ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಶಾಂತಿ ಸೌಹಾರ್ದ ಸಭೆ
ಸಭೆಯಲ್ಲಿ ಉಪ ತಹಶೀಲ್ದಾರ್ ವೈ. ಯೋಗೇಶ್, ಪುರಸಭೆ ಮುಖ್ಯಾಧಿಕಾರಿ ರವಿಪ್ರಕಾಶ್, ಸಿಪಿಐ ಸುರೇಶ್ ಸಗರಿ, ಮತ್ತು ಪಿಎಸ್ಐ ಹಾರೂನ್ ಅಖ್ತರ್ ಉಪಸ್ಥಿತರಿದ್ದು ಸಾರ್ವಜನಿಕರಿಗೆ ಸೂಕ್ತ ಮಾರ್ಗದರ್ಶನ ನೀಡಿದರು.
ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಶಾಂತಿ ಸೌಹಾರ್ದ ಸಭೆ
ಮಲೇಬೆನ್ನೂರು: ಮುಂಬರುವ ಗೌರಿ-ಗಣೇಶ ಹಬ್ಬವನ್ನು ಶಾಂತಿ, ಸೌಹಾರ್ದತೆ ಹಾಗೂ ಸಡಗರದಿಂದ ಆಚರಿಸುವ ಉದ್ದೇಶದಿಂದ ಮಲೇಬೆನ್ನೂರು ಪೊಲೀಸ್ ಠಾಣಾ ಆವರಣದಲ್ಲಿ ಇತ್ತೀಚೆಗೆ ಶಾಂತಿ ಸೌಹಾರ್ದ ಸಭೆಯನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.
ದಾವಣಗೆರೆ ಗ್ರಾಮಾಂತರ ಉಪವಿಭಾಗದ ಮಾನ್ಯ ಡಿವೈಎಸ್ಪಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯು, ಹರಿಹರ ವೃತ್ತದ ಮಾನ್ಯ ಸಿಪಿಐ ಹಾಗೂ ಮಲೇಬೆನ್ನೂರು ಪೊಲೀಸ್ ಠಾಣೆಯ ಪಿಎಸ್ಐ ಅವರ ನೇತೃತ್ವದಲ್ಲಿ ಜರುಗಿತು. ಸಭೆಯಲ್ಲಿ ಮಲೇಬೆನ್ನೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮುಕ್ತವಾಗಿ ಪಾಲ್ಗೊಂಡು ಹಬ್ಬದ ಯಶಸ್ವಿ ಆಚರಣೆಗೆ ಹಲವು ಮಹತ್ವದ ಸಲಹೆಗಳನ್ನು ನೀಡಿದರು.
ಗಣ್ಯರ ಉಪಸ್ಥಿತಿ:
ಸಭೆಯಲ್ಲಿ ಉಪ ತಹಶೀಲ್ದಾರ್ ವೈ. ಯೋಗೇಶ್, ಪುರಸಭೆ ಮುಖ್ಯಾಧಿಕಾರಿ ರವಿಪ್ರಕಾಶ್, ಸಿಪಿಐ ಸುರೇಶ್ ಸಗರಿ, ಮತ್ತು ಪಿಎಸ್ಐ ಹಾರೂನ್ ಅಖ್ತರ್ ಉಪಸ್ಥಿತರಿದ್ದು ಸಾರ್ವಜನಿಕರಿಗೆ ಸೂಕ್ತ ಮಾರ್ಗದರ್ಶನ ನೀಡಿದರು.
ಇವರೊಂದಿಗೆ ಹರಳಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ್, ಅದಾಪುರ ವೀರೇಶ್, ಪುರಸಭೆ ಸದಸ್ಯರುಗಳಾದ ಷಾ ಅಬ್ರಾರ್, ಕೆ.ಜಿ. ಲೋಕೇಶ್, ಶಬ್ಬೀರ್ ಖಾನ್, ಜಾಮಿಯಾ ಮಸ್ಜಿದ್‌ನ ನೂತನ ಅಧ್ಯಕ್ಷ ಯೂಸುಫ್ ಖಾನ್, ಸುಲ್ತಾನ್, ಹಿಂದೂ ಮಹಾಸಭಾ ಗಣಪತಿ ಸಮಿತಿ ಅಧ್ಯಕ್ಷ ಅಶೋಕ್, ಪೂಜಾರ್ ರಾಜು, ನಯಾಜ್ ಸೇರಿದಂತೆ ವಿವಿಧ ಗ್ರಾಮಗಳ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಒಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಪತ್ರಿಕಾ ಮಿತ್ರರು ಸಭೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಸಹಾಯಕ ಪೊಲೀಸ್ ಉಪನಿರೀಕ್ಷಕ (ಎಎಸ್‌ಐ) ಶ್ರೀನಿವಾಸ್ ಡಿ.ಟಿ. ಅವರು ಅಚ್ಚುಕಟ್ಟಾಗಿ ನಿರೂಪಿಸಿದರು. ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ಮುಖಂಡರು ಹಬ್ಬವನ್ನು ಸೌಹಾರ್ದಯುತವಾಗಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಆಚರಿಸಲು ಒಮ್ಮತದ ನಿರ್ಧಾರ ಕೈಗೊಂಡರು.
ತೌಫೀಕವುಲ್ಲ ವಿಜಯ್ ಪ್ರಭಾಸ್ ನ್ಯೂಸ್ ಕನ್ನಡ ಮಲೆಬೇನ್ನೂರು