Uncategorized

ಕನ್ನಡ ಜಾಗೃತಿ ವೇದಿಕೆ ಮಹಿಳಾ ಘಟಕದಿಂದ ಸ್ಮಿತ್ ಮಚ್ಚರ್ ಶೀಘ್ರ ಚೇತರಿಕೆಗೆ ಹರಿಹರ ಗ್ರಾಮದೇವತೆಗೆ ವಿಶೇಷ ಪೂಜೆ

ಮಹಿಳಾ ಘಟಕದ ನೇತೃತ್ವ: ಈ ವಿಶೇಷ ಪೂಜೆ ಮತ್ತು ಹರಕೆಯನ್ನು ಕನ್ನಡ ಜಾಗೃತಿ ವೇದಿಕೆಯ ಮಹಿಳಾ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು


  • ಕನ್ನಡ ಜಾಗೃತಿ ವೇದಿಕೆ ಮಹಿಳಾ ಘಟಕದಿಂದ ಸ್ಮಿತ್ ಮಚ್ಚರ್ ಶೀಘ್ರ ಚೇತರಿಕೆಗೆ ಹರಿಹರ ಗ್ರಾಮದೇವತೆಗೆ ವಿಶೇಷ ಪೂಜೆ
    ವಿಜಯ್ ಪ್ರಭಾಸ್ ನ್ಯೂಸ್ ಹರಿಹರ: ಕನ್ನಡ ಜಾಗೃತಿ ವೇದಿಕೆಯ ಮಹಿಳಾ ಘಟಕದ ವತಿಯಿಂದ, ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಸ್ಮಿತ್ ಮಚ್ಚರ್ ಅವರು ಬೇಗನೆ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಇಲ್ಲಿನ ಪ್ರಸಿದ್ಧ ಹರಿಹರ ಗ್ರಾಮದೇವತೆಗೆ ವಿಶೇಷ ಪೂಜೆ ಹಾಗೂ ಹರಕೆಯನ್ನು ಸಲ್ಲಿಸಲಾಯಿತು.
    ಸ್ಮಿತ್ ಮಚ್ಚರ್ ಅವರ ಆರೋಗ್ಯ ಪರಿಸ್ಥಿತಿ ಶೀಘ್ರದಲ್ಲೇ ಸುಧಾರಿಸಿ, ಅವರು ಎಂದಿನಂತೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳುವಂತಾಗಲಿ ಎಂದು ವೇದಿಕೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಈ ಸಂದರ್ಭದಲ್ಲಿ ದೇವರಯಲ್ಲಿ ಭಕ್ತಿಪೂರ್ವಕವಾಗಿ ಬೇಡಿಕೊಂಡರು.
    ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಕನ್ನಡ ಜಾಗೃತಿ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕವಿತಾ ಎಸ್. ಪೇಟೆಮಠ್, ದಾವಣಗೆರೆ ಜಿಲ್ಲಾಧ್ಯಕ್ಷರಾದ ವಿಶಾಲಾ ಹನುಮಂತಪ್ಪ ಹಾಗೂ ದಾವಣಗೆರೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ತಿಪ್ಪೇಶ್ ಅವರು ಉಪಸ್ಥಿತರಿದ್ದರು.
    ಇವರೊಂದಿಗೆ ಹರಿಹರ ತಾಲೂಕು ಅಧ್ಯಕ್ಷರಾದ ಪ್ರವೀಣ್ ಕುಮಾರ್ ಗೌಡ, ಹರಿಹರ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾದ ವಿಮಲಾ ಅಂಜನಪ್ಪ, ಹರಪನಹಳ್ಳಿ ತಾಲೂಕು ಅಧ್ಯಕ್ಷರಾದ ಗಂಗಮ್ಮ ಹಿರೇಮಠ್, ವಿಜಯನಗರ ಜಿಲ್ಲಾಧ್ಯಕ್ಷರಾದ ಈರಮ್ಮ, ಹಾಗೂ ಪ್ರಮುಖ ಮುಖಂಡರಾದ ನೇತ್ರಾ, ರೇಣುಕಾ, ನೇತ್ರಾವತಿ, ರೇಖಾ, ಮಮತಾ ಸೇರಿದಂತೆ ವೇದಿಕೆಯ ಹಲವು ಪದಾಧಿಕಾರಿಗಳು ಭಾಗವಹಿಸಿ ಪ್ರಾರ್ಥಿಸಿದರು.
    ವರದಿ ಶೇಖ್ ಅಲ್ತಾಫ್ ವಿಜಯ್ ಪ್ರಭಾಸ್ ನ್ಯೂಸ್ ಹರಿಹರ

Related Articles

Leave a Reply

Your email address will not be published. Required fields are marked *

Back to top button
Click to listen highlighted text!
error: Content is protected !!