ಸರ್ವರೂ ಮೆಚ್ಚುವಂಥಹ ಸಂವಿದಾನ ನಮ್ಮ ಸಂವಿದಾನವಾಗಿದೆ ಎಂದು ತಹಶೀಲ್ದಾರ ಜಿ.ಸಂತೋಷಕುಮಾರ್ ಡಾ| ಬಾಬಾರವರ ಗುಣಗಾನ
ವಿಜಯ್ ಪ್ರಭಾಸ್ ವಾರ್ತೆ
ವಿಜಯ್ ಪ್ರಭಾಸ್ ವಾರ್ತೆ
ಹರಿಹರ ಏ ೧೪ : ಪ್ರಪಂಚದ ಅನೇಕ ದೇಶಗಳ
ಸಂವಿದಾನವನ್ನು ಅದ್ಯಯನ ಮಾಡಿದ್ದ ಡಾ| ಬಾಬಾ ಸಾಹೇಬ ಅಂಬೇಡ್ಕರವರು,
ಭಾರತಕ್ಕೆ ಉತ್ತಮ ಸಂವಿದಾನವನ್ನು ನೀಡಿದ್ದು, ದೇಶದ ಸರ್ವರೂ
ಮೆಚ್ಚುವಂಥಹ ಸಂವಿದಾನ ನಮ್ಮ ಸಂವಿದಾನವಾಗಿದೆ ಎಂದು ತಹಶೀಲ್ದಾರ
ಜಿ.ಸಂತೋಷಕುಮಾರ್ ಡಾ| ಬಾಬಾರವರ ಗುಣಗಾನ ಮಾಡಿದರು,
ತಾಲೂಕು ಆಡಳಿತ, ರಾಷ್ಟಿçÃಯ ಹಾಗೂ ನಾಡ ಹಬ್ಬಗಳ ಆಚರಣಾ
ಸಮಿತಿ, ತಾಲೂಕು ಪಂಚಾಯತ, ನಗರಸಭೆ, ಸಮಾಜ ಕಲ್ಯಾಣ ಇಲಾಖೆ
ಸಂಯುಕ್ತಾಶ್ರಯದಲ್ಲಿ ನಗರದ ಬಸ್ ನಿಲ್ದಾಣದ ಹತ್ತಿರದ ಗುರು
ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ, ಭಾರತ ರತ್ನ ಸಂವಿಧಾನ ಶಿಲ್ಪಿ ಡಾ| ಬಿ.ಆರ್
ಅಂಬೇಡ್ಕರ್ ರವರ ೧೩೫ನೇ ಜನ್ಮ ದಿನಾಚರಣೆ ಹಾಗೂ ಭಾರತದ ಮಾಜಿ ಉಪ
ಪ್ರಧಾನಿ, ಹಸಿರು ಕ್ರಾಂತಿಯ ಹರಿಕಾರ, ಡಾ| ಬಾಬು ಜಗಜೀವನ್ ರಾಂ ರವರ ೧೧೯ನೇ
ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅವರು
ಮಾತನಾಡಿದರು.
ಡಾ| ಬಿ.ಆರ್ ಅಂಬೇಡ್ಕರ್ ಅವರ ೧೩೫ನೇ ಹಾಗೂ ಡಾ| ಬಾಬು ಜಗಜೀವನರಾಂ
ರವರ ೧೧೯ ನೇ ಜನ್ಮ ದಿನಾಚರಣೆ ನಿಮಿತ್ತ, ಈ ಹಿಂದೆ ತಹಶೀಲ್ದಾರ ಕಛೇರಿಯಲ್ಲಿ
ಕರೆದಿದ್ದ ಸಭೆಯಲ್ಲಿ ಉಪಸ್ಥಿತರಿದ್ದ ವಿವಿಧ ಸಂಘಟನೆಗಳ ಮುಖಂಡರ,
ಸಮಾಜದ ಮುಖಂಡರ ಸಭೆಯಲ್ಲಿ ನಿರ್ಣಯಿಸಿದಂತೆ ಇಂದು ಡಾ| ಬಿ.ಆರ್ ಅಂಬೇಡ್ಕರ್,
ಜಗಜೀವನ್ ರಾಂ ರವರ ಜನ್ಮ ದಿನಾಚರಣೆಯನ್ನು ಆಚರಿಸುತ್ತಿದ್ದೆವೆ. ದಿ
ನಾಚರಣೆಯ ನಿಮಿತ್ತ ಎಸ್‌ಎಸ್‌ಎಲ್‌ಸಿ, ಪಿಯುಸಿ, ವೃತ್ತಿ ಶಿಕ್ಷಣ ಸೇರಿದಂತೆ ಇತರೆ
ಪರೀಕ್ಷೆಗಳಲ್ಲಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಪ್ರೋತ್ಸಾಹಿಸಿ
ಗೌರವಿಸಿದ್ದೆವೆ ಎಂದು ತಹಶೀಲ್ದಾರ ಹೇಳಿದರು.
ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ ನಗರದ ಹರಿಹರೇಶ್ವರ
ದೇವಸ್ಥಾನದ ಮುಂಭಾಗದಿAದ ನಗರದ ಪ್ರಮುಖ ಬೀದಿಗಳಲ್ಲಿ, ಡಾ| ಬಿ.ಆರ್
ಅಂಬೇಡ್ಕರ್, ಡಾ| ಬಾಬು ಜಗಜೀವನ್ ರಾಂ ಅವರ ಭಾವಚಿತ್ರಗಳ
ಮೇರವಣಿಗೆಯು , ಸಕಲ ವಾದ್ಯ ಮೇಳಗಳೊಂದಿಗೆ ನಡೆಯಿತು.
ಕಾರ್ಯಕ್ರಮದ ಕುರಿತು ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ
ಉಪನ್ಯಾಸಕ ಚನ್ನೇಶ್ವರ ಎ.ಕೆ ಅವರು ಉಪನ್ಯಾಸ ನೀಡಿದರು. ಕಳೆದ ವರ್ಷ
ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಬಿಇಡಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿರುವ ಪರಿಶಿಷ್ಟ
ಜಾತಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ನಿಮಿತ್ತ ನ್ಯಾಯಮೂರ್ತಿ ಎಚ್.ಎನ್ ನಾಗಮೋಹನ ದಾಸ್
ರವರು ವಿದ್ಯಾರ್ಥಿ ಯುವಜನರಿಗಾಗಿ ಬರೆದಿರುವ ಸಂವಿಧಾನ ಓದು ಕೈಪಿಡಿ
ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು. ತಾಲೂಕು ಪಂಚಾಯತ
ಕಾರ್ಯನಿರ್ವಹಣಾಧಿಕಾರಿ ಹೆಚ್.ಬಸವರಾಜ, ಕ್ಷೇತ್ರ ಶಿಕ್ಷಣಾಧಿಕಾರಿ ದುರುಗಪ್ಪ ಡಿ,
ನಗರಸಭೆಯ ಪೌರಾಯುಕ್ತೆ ಈರಮ್ಮ ವಿ, ಸಮಾಜ ಕಲ್ಯಾಣ ಇಲಾಖೆಯ
ಸಹಾಯಕ ನಿರ್ದೇಶಕ ಹನುಮಂತಪ್ಪ ಟಿ ಲಮಾಣಿ, ಕೃಷಿ ಇಲಾಖೆಯ ಸಹಾಯಕ
ನಿರ್ದೇಶಕ ನಟರಾಜ, ತಾಲೂಕು ಆರೋಗ್ಯಾಧಿಕಾರಿ ಡಾ| ಅಬ್ದುಲ್‌ಖಾದರ್, ಹಿಂದುಳಿದ
ವರ್ಗಗಳ ಕಲ್ಯಾಣಾಧಿಕಾರಿ ಆಶ್ಮಾಭಾನು, ಮಹಿಳಾ ಮತ್ತು ಮಕ್ಕಳ
ಕಲ್ಯಾಣಾಧಿಕಾರಿ ಪೂರ್ಣಿಮಾ, ಕಾರ್ಮಿಕ ಅಧಿಕಾರಿ ಕವಿತಾ ಹಾಗೂ ವಿವಿಧ ಸಂಘಟನೆಗಳ ª
ಮುಖಂಡರು, ಸರ್ಕಾರದ ಇಲಾಖೆಗಳ, ನಗರಸಭೆಯ ಸಿಬ್ಬಂದಿಗಳು,
ವಿದ್ಯಾರ್ಥಿಗಳು ಇದ್ದರು.ಕಾರ್ಯಕ್ರಮಕ್ಕೆ ಆಗಮಿಸಿದ್ದ ದಲಿತ ಮುಖಂಡರು,
ಕಾರ್ಯಕ್ರಮವನ್ನು ಭಹಿಸ್ಕರಿಸಿ ಹೊರಗೆ ಬಂದು ಅಂಬೇಡ್ಕರ್ ಪುಥಳಿಗೆ
ಮಾಲಾರ್ಪಣೆ ಮಾಡುವದರೊಂದಿಗೆ, ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸರ್ಕಾರ 2
ಕೋಟಿ ಅನುಧಾನ ನೀಡಿದ್ದಾರೆ. ಅದರಲ್ಲಿ ಈಗಾಗಲೆ 50 ಲಕ್ಷ ಹಣ ಬಂದಿದ್ದು, ಆ
ದುಡ್ಡು ವಾಪಾಸ್ ಹೋಗದಂತೆ ಎಚ್ಚರವಹಿಸಲು ಕೂಡಲೆ ನಗರದ ಹಳೆ
ನ್ಯಾಯಾಲಯದ ಆವರಣದಲ್ಲಿ ನಿಗದಿಪಡಿಸಿರುವ ಸ್ಥಳದಲ್ಲಿ ಅಂಬೇಡ್ಕರ್ ಭವನ
ನಿರ್ಮಿಸಲು ಶಾಸಕರು ಇಂದೇ ಭೂಮಿ ಪೂಜೆ ನಡೆಸಬೇಕೆಂದು ಒತ್ತಾಯಿಸಿ,
ಅಧಿಕಾರಿಗಳ, ಶಾಸಕರ ವಿರುದ್ದ ಕಾರ್ಯಕ್ರಮ ನಡೆಯುತ್ತಿದ್ದ ಗುರು
ಭವನದ ಎದುರು ಪ್ರತಿಭಟಿಸಿ, ಧಿಕ್ಕಾರ ಕೂಗಿ, ಇದೆ ತಿಂಗಳು ದಿ 20 ರೊಳಗಾಗಿ
ಭವನ ನಿರ್ಮಾಣಕ್ಕೆ ಚಾಲನೆ ನೀಡದಿದ್ದರೆ ಹರಿಹರ ಬಂದ್‌ಗೆ ಕರೆ
ನೀಡಲಾಗುವುದೆಂದು ದಲಿತ ಮುಖಂಡರಾದ ಅಣ್ಣಪ್ಪ, ಹನುಮಂತಪ್ಪ,
ಸಂತೋಷ ನೋಟದವರ, ಆಟೋ ಹನುಮಂತಪ್ಪ, ಡಿಎಸ್‌ಎಸ್ ತಾಲೂಕು ಅಧ್ಯಕ್ಷ
ಮಂಜುನಾಥ ಎಂ, ಮುಂತಾದವರು ಪ್ರತಿಭಟಿಸಿ ತಮ್ಮ ಆಕ್ರೋಶ
ವ್ಯಕ್ತಪಡಿಸಿದರು.


ಕಳೆದ ವರ್ಷ ನಡೆದ ಎಸ್ ಎಸ್ ಎಲ್ ಸಿ, ಪಿಯು.ಸಿ, ಪದವಿ
ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳನ್ನು
ಸನ್ಮಾನಿಸಲಾಯಿತು.