ಮಲೇಬೆನ್ನೂರು: ಗಣೇಶ ಮೆರವಣಿಗೆಯಲ್ಲಿ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಯುವಕರು
ಹಿಂದೂ-ಮುಸ್ಲಿಂ ಬಾಂಧವ್ಯದ ಅಪರೂಪದ ದೃಶ್ಯಗಳು ಕಂಡುಬಂದವು.

ಮಲೇಬೆನ್ನೂರು: ಗಣೇಶ ಮೆರವಣಿಗೆಯಲ್ಲಿ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಯುವಕರು
ವಿಜಯ್ ಪ್ರಭಾಸ್ ನ್ಯೂಸ್ ಮಲೇಬೆನ್ನೂರು: ಧರ್ಮಗಳು ಬೇರೆಯಾದರೂ ನಾವೆಲ್ಲರೂ ಒಂದೇ ಎಂಬ ಸೌಹಾರ್ದತೆಯ ಸಂದೇಶಕ್ಕೆ ಇಲ್ಲಿನ ಎ.ಕೆ. ಕಾಲೋನಿ ಸಾಕ್ಷಿಯಾಗಿದೆ. ಪಟ್ಟಣದ ಎ.ಕೆ. ಕಾಲೋನಿಯಲ್ಲಿ ಇತ್ತೀಚೆಗೆ ನಡೆದ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಹಿಂದೂ-ಮುಸ್ಲಿಂ ಬಾಂಧವ್ಯದ ಅಪರೂಪದ ದೃಶ್ಯಗಳು ಕಂಡುಬಂದವು.
ಗಣೇಶೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಅದ್ದೂರಿ ಮೆರವಣಿಗೆಯಲ್ಲಿ ಸ್ಥಳೀಯ ಮುಸ್ಲಿಂ ಸಮುದಾಯದ ಯುವಕರು ಸ್ವಯಂಪ್ರೇರಣೆಯಿಂದ ಭಾಗವಹಿಸಿ, ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದರು. ಮೆರವಣಿಗೆಯುದ್ದಕ್ಕೂ ಡಿಜೆ ಸದ್ದಿಗೆ ಹಿಂದೂ ಯುವಕರೊಂದಿಗೆ ಹೆಜ್ಜೆ ಹಾಕಿದ ಮುಸ್ಲಿಂ ಯುವಕರಾದ ಶಾಹಿದ್, ಸುಹೇಲ್, ಜಾಫರ್, ಫರ್ಹಾನ್ ಸೇರಿದಂತೆ ಹಲವರು ‘ಗುಡಿ ಡಾನ್ಸ್’ ಮಾಡಿ ಸಾರ್ವಜನಿಕರ ಗಮನ ಸೆಳೆದರು.
“ಧರ್ಮ ಯಾವುದಾದರೇನು, ನಾವೆಲ್ಲರೂ ಒಂದೇ ಊರಿನವರು. ಸೌಹಾರ್ದತೆ ಮತ್ತು ಭಾವೈಕ್ಯತೆಯಿಂದ ಬದುಕುವುದು ನಮ್ಮ ಕರ್ತವ್ಯ” ಎಂದು ಮೆರವಣಿಗೆಯಲ್ಲಿ ಪಾಲ್ಗೊಂಡ ಯುವಕರು ಈ ಸಂದರ್ಭದಲ್ಲಿ ಒಕ್ಕೊರಲಿನಿಂದ ತಿಳಿಸಿದರು.
ಕೋಮು ಸೌಹಾರ್ದತೆ ಸಾರಿದ ಎ.ಕೆ. ಕಾಲೋನಿಯ ಮುಸ್ಲಿಂ ಯುವಕರ ಈ ಕಾರ್ಯಕ್ಕೆ ಮೆರವಣಿಗೆಯಲ್ಲಿದ್ದ ಸಾರ್ವಜನಿಕರು ಹಾಗೂ ಪಟ್ಟಣದಾದ್ಯಂತ ವ್ಯಾಪಕ ಪ್ರಶಂಸೆ ಮತ್ತು ಮೆಚ್ಚುಗೆ ವ್ಯಕ್ತವಾಗುತ್ತಿದೆ.
ವರದಿ ತೌಫೀಕ್ ಉಲ್ಲ ವಿಜಯ್ ಪ್ರಭಾಸ್ ನ್ಯೂಸ್ ಮಲೆಬೇನ್ನೂರು