ಹರಿಹರದಲ್ಲಿ ‘ಊರಮ್ಮ ದೇವಿ ಬೀದಿ ಬದಿ ವ್ಯಾಪಾರಿಗಳ ಸಂಘ’ ಉದ್ಘಾಟನೆ
ಸಂಘದ ನೂತನ ಪದಾಧಿಕಾರಿಗಳಾಗಿ ಕೆಳಗಿನವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು:
ಹರಿಹರದಲ್ಲಿ ‘ಊರಮ್ಮ ದೇವಿ ಬೀದಿ ಬದಿ ವ್ಯಾಪಾರಿಗಳ ಸಂಘ’ ಉದ್ಘಾಟನೆ
ಹರಿಹರ: ಮರೋಜಿರಾವ್ ಅವರು ಜ್ಯೋತಿ ಬೆಳಗಿಸುವ ಮೂಲಕ ಸಂಘವನ್ನು ಅಧಿಕೃತವಾಗಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕನ್ನಡ ರಕ್ಷಣಾ ವೇದಿಕೆಯ (ಕರವೇ) ತಾಲೂಕು ಅಧ್ಯಕ್ಷರಾದ ರಮೇಶ್ ಮಾನೆ ಹಾಗೂ ನಗರ ಘಟಕದ ಅಧ್ಯಕ್ಷರಾದ ಪ್ರೀತಮ್ ಬಾಬು ಅವರು ಮಾತನಾಡಿ, ಬೀದಿ ಬದಿ ವ್ಯಾಪಾರಿಗಳ ಹಿತರಕ್ಷಣೆ ಮತ್ತು ಸಂಘಟನೆಯ ಪ್ರಾಮುಖ್ಯತೆಯ ಬಗ್ಗೆ ತಿಳಿಹೇಳಿ, ನೂತನ ಸಂಘಕ್ಕೆ ಶುಭ ಹಾರೈಸಿದರು.
ನೂತನ ಪದಾಧಿಕಾರಿಗಳ ಆಯ್ಕೆ:
ಸಂಘದ ನೂತನ ಪದಾಧಿಕಾರಿಗಳಾಗಿ ಕೆಳಗಿನವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು:
ಅಧ್ಯಕ್ಷರು: ಗಣಪತಿ ಕೆ. ಭೂತೆ
ಖಜಾಂಚಿ: ಗಣೇಶ್ ಉಪಾದ್ಯಕ್ಷರು
ಕೊಟ್ರೇಶ್
ಕಾರ್ಯದರ್ಶಿ: ರಘು ಬಿ.
ಈ ಸಂದರ್ಭದಲ್ಲಿ ಕರವೇ ಮುಖಂಡರಾದ ಸಿದ್ದಪ್ಪ ರಂಗಣ್ಣನವರ, ಅಲಿ ಅಕ್ಬರ್,ಸಮಾಜ ಸೇವಕ ಮುಸ್ತಫಾ ಆರ್, ಸೇರಿದಂತೆ ಸಂಘದ ಎಲ್ಲಾ ನೂತನ ಪದಾಧಿಕಾರಿಗಳು, ಸದಸ್ಯರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಉಪಸ್ಥಿತರಿದ್ದರು.
ವರದಿ ಶೇಖ್ ಅಲ್ತಾಫ್ ವಿಜಯ್ ಪ್ರಭಾಸ್ ನ್ಯೂಸ್ ಹರಿಹರ