Uncategorized

ಹರಿಹರದಲ್ಲಿ ಫುಟ್‌ಪಾತ್ ತೆರವು ಕಾರ್ಯಾಚರಣೆ: ಅಧಿಕಾರಿಗಳ ವಿರುದ್ಧ ಬೀದಿ ಬದಿ ವ್ಯಾಪಾರಿಗಳ ಆಕ್ರೋಶ; ಪಿಎಸ್‌ಐ ಪ್ರವೀಣ್ ಕುಮಾರ್ ಅವರಿಂದ ಸಂಧಾನ

ಬೀದಿ ಬದಿ ವ್ಯಾಪಾರಿಗಳು ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಸ್ಥಳದಲ್ಲೇ ತಮ್ಮ ಅಳಲನ್ನು ತೋಡಿಕೊಂಡರು.

  1. ಹರಿಹರದಲ್ಲಿ ಫುಟ್‌ಪಾತ್ ತೆರವು ಕಾರ್ಯಾಚರಣೆ: ಅಧಿಕಾರಿಗಳ ವಿರುದ್ಧ ಬೀದಿ ಬದಿ ವ್ಯಾಪಾರಿಗಳ ಆಕ್ರೋಶ; ಪಿಎಸ್‌ಐ ಪ್ರವೀಣ್ ಕುಮಾರ್ ಅವರಿಂದ ಸಂಧ

  2. ಹರಿಹರ: ನಗರದ ಪ್ರಮುಖ ರಸ್ತೆಗಳಲ್ಲಿ ನಗರಸಭೆ ಅಧಿಕಾರಿಗಳು ಹಮ್ಮಿಕೊಂಡಿದ್ದ ಫುಟ್‌ಪಾತ್ (ಕಾಲುದಾರಿ) ತೆರವು ಕಾರ್ಯಾಚರಣೆಯು ವ್ಯಾಪಾರಿಗಳ ತೀವ್ರ ಪ್ರತಿರೋಧ ಮತ್ತು ಆಕ್ರೋಶಕ್ಕೆ ಕಾರಣವಾಯಿತು. ತೆರವು ಕಾರ್ಯಾಚರಣೆಯಿಂದ ಕಂಗಾಲಾದ ಬೀದಿ ಬದಿ ವ್ಯಾಪಾರಿಗಳು ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಸ್ಥಳದಲ್ಲೇ ತಮ್ಮ ಅಳಲನ್ನು ತೋಡಿಕೊಂಡರು.ಕಾರ್ಯಾಚರಣೆಯ ಸಂದರ್ಭದಲ್ಲಿ ಒಟ್ಟಿಗೆ ಸೇರಿದ ವ್ಯಾಪಾರಸ್ಥರು, “ನಾವು ಅತ್ಯಂತ ಬಡವರಾಗಿದ್ದು, ಇದೇ ಫುಟ್‌ಪಾತ್ ಮೇಲೆ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ನಮ್ಮ ಸಂಸಾರ ನಡೆಸುತ್ತಿದ್ದೇವೆ. ಈಗ ಏಕಾಏಕಿ ಈ ಕೆಲಸವನ್ನು ಬಿಟ್ಟರೆ ನಾವು ನಮ್ಮ ಕುಟುಂಬದ ಜೀವನ ನಿರ್ವಹಣೆಗೆ ಎಲ್ಲಿಗೆ ಹೋಗಬೇಕು?” ಎಂದು ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ತಮಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಮನವಿ ಮಾಡಿದರು.ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಮಧ್ಯಪ್ರವೇಶಿಸಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI) ಪ್ರವೀಣ್ ಕುಮಾರ್ ಅವರು ವ್ಯಾಪಾರಿಗಳನ್ನು ಸಮಾಧಾನಪಡಿಸಲು ಯತ್ನಿಸಿದರು. ವ್ಯಾಪಾರಸ್ಥರೊಂದಿಗೆ ಮಾತನಾಡಿದ ಅವರು, “ನಿಮಗೆ ತೊಂದರೆ ನೀಡಬೇಕು ಅಥವಾ ನಿಮ್ಮ ಹೊಟ್ಟೆ ಹೊರೆಯನ್ನು ಕಸಿದುಕೊಳ್ಳಬೇಕು ಎಂಬ ಉದ್ದೇಶ ಯಾರಿಗೂ ಇಲ್ಲ. ಸಾರ್ವಜನಿಕರ ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಹೀಗಾಗಿ, ನೀವು ದಿನಾಲೂ ಬೆಳಿಗ್ಗೆ ಬಂದು ಇಲ್ಲಿ ಅಂಗಡಿ ಹಾಕಿ ವ್ಯಾಪಾರ ಮಾಡಿಕೊಳ್ಳಿ, ಆದರೆ ಸಂಜೆ ವ್ಯಾಪಾರ ಮುಗಿದ ನಂತರ ಕಡ್ಡಾಯವಾಗಿ ಇಲ್ಲಿಂದ ನಿಮ್ಮ ಸಾಮಗ್ರಿಗಳನ್ನು ತೆರವುಗೊಳಿಸಿಕೊಂಡು ಹೋಗಬೇಕು” ಎಂದು ತಿಳಿಹೇಳಿ ಸಮಜಾಯಿಷಿ ನೀಡಿದರು.ಪೊಲೀಸ್ ಅಧಿಕಾರಿಗಳ ಈ ಸಮಾಧಾನಕರ ಆಶ್ವಾಸನೆಯ ನಂತರ ವ್ಯಾಪಾರಿಗಳು ಶಾಂತರಾದರಾದರೂ, ತಮ್ಮ ಬದುಕಿಗೆ ಕಾಯಂ ಆದ ಪರ್ಯಾಯ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕೆಂದು ನಗರಸಭೆಗೆ ಒತ್ತಾಯಿಸಿದ್ದಾರೆ.
  3. ವರದಿ ಶೇಖ್ ಅಲ್ತಾಫ್ ವಿಜಯ್ ಪ್ರಭಾಸ್ ನ್ಯೂಸ್ ಹರಿಹರ

Related Articles

Leave a Reply

Your email address will not be published. Required fields are marked *

Back to top button
Click to listen highlighted text!
error: Content is protected !!