ಮಲೇಬೆನ್ನೂರು: ಆಟೋ-ಓಮಿನಿ ನಡುವೆ ಭೀಕರ ಅಪಘಾತ; ಚಾಲಕರು ಪ್ರಾಣಾಪಾಯದಿಂದ ಪಾರು
ಸೇತುವೆ ಬಳಿ ಮುಖಾಮುಖಿ ಡಿಕ್ಕಿಯಾದ ವಾಹನಗಳು; ಸ್ಥಳಕ್ಕೆ ಪಿ.ಎಸ್.ಐ ಹಾರೂನ್ ಅಖ್ತರ್ ಭೇಟಿ.

ಮಲೇಬೆನ್ನೂರು: ಆಟೋ-ಓಮಿನಿ ನಡುವೆ ಭೀಕರ ಅಪಘಾತ; ಚಾಲಕರು ಪ್ರಾಣಾಪಾಯದಿಂದ ಪಾರು
ವಿಜಯ್ ಪ್ರಭಾಸ್ ನ್ಯೂಸ್ ಮಲೇಬೆನ್ನೂರು: ಪಟ್ಟಣದ ಆಶ್ರಯ ಕಾಲೋನಿ ರಸ್ತೆಯಲ್ಲಿ ಆಟೋ ಮತ್ತು ಓಮಿನಿ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಚಾಲಕರಿಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.
ಪಟ್ಟಣದ ಆಶ್ರಯ ಕಾಲೋನಿಗೆ ಹೋಗುವ ರಸ್ತೆಯ ಮಧ್ಯೆ ಇರುವ ಭದ್ರಾ ಚಾನಲ್ ಸೇತುವೆಯ ಹತ್ತಿರ ಈ ಅಪಘಾತ ಸಂಭವಿಸಿದೆ. ಚಲಿಸುತ್ತಿದ್ದ ಅಪ್ಪೆ ಆಟೋ ಮತ್ತು ಓಮಿನಿ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಅಪಘಾತದ ರಭಸಕ್ಕೆ ಎರಡೂ ವಾಹನಗಳು ತೀವ್ರವಾಗಿ ಜಖಂಗೊಂಡಿವೆ. ಆದರೆ, ವಾಹನಗಳಲ್ಲಿದ್ದ ಚಾಲಕರಿಬ್ಬರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಮಲೇಬೆನ್ನೂರು ಪೊಲೀಸ್ ಠಾಣೆಯ ಪಿ.ಎಸ್.ಐ ಹಾರೂನ್ ಅಖ್ತರ್ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತದನಂತರ ಜಖಂಗೊಂಡಿದ್ದ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಈ ಘಟನೆಗೆ ಸಂಬಂಧಿಸಿದಂತೆ ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ವರದಿ ತೌಫೀಕ್ ಉಲ್ಲ ವಿಜಯ್ ಪ್ರಭಾಸ್ ಮಲೇಬೆನ್ನೂರು.