Uncategorized
ರಕ್ತದಾನ ಶಿಬಿರ
ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಇವರ ಸಹಯೋಗದಲ್ಲಿ ಇಂದು ಹರಿಹರದ ಐಟಿಐ ಕಾಲೇಜಿನಲ್ಲಿ ರಕ್ತದಾನ ಶಿಬಿರವನ್ನು ನಡೆಸಲಾಯಿತು.
ದಾವಣಗೆ̧ರೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಇವರ ಸಹಯೋಗದಲ್ಲಿ ಇಂದು ಹರಿಹರದ ಐಟಿಐ ಕಾಲೇಜಿನಲ್ಲಿ ರಕ್ತದಾನ ಶಿಬಿರವನ್ನು ನಡೆಸಲಾಯಿತು.
ವೈದ್ಯಾಧಿಕಾರಿಗಳಾದ ಡಾ.ಪಿ.ಕೆ ಬಸವರಾಜ್ ಶಿಬಿರವನ್ನು ಉದ್ಘಾಟಿಸಿದರು ರಕ್ತದಾನವು ಮಾನವೀಯ ಸೇವೆಯ ಅತ್ಯುತ್ತಮ ರೂಪವಾಗಿದ್ದು, ಪ್ರತಿಯೊಬ್ಬರೂ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಬೇಕು ಎಂದು ತಿಳಿಸಿದರು.
ಶಿಬಿರದಲ್ಲಿ ವಿದ್ಯಾರ್ಥಿಗಳು, ಹಾಗೂ ಉಪನ್ಯಾಸಕರು ಭಾಗವಹಿಸಿದ್ದು 25 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ವೈದ್ಯಕೀಯ ಸಿಬ್ಬಂದಿ ಹಾಗೂ ರಕ್ತ ನಿಧಿ ತಂಡ ಆಪ್ತ ಸಮಾಲೋಚಕ ರಾಜು ಪಿ. ವಿನಾಯಕ.ಆರ್, ಗಿರೀಶ್, ಜ್ಯೋತಿ, ಪದ್ಮ ಬಾಯಿ, ಮಂಜುನಾಥ್ ಹೆಚ್. ಜಯಪ್ರಕಾಶ್ ಕೆ.ಎಸ್ ಕಾಲೇಜಿನ ಪ್ರಾಂಶುಪಾಲರಾದ ಜಯಪ್ಪ ಎಂ. ಅವರು, ಮತ್ತು ವೀರೇಶ್ ಕಿರಿಯ ತರಬೇತಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.