Uncategorized
ಶಾಲೆಯ ಋಣ ತೀರಿಸಿದ ಹಳೆ ವಿದ್ಯಾರ್ಥಿಗಳು: ಗ್ರಾಮೀಣ ಶಾಲೆಯ ಮಕ್ಕಳಿಗೆ ಕಂಪ್ಯೂಟರ್, ಡೆಸ್ಕ್ ಕೊಡುಗೆ
ಹಳೇ ವಿದ್ಯಾರ್ಥಿಗಳು ತಾವು ಓದಿದ ಶಾಲೆಯ ಋಣ ತೀರಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಶಾಲೆಯ ಋಣ ತೀರಿಸಿದ ಹಳೆ ವಿದ್ಯಾರ್ಥಿಗಳು: ಗ್ರಾಮೀಣ ಶಾಲೆಯ ಮಕ್ಕಳಿಗೆ ಕಂಪ್ಯೂಟರ್, ಡೆಸ್ಕ್ ಕೊಡುಗೆ
ವಿಜಯ್ ಪ್ರಭಾಸ್ ನ್ಯೂಸ್ ಬೆಳಗಾವಿ ಅಥಣಿ: ತಾಲೂಕಿನ ಕಾಗವಾಡ ತಾಲೂಕು ವ್ಯಾಪ್ತಿಯ ಮೊಳೆ ಗ್ರಾಮದ ಬಸವ ನಗರ ತೋಟದ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ಹಳೇ ವಿದ್ಯಾರ್ಥಿಗಳು ತಾವು ಓದಿದ ಶಾಲೆಯ ಋಣ ತೀರಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಸುಮಾರು 70 ವರ್ಷಗಳ ಸುದೀರ್ಘ ಅವಧಿಯ ನಂತರ ಸಂಘಟಿತರಾದ ಶಾಲೆಯ ಹಳೆ ವಿದ್ಯಾರ್ಥಿಗಳೆಲ್ಲರೂ ಒಟ್ಟಾಗಿ ಸೇರಿ, ಕಳೆದ ಜೂನ್ 16, 2024 ರಂದು “ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ಹಾಗೂ ಗುರುವಂದನಾ” ಕಾರ್ಯಕ್ರಮವನ್ನು ಅತ್ಯಂತ ವಿಜ್ರಂಭಣೆಯಿಂದ ಆಚರಿಸಿದ್ದರು. ಈ ಸ್ನೇಹ ಮಿಲನ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದ ಬಳಿಕ, ಅದರಲ್ಲಿ ಉಳಿಕೆಯಾದ ಹಣವನ್ನು ಸದುಪಯೋಗ ಪಡಿಸಿಕೊಳ್ಳಲು ಹಳೇ ವಿದ್ಯಾರ್ಥಿಗಳು ನಿರ್ಧರಿಸಿದ್ದರು.
ತಮ್ಮ ಶಾಲೆಯ ಮುಂದಿನ ಪೀಳಿಗೆಯ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಉಳಿಕೆ ಹಣದಲ್ಲಿ 30 ಕಬ್ಬಿಣದ ಸುಸಜ್ಜಿತ ಡೆಸ್ಕ್‌ಗಳು ಹಾಗೂ 2 ಗಣಕಯಂತ್ರಗಳನ್ನು (ಕಂಪ್ಯೂಟರ್) ಶಾಲೆಗೆ ಕೊಡುಗೆಯಾಗಿ ನೀಡಿದ್ದಾರೆ.
ಇಂದಿನ ಅತ್ಯಂತ ಸ್ಪರ್ಧಾತ್ಮಕ ಮತ್ತು ತಂತ್ರಜ್ಞಾನದ ಜಗತ್ತಿನಲ್ಲಿ ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಕಂಪ್ಯೂಟರ್ ಜ್ಞಾನ ಹಾಗೂ ಡಿಜಿಟಲ್ ಶಿಕ್ಷಣ ಪಡೆಯುವುದು ಅತ್ಯಂತ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಹಳೆ ವಿದ್ಯಾರ್ಥಿಗಳು ನೀಡಿರುವ ಗಣಕಯಂತ್ರಗಳು ಹಾಗೂ ಪೀಠೋಪಕರಣಗಳು ವಿದ್ಯಾರ್ಥಿಗಳ ದೈನಂದಿನ ಅಭ್ಯಾಸಕ್ಕೆ ಬಹುದೊಡ್ಡ ನೆರವಾಗಲಿವೆ. ಹಳೇ ವಿದ್ಯಾರ್ಥಿಗಳ ಈ ಉದಾತ್ತ ಮತ್ತು ಶ್ಲಾಘನೀಯ ಸೇವೆಗೆ ಶಾಲಾ ಸಿಬ್ಬಂದಿ ವರ್ಗ, ಪೋಷಕರು ಹಾಗೂ ಸಾರ್ವಜನಿಕ ವಲಯದಿಂದ ವ್ಯಾಪಕ ಶ್ಲಾಘನೆ ಮತ್ತು ಮೆಚ್ಚುಗೆ ವ್ಯಕ್ತವಾಗಿದೆ.

ಮಹೇಶ್ ಶರ್ಮಾ ಬೆಳಗಾವಿ