ಜೆಡಿಎಸ್ ವತಿಯಿಂದ ಅಥಣಿಯಲ್ಲಿ ಇಂದು ಬೃಹತ್ ಪ್ರತಿಭಟನೆ: ಕಬ್ಬಿಗೆ ₹5500 ದರ, ಸಾಲಮನ್ನಾಕ್ಕೆ ಆಗ್ರಹ
ಬರಗಾಲ ಪರಿಹಾರ: ಅಥಣಿ ತಾಲೂಕಿನಲ್ಲಿ ತಕ್ಷಣವೇ ವ್ಯಾಪಕ ಬರಗಾಲ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು.
ಜೆಡಿಎಸ್ ವತಿಯಿಂದ ಅಥಣಿಯಲ್ಲಿ ಇಂದು ಬೃಹತ್ ಪ್ರತಿಭಟನೆ: ಕಬ್ಬಿಗೆ ₹5500 ದರ, ಸಾಲಮನ್ನಾಕ್ಕೆ ಆಗ್ರಹ
ವಿಜಯ್ ಪ್ರಭಾಸ್ ನ್ಯೂಸ್ ಬೆಳಗಾವಿ ಅಥಣಿ: ತಾಲೂಕಿನ ಜ್ವಲಂತ ರೈತ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಜಾತ್ಯತೀತ ಜನತಾದಳ (ಜೆಡಿಎಸ್) ಅಥಣಿ ಸಮಿತಿ ವತಿಯಿಂದ ಇಂದು (ಸೆಪ್ಟೆಂಬರ್ 28) ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಮನವಿ ಸಲ್ಲಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಇಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಪ್ರಸಿದ್ಧ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಆರಂಭವಾಗಲಿರುವ ಪ್ರತಿಭಟನಾ ಮೆರವಣಿಗೆಯು ಪ್ರಮುಖ ರಸ್ತೆಗಳ ಮೂಲಕ ತಹಶೀಲ್ದಾರ್ ಕಾರ್ಯಾಲಯವನ್ನು ತಲುಪಲಿದೆ. ತದನಂತರ ಮಾನ್ಯ ತಹಶೀಲ್ದಾರ್ ಅವರ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಂಟಿ ಮನವಿ ಪತ್ರವನ್ನು ಸಲ್ಲಿಸಲಾಗುವುದು.
ಪ್ರಮುಖ ಬೇಡಿಕೆಗಳು:
ಬರಗಾಲ ಪರಿಹಾರ: ಅಥಣಿ ತಾಲೂಕಿನಲ್ಲಿ ತಕ್ಷಣವೇ ವ್ಯಾಪಕ ಬರಗಾಲ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು.
ಸಂಪೂರ್ಣ ಸಾಲಮನ್ನಾ: ಸಹಕಾರ ಹಾಗೂ ವಾಣಿಜ್ಯ ಬ್ಯಾಂಕುಗಳಲ್ಲಿನ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು.
ಕಬ್ಬಿಗೆ ₹5500 ದರ: ಪ್ರಸ್ತುತ ಬೆಲೆ ಏರಿಕೆಗೆ ಅನುಗುಣವಾಗಿ ಕಬ್ಬಿಗೆ ಪ್ರತಿ ಟನ್‌ಗೆ ರೂ. 5,500/- ಬೆಲೆ ನಿಗದಿಪಡಿಸಬೇಕು.
ನಿರಂತರ ವಿದ್ಯುತ್: ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಸಬೇಕು.
ಗಣ್ಯರ ಉಪಸ್ಥಿತಿ:
ಈ ಬೃಹತ್ ಪ್ರತಿಭಟನೆಯಲ್ಲಿ ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷರು ಹಾಗೂ ಅಥಣಿಯ ಮಾಜಿ ಶಾಸಕರಾದ ಶ್ರೀ ಶಹಜಾನ್ ಡೊಂಗರಗಾಂವ್ ಮತ್ತು ಚಿಕ್ಕೋಡಿ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಶ್ರೀ ಕಲ್ಲಪ್ಪಣ್ಣ ಮಗೆನ್ನವರ್ ಅವರು ಭಾಗವಹಿಸಿ ಹೋರಾಟದ ನೇತೃತ್ವ ವಹಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಅಥಣಿ ತಾಲೂಕಿನ ರೈತ ಬಾಂಧವರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟವನ್ನು ಯಶಸ್ವಿಗೊಳಿಸಬೇಕಾಗಿ ಜೆಡಿಎಸ್ ಸಮಿತಿ ವಿನಂತಿಸಿದೆ
ವರದಿ ಮಹೇಶ್ ಶರ್ಮಾ ವಿಜಯ್ ಪ್ರಭಾಸ್ ನ್ಯೂಸ್ ಬೆಳಗಾವಿ