Uncategorized

ಹರಿಹರ: ವಸತಿ ಶಾಲೆಗೆ ಆಹಾರ ಧಾನ್ಯ ವಿತರಿಸಿ ಮಾನವೀಯತೆ ಮೆರೆದ ಟಾಪ್‌ಲೈನ್ ಇಂಟಿಗ್ರೇಟೆಡ್ ಪ್ರೈವೇಟ್ ಲಿಮಿಟೆಡ್ ಮುಖ್ಯಸ್ಥರಾದ ದರ್ಶನ್ ಮತ್ತು ಸಹ ಊದೋಗಿಗಳು

ಶಾಲೆಗೆ ಅಗತ್ಯವಿರುವ ಅಕ್ಕಿ, ಬೇಳೆ ಸೇರಿದಂತೆ ವಿವಿಧ ದಿನಸಿ ಸಾಮಗ್ರಿಗಳನ್ನು ಸಂಸ್ಥೆಯ ಪದಾಧಿಕಾರಿಗಳಿಗೆ ಹಸ್ತಾಂತರಿಸಲಾಯಿ

ಹರಿಹರ: ವಸತಿ ಶಾಲೆಗೆ ಆಹಾರ ಧಾನ್ಯ ವಿತರಿಸಿ ಮಾನವೀಯತೆ ಮೆರೆದ ಟಾಪ್‌ಲೈನ್ ಇಂಟಿಗ್ರೇಟೆಡ್ ಪ್ರೈವೇಟ್ ಲಿಮಿಟೆಡ್ ಮುಖ್ಯಸ್ಥರಾದ ದರ್ಶನ್ ಮತ್ತು ಸಹ ಊದೋಗಿಗಳು
ಹರಿಹರ: ಹರಿಹರ ವ್ಯಾಪ್ತಿಯ ಅಮರಾವತಿ ದಲ್ಲಿರುವ ಮರಳು ಸಿದ್ಧೇಶ್ವರ ಬುದ್ಧಿಮಾಂದ್ಯ ವಿಷೇಶ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ದರ್ಶನ್ ಹಾಗೂ ಅವರ ಸಹ ಸಂಘಟಕರು ಆಹಾರ ಧಾನ್ಯಗಳನ್ನು ದೇಣಿಗೆಯಾಗಿ ನೀಡುವ ಮೂಲಕ ಸಮಾಜಕ್ಕೆ ಮಾದರಿಯಾದ ಮಾನವೀಯ ಕಾರ್ಯ ಮಾಡಿದ್ದಾರೆ. ಬುದ್ಧಿಮಾಂದ್ಯ ವಿಷೇಶ ವಸತಿ ಶಾಲೆಯಲ್ಲಿ ಆಶ್ರಯ ಪಡೆದಿರುವ ಆರ್ಥಿಕವಾಗಿ ಹಿಂದುಳಿದ ಮತ್ತು ಗ್ರಾಮೀಣ ಭಾಗದ ಮಕ್ಕಳ ದೈನಂದಿನ ಆಹಾರದ ಅಗತ್ಯವನ್ನು ಮನಗಂಡು, ಈ ಧಾನ್ಯ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶಾಲೆಗೆ ಅಗತ್ಯವಿರುವ ಅಕ್ಕಿ, ಬೇಳೆ ಸೇರಿದಂತೆ ವಿವಿಧ ದಿನಸಿ ಸಾಮಗ್ರಿಗಳನ್ನು ಸಂಸ್ಥೆಯ ಪದಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಟಾಪ್‌ಲೈನ್ ಇಂಟಿಗ್ರೇಟೆಡ್ ಪ್ರೈವೇಟ್ ಲಿಮಿಟೆಡ್ ಮುಖ್ಯಸ್ಥರಾದ ದರ್ಶನ್,
ಬುದ್ಧಿಮಾಂದ್ಯ ವಿಷೇಶ “ವಸತಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಯಾವುದೇ ರೀತಿಯ ಸೌಲಭ್ಯದ ಕೊರತೆಯಾಗಬಾರದು. ಶಿಕ್ಷಣದ ಜೊತೆಗೆ ಪೌಷ್ಟಿಕ ಆಹಾರವೂ ಅಗತ್ಯವಾಗಿದೆ. ನಮ್ಮ ಸಣ್ಣ ಕೊಡುಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲಿ ಎಂಬ ಉದ್ದೇಶದಿಂದ ಈ ಸೇವಾ ಕಾರ್ಯ ಮಾಡಿದ್ದೇವೆ” ಎಂದು ತಿಳಿಸಿದರು.ಮಕ್ಕಳ ಹಸಿವು ನೀಗಿಸುವ ಮತ್ತು ಶಿಕ್ಷಣಕ್ಕೆ ಬೆಂಬಲ ನೀಡುವ ದರ್ಶನ್ ಹಾಗೂ ಅವರ ತಂಡದ ಈ ಶ್ಲಾಘನೀಯ ಕಾರ್ಯಕ್ಕೆ ವಸತಿ ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ಸ್ಥಳೀಯ ಸಾರ್ವಜನಿಕರು ತೀವ್ರ ಪ್ರಶಂಸೆ ವ್ಯಕ್ತಪಡಿಸಿ, ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಈ ಸಮಯದಲ್ಲಿ ಪವನ್, ಮುಸ್ತಫಾ ಅರ್, ಶೇಖ್ ಅಲ್ತಾಫ್ , ನಜೀರ್ ಖರೇಶಿ,ಸೇರಿದಂತೆ ಅನೇಕರು ಉಪಸ್ಥಿತಿರಿದ್ದರು.
ಶೇಖ್ ಅಲ್ತಾಫ್ ಹರಿಹರ

Related Articles

Leave a Reply

Your email address will not be published. Required fields are marked *

Back to top button
Click to listen highlighted text!
error: Content is protected !!