ಹಾವೇರಿ: ಹಾವೇರಿ ನಗರದ ಕಾಗಿನೇಲೆ ರಸ್ತೆ ಬಳಿಯ ಕನಕ ದಾಸ ವೃತ್ತವನ್ನು ಸಮಗ್ರಹ ಅಭಿವೃದ್ದಿಗೊಳಿಸಿ ತಿಂಗಳೊಳಗೆ ದಾಸ ಶ್ರೇಷ್ಠ ಕನಕದಾಸ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವದೆಂದು ಹಾವೇರಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಎಫ್.ಎನ್ ಗಾಜೀಗೌಡರ ತಿಳಿಸಿದರು.
ಇಲ್ಲಿಯ ಪ್ರವಾಸ ಮಂದಿರದಲ್ಲಿ ಕಾಗಿನೇಲೆ ಶ್ರೀ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದ ಪುರಿ ಮಹಾಸ್ವಾಮಿಗಳ ಸಮ್ಮುಖದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಈ ವಿಷಯ ತಿಳಿಸಿದ ಅವರು, ವೃತ್ತದ ಅಭಿವೃದ್ದಿಗಾಗಿ ನಗರಾಭಿವೃದ್ದಿ ಪ್ರಾಧಿಕಾರವು 25, ಲಕ್ಷ ರೂಪಾಯಿ ಖರ್ಚು ಮಾಡುತ್ತಿದೆ, ಇನ್ನು ಕನಕದಾಸರ ಮೂರ್ತಿಗಾಗಿ ನಗರದ ಗಣ್ಣಿರುಗಳು ಸಹಾಧನವನ್ನು ನೀಡುತ್ತಿದ್ದಾರೆಂದು ಸಭೆಗೆ ವಿವಹರಿಸಿದರು.
ಈಗಾಗಲೆ ಎಸ್ಕಾಂ ಅಧಿಕಾರಿಗಳು, ಲೋಕೊಪಯೋಗಿ ಇಲಾಖೆಯ ಅಧಿಕಾರಿಗಳು, ನಗರಸಭೆ ಅಧಿಕಾರಿಗಳು ಮತ್ತು ನಗರಾಭಿವೃದ್ದಿ ಪ್ರಾಧಿಕಾರದ ಇಂಜನಿಯರ್ ವೃತ್ತದ ಮತ್ತು ಮೂರ್ತಿ ಪ್ರತಿಷ್ಠಾಪನ ಸ್ಥಳನ್ನು ಪರಿಶೀಲನೆಯನ್ನು ಮಾಡಿದ್ದಾರೆ, ಮೂರ್ತಿ ಪ್ರತಿಷ್ಠಾನೆಗೆ ಶ್ರೀಕನಕದ ಕುರಿ ಮತ್ತು ಉಣ್ಣಿ ನೇಕಾರರ ಸಹಕಾರಿ ಸಂಘದವರು ಅಗತ್ಯ ಜಾಗವನ್ನು ಬಿಟ್ಟು ಕೋಡಲು ಒಪ್ಪಿಗೆ ನೀಡಿದ್ದಾರೆಂದಂದು ಎಸ್.ಎಫ್ ಎನ್ ಗಾಜೀಗೌಡರ ತಿಳಿಸಿದರು.
ಈ ಸಮಾಲೋಚನ ಸಭೆಯಲ್ಲಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಸಂಜೀವಕುಮಾರ ನಿರಲಗಿ, ಅಫರ್ ಜಿಲ್ಲಾಧಿಕಾರಿ ನಾಗರಾಜ, ಪತ್ರಕರ್ತ ನಿಂಗಪ್ಪ ಚಾವಡಿ ಉಪಸ್ಥೀತರಿದ್ದರು.