್ನುವ ಉದ್ದೇಶದಿಂದ ಈ ಆಂದೋಲನ ಹಮ್ಮಿಕೊಳ್ಳಲಾಗಿದೆ. ಆದರೆ, ಕಾರ್ಯಕ್ರಮದ ಮುಖ್ಯಸ್ಥರಾದ ಜಿಲ್ಲಾಧಿಕಾರಿಗಳೇ ಗೈರಾಗುವುದರಿಂದ ಇಡೀ ಯೋಜನೆಯ ಉದ್ದೇಶವೇ ಹಿನ್ನಡೆಯಾಗಿದೆ” ಎಂದು ಸಾರ್ವಜನಿಕರು ಆರೋಪಿಸಿದರು. ಜಿಲ್ಲೆಯ ಉನ್ನತ ಅಧಿಕಾರಿಗೆ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಯಾವುದೇ ಕಾಳಜಿ ಇಲ್ಲದಂತಾಗಿದೆ ಎಂದು ರೈತರು ಮತ್ತು ಪುರಸಭೆ ಸದಸ್ಯರು ಜಂಟಿಯಾಗಿ ಅಸಮಾಧಾನ ಹೊರಹಾಕಿದ್ದಾರೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸಾರ್ವಜನಿಕರ ಪ್ರತಿಭಟನೆಗೆ ಜಿಲ್ಲಾಡಳಿತವು ಯಾವ ರೀತಿ ಪ್ರತಿಕ್ರಿಯಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
ವರದಿ ತೌಫೀಕವುಲ್ಲ. ವಿಜಯ್ ಪ್ರಭಾಸ್ ನ್ಯೂಸ್ ಮಲೆಬೇನ್ನೂರು

Related Articles

Leave a Reply

Your email address will not be published. Required fields are marked *

Back to top button
Click to listen highlighted text!
error: Content is protected !!