Welcome to ವಿಜಯ್ ಪ್ರಭಾಸ್ ನ್ಯೂಸ್   Click to listen highlighted text! Welcome to ವಿಜಯ್ ಪ್ರಭಾಸ್ ನ್ಯೂಸ್
Uncategorized

ಮುಸ್ಲಿಂ ಸಮಾಜದ ಹಾಗೂ ಕಾಂಗ್ರೇಸ್ ಪಕ್ಷದ ಮುಖಂಡ ಸೈಯದ್ ಸೈಪುಲ್ಲಾ ಇನ್ನಿಲ್ಲ

ವಿಜಯ್ ಪ್ರಭಾಸ್ ವಾರ್ತೆ

 

ಇವರು ಇಡಿ ಜೀವನವೇ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿರಲ್ಲಿಲ್ಲ. ವಿಧಾನ ಪರಿಷತ್ ಮೆಟ್ಟಿಲು ಸಹ ಹತ್ತಲೇ ಇಲ್ಲ. ಆದ್ರು ಇವರೊಬ್ಬ ಪ್ರಭಾವಿ, ದೊಡ್ಡ ನಾಯಕ. ಅದಕ್ಕೆ ಕಾರಣ ಸಹ ಇದೆ.  ದಾವಣಗೆರೆ ಮುಸ್ಲಿಂ ಸಮಾಜದಲ್ಲಿ ಗೌರವಾನ್ವಿತ ಹಾಗೂ ತೂಕದ  ನಾಯಕ ಸೈಯದ್ ಸೈಪುಲ್ಲಾ. ದಾವಣಗೆರೆ ಮುಸ್ಲಿಂ ಸಮಾಜ  ಅಂತಾ ಮಾತು ಬಂದ್ರೆ ಸೈಯದ್ ಸೈಪುಲ್ಲಾ ಹೆಸರು ಕಡ್ಡಾಯ. ಕಾರಣ ಅವರು ಮಾಡಿದ ಸಾಧನೆ.  ಮುಸ್ಲಿಂ ಅಥವಾ   ಶೋಷಿತ ಸಮಾಜದಲ್ಲಿ ಯಾರಾದ್ರು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗೆ ಹೋದ್ರೆ  ಅವರು ಮಾಡುವ ಮೊದಲ ಕೆಲ್ಸಾ ತಾವಿದ್ದ ಕೆರಿ ಹಾಗೂ ಪ್ರದೇಶ ತೊರೆದು ಸ್ಥಿತಿವಂತರು ಸಾಮಾಜಿಕವಾಗಿ ಉನ್ನತ ಸ್ಥಾನದಲ್ಲಿ ಇರುವ  ಜನ ವಸತಿ ಪ್ರದೇಶಕ್ಕೆ ಸ್ಥಳಾಂತರ ಆಗುತ್ತಾರೆ. ಸೈಪುಲ್ಲಾ ಸ್ಥಿತಿವರಾದ್ರು ತನ್ನನ್ನ ನಂಬಿದ ಜನ ನಡುವೆ ಬದುಕಿದ್ರು. ಸಾವಿರಾರು ಜನರಿಗೆ ಶಿಕ್ಷಣ ಧೀಕ್ಷೆ ಕೊಟ್ಟು ಅನ್ನಕ್ಕೆ ದಾರಿ ಮಾಡಿಕೊಟ್ಟರು. ‌ಕಾನ್ವೆಂಟ್ ನಿಂದ ಪದವಿವರೆಗೆ ಶಿಕ್ಷಣ ನೀಡುವ  ಮಿಲ್ಲತ್ ಎಂಬ  ಹೆಸರಿನ  ಶಿಕ್ಷಣ ಸಂಸ್ಥೆಯ ಮಾಲೀಕ ಸೈಯದ್ ಸೈಫುಲ್ಲಾ.  ಮುಸ್ಲಿಂ ಸಮಾಜ ಜೊತೆಗೆ ಇತರರಿಗೂ ಅಕ್ಷರ ದೀಕ್ಷೆ ಕೊಟ್ಟ ಮಹಾನುಭಾವ. ನೂರಾರು‌ ಜನರಿಗೆ ನೌಕರಿ ಕೊಟ್ಟಿದ್ದಾರೆ. ಇವರ ಪರಿಶ್ರಮ ಫಲವಾಗಿ ಎಷ್ಟೊ ಜನ ಲಕ್ಷಲಕ್ಷ ಸಂಬಳ ಪಡೆಯುವರು ಇವರ ಸಂಸ್ಥೆಯಲ್ಲಿಯೇ ಇದ್ದಾರೆ.   ಜೊತೆಗೆ ಆರ್ಥಿಕ ಚಟುವಟಿಕೆಗೆ ಉತ್ತೇಜನ ನೀಡಲು ಇವರು ಮಾಡಿದ ಮಹತ್ವದ ಕಾರ್ಯ *ಮಿಲ್ಲತ್ ಬ್ಯಾಂಕ್ ಸ್ಥಾಪನೆ*.‌ ದಾವಣಗೆರೆ ಸುತ್ತಾಡುವ ಆಟೋಗಳಿಗೆ ಆರ್ಥಿಕ ಸಹಾಯ ನೀಡಿದ್ದೆ ಸೈಫುಲ್ಲಾ ಅವರ ಮಿಲ್ಲತ್ ಬ್ಯಾಂಕ್.  ಸಿಎಂ ಸಿದ್ದರಾಮಯ್ಯ ಅಹಿಂದಾ ಸ್ಥಾಪನೆ ಮಾಡಿದಾಗ ಅದರ ಕಾರ್ಯದರ್ಶಿ ಇದೆ ಸೈಪುಲ್ಲಾ.  2008 ರಲ್ಲಿ ಇವರಿಗೆ ದಾವಣಗೆರೆ ಉತ್ತರ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್ ಸಿಕ್ಕಿತ್ತು. ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಬಿ ಫಾರ್ಮನಲ್ಲಿದ್ದ ತಮ್ಮ ಹೆಸರು ಅಳಿಸಿ ಅಲ್ಲಿ ಹಾಲಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಹೆಸರು ಬರೆದು ಕಾಂಗ್ರೆಸ್ ಇತಿಹಾಸದಲ್ಲಿ ನಡೆಯದ  ಘಟನೆಯ ರೂವಾರಿ ಸೈಪುಲ್ಲಾ. ಒಂದು ರೀತಿಯಲ್ಲಿ ಜನತಾ ಪರಿವಾರದ ನಾಯಕ. 2013 ರಲ್ಲಿ ಜೆಡಿಎಸ್ ನಿಂದ ಶಾಮನೂರ ವಿರುದ್ಧ ಸ್ಪರ್ಧಿಸಿ ಸೋತಿದ್ದರು ಸೈಪುಲ್ಲಾ. ‌ ನಂತರ
ಕಾಂಗ್ರೆಸ್ ಗೆ ಸೇರ್ಪಡೆ. ಮೊನ್ನೆ ನಡೆದ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಇವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಕಾರಣ  ಇವರು ಆನಾರೋಗ್ಯದಿಂದ ಆಸ್ಪತ್ರೆಯ ಹಾಸಿಗೆ ಮೇಲಿದ್ದರು.  ಅಧಿಕಾರ ಹತ್ತರಕ್ಕೆ ಹೋಗದೇಯೇ ಎನೆಲ್ಲ  ಮಾಡ ಬಹುದು ಎಂಬುದಕ್ಕೆ ಜೀವಂತ  ಸಾಕ್ಷಿ ಸೈಯದ್ ಸೈಪುಲ್ಲಾ. ಹೋಗಿ ಬನ್ನಿ ಸರ್ ಭಗವಂತ ನಿಮ್ಮ ಆತ್ಮಕ್ಕೆ ಶಾಂತಿ ನೀಡಲಿ.

Related Articles

Leave a Reply

Your email address will not be published. Required fields are marked *

Back to top button
error: Content is protected !!
Click to listen highlighted text!