ಹರಿಹರದಲ್ಲಿ ೭ನೇ ವರ್ಷದ ಹಿಂದೂ ಮಹಾಗಣಪತಿ ಮಹೋತ್ಸವಕ್ಕೆ ಚಾಲನೆ: ಗೋಪೂಜೆ ಹಾಗೂ ಹಂದರಕಂಬ ಪೂಜೆ ನೆರವೇರಿಕೆ
ಹಬ್ಬದ ಮಹತ್ವ ಹಾಗೂ ಸಾರ್ವಜನಿಕ ಗಣೇಶೋತ್ಸವದ ಒಗ್ಗಟ್ಟಿನ ಸಂದೇಶವನ್ನು ಸಾರಿದರು.ಗಣ್ಯರ ಉಪಸ್ಥಿತಿ:
ಹರಿಹರದಲ್ಲಿ ೭ನೇ ವರ್ಷದ ಹಿಂದೂ ಮಹಾಗಣಪತಿ ಮಹೋತ್ಸವಕ್ಕೆ ಚಾಲನೆ: ಗೋಪೂಜೆ ಹಾಗೂ ಹಂದರಕಂಬ ಪೂಜೆ ನೆರವೇರಿಕೆ
ಹರಿಹರ: ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಇಂದು ನಗರದ ಪ್ರಸಿದ್ಧ ಪೇಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ೭ನೇ ವರ್ಷದ ಹಿಂದೂ ಮಹಾಗಣಪತಿ ಮಹೋತ್ಸವಕ್ಕೆ ಭಕ್ತಿಭಾವದಿಂದ ಚಾಲನೆ ನೀಡಲಾಯಿತು.ಶ್ರೀ ಬಾಲಯೋಗಿ ಜಗಧೀಶ್ವರ ಮಹಾಸ್ವಾಮಿಗಳು ಹಾಗೂ ಹಿಂದೂ ಮಹಾಗಣಪತಿ ಸಮಿತಿಯವರ ನೇತೃತ್ವದಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಗೋಪೂಜೆ ಮತ್ತು ಹಂದರಕಂಬ ಪೂಜೆಯನ್ನು ಅತ್ಯಂತ ಶ್ರದ್ಧಾಭಕ್ತಿಗಳಿಂದ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಮುಖರು ಮಾತನಾಡಿ, ಹಬ್ಬದ ಮಹತ್ವ ಹಾಗೂ ಸಾರ್ವಜನಿಕ ಗಣೇಶೋತ್ಸವದ ಒಗ್ಗಟ್ಟಿನ ಸಂದೇಶವನ್ನು ಸಾರಿದರು.ಗಣ್ಯರ ಉಪಸ್ಥಿತಿ:ಈ ಗಣೇಶ ಮಹೋತ್ಸವದ ಧಾರ್ಮಿಕ ವಿಧಿವಿಧಾನಗಳ ಸಂದರ್ಭದಲ್ಲಿ ಪ್ರಮುಖ ಮುಖಂಡರು ಹಾಗೂ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.ಮಾಜಿ ಶಾಸಕರಾದ ಹೆಚ್. ಶಿವಶಂಕರಹಿಂದೂ ಮಹಾಗಣಪತಿ ಸಮಿತಿಯ ಗೌರವಾಧ್ಯಕ್ಷರಾದ ಶಶಿಕುಮಾರ್ ಮೆಹರ್ವಾಡೆಸಮಿತಿಯ ಅಧ್ಯಕ್ಷರಾದ ಸುರೇಶ್ ಪೈಲ್ವಾನ್ ಚಂದಾಪುರಗ್ರಾಮಾಂತರ ಅಧ್ಯಕ್ಷರಾದ ಎಂ. ಪಿ. ಲಿಂಗರಾಜ್ನಗರ ಅಧ್ಯಕ್ಷರಾದ ರಾಜು ರೋಕಡೆಮಾಜಿ ದೂಡ ಅಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್ಮಾಜಿ ಜಿಲ್ಲಾ ಉಪಾಧ್ಯಕ್ಷರಾದ ಬಾತಿ ಚಂದ್ರಶೇಖರ್ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಾತಿ ವಿರೇಶ್ನಗರ ಪ್ರಧಾನ ಕಾರ್ಯದರ್ಶಿ ಸಂತೋಷ್ ಗುಡಿಮನಿ ಹಾಗೂ ಗಿರೀಶ್ ಹಳ್ಳದಕೇರಿಮಾಜಿ ನಗರಸಭಾ ಸದಸ್ಯರಾದ ಆಟೋ ಹನುಮಂತಪ್ಪಪತ್ರಕರ್ತರ ಸಮಿತಿಯ ಅಧ್ಯಕ್ಷರಾದ ಸುಧಾಕರ್ಪ್ರಮುಖರಾದ ಸ್ವಾತಿಹನುಮಂತಪ್ಪ, ಚಂದ್ರಶೇಖರ ಪೂಜಾರ್, ರಟ್ಟೀಹಳ್ಳಿ ಮಂಜುನಾಥ್, ಚಂದ್ರಕಾಂತ್ ಕುಂಬಳೂರು, ಚಿದಾನಂದ ಕಂಚಿಕೆರೆ.ಇವರೊಂದಿಗೆ ಹಿಂದೂ ಮಹಾಗಣಪತಿ ಸಮಿತಿಯ ಎಲ್ಲಾ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಮುಖಂಡರು ಹಾಗೂ ಮಹಿಳಾ ಮುಖಂಡರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.