ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ರಡ್ಡೇರಹಟ್ಟಿ ಗ್ರಾಮದ ಅಥಣಿ SSMS ಕಾಲೇಜು ಕಬಡ್ಡಿ ತಂಡಕ್ಕೆ ಜಿಲ್ಲಾಮಟ್ಟದಲ್ಲಿ ದ್ವಿತೀಯ ಸ್ಥಾನ: ರಾಷ್ಟ್ರಮಟ್ಟಕ್ಕೆ ಅನಿತಾ, ಭಾಗ್ಯಶ್ರೀ ಆಯ್ಕೆ!
ರಡ್ಡೇರಹಟ್ಟಿಯ ಎಸ್.ಎಸ್.ಎಂ.ಎಸ್. (SSMS) ಪದವಿಪೂರ್ವ ಕಾಲೇಜಿನ ಬಾಲಕಿಯರ ಕಬಡ್ಡಿ ತಂಡವು ದ್ವಿತೀಯ ಸ್ಥಾನ ಗಳಿಸಿ ಅಭೂತಪೂರ್ವ ಸಾಧನೆ ಮಾಡಿದೆ.

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ರಡ್ಡೇರಹಟ್ಟಿ ಗ್ರಾಮದ ಅಥಣಿ SSMS ಕಾಲೇಜು ಕಬಡ್ಡಿ ತಂಡಕ್ಕೆ ಜಿಲ್ಲಾಮಟ್ಟದಲ್ಲಿ ದ್ವಿತೀಯ ಸ್ಥಾನ: ರಾಷ್ಟ್ರಮಟ್ಟಕ್ಕೆ ಅನಿತಾ, ಭಾಗ್ಯಶ್ರೀ ಆಯ್ಕೆ!
ವಿಜಯ್ ಪ್ರಭಾಸ್ ನ್ಯೂಸ್ ಬೆಳಗಾವಿ ಡ್ಡೇರಹಟ್ಟಿ (ಅಥಣಿ): ಶಾಲಾ ಶಿಕ್ಷಣ ಇಲಾಖೆ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ಆಯೋಜಿಸಿದ್ದ 2026-27ನೇ ಸಾಲಿನ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾಮಟ್ಟದ ಪದವಿಪೂರ್ವ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ರಡ್ಡೇರಹಟ್ಟಿಯ ಎಸ್.ಎಸ್.ಎಂ.ಎಸ್. (SSMS) ಪದವಿಪೂರ್ವ ಕಾಲೇಜಿನ ಬಾಲಕಿಯರ ಕಬಡ್ಡಿ ತಂಡವು ದ್ವಿತೀಯ ಸ್ಥಾನ ಗಳಿಸಿ ಅಭೂತಪೂರ್ವ ಸಾಧನೆ ಮಾಡಿದೆ.
ರಾಷ್ಟ್ರಮಟ್ಟಕ್ಕೆ ಆಯ್ಕೆ:
ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕಾಲೇಜಿನ ಕ್ರೀಡಾಪಟುಗಳಾದ ಕುಮಾರಿ ಅನಿತಾ ಹಾಗೂ ಭಾಗ್ಯಶ್ರೀ ರಾಷ್ಟ್ರಮಟ್ಟದ ಕಬಡ್ಡಿ ಕೂಟಕ್ಕೆ ಆಯ್ಕೆಯಾಗಿದ್ದಾರೆ. ತಂಡದ ಅತ್ಯುತ್ತಮ ಆಟಕ್ಕೆ ರಿಯಾ, ವೇದಾಂತ್, ಭಕ್ತಿ ಹಾಗೂ ದೈಹಿಕ ಶಿಕ್ಷಕಿ/ತರಬೇತುದಾರರಾದ ಶೃತಿ ಸುರೇಶ್ ಪಾಟೀಲ್ ಅವರ ಮಾರ್ಗದರ್ಶನ ಕಾರಣವಾಗಿದೆ.
ವಿಜೇತರಿಗೆ ಅದ್ಧೂರಿ ಸನ್ಮಾನ:
ಸಾಧನೆಗೈದ ಕಾಲೇಜಿನ ಕಬಡ್ಡಿ ತಂಡ ಹಾಗೂ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರನ್ನು ಗ್ರಾಮದಲ್ಲಿ ಸನ್ಮಾನಿಸಲಾಯಿತು. ಬಿಜೆಪಿ ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷರು ಹಾಗೂ ಸಮಾಜಸೇವಕರು ಶ್ರೀ ಸರಸ್ವತಿ ನ್ಯಾಮಗೌಡ ಭಾಗವಹಿಸಿ ವಿಜೇತ ಕ್ರೀಡಾಪಟುಗಳಿಗೆ ಸನ್ಮಾನ ಮಾಡಿ ಗೌರವಿಸಿ, ರಾಷ್ಟ್ರಮಟ್ಟದಲ್ಲೂ ಉತ್ತಮ ಸಾಧನೆ ತೋರಲಿ ಎಂದು ಶುಭ ಹಾರೈಸಿದರು.
ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಮುಖಂಡರು , ವೀರಗೌಡ, ಪ್ರಿಯಾಂಕಾ, ಬಿಜೆಪಿ ತಾಲೂಕು ಘಟಕದ ಮಹಿಳಾ ಕಾರ್ಯಕರ್ತರು, ಪ್ರಮುಖ ಪದಾಧಿಕಾರಿ ಗೀತಾ, ಗ್ರಾಮದ ಹಿರಿಯ ಮುಖಂಡರು, ಊರಿನ ಗ್ರಾಮಸ್ಥರು, ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದು ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ವರದಿ ಮಹೇಶ್ ಶರ್ಮಾ