ಚಂದ್ರಶೇಖರ ಪೂಜಾರ ಮನೆಯ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದೆಂದು ರಾಣಿಬೆನ್ನೂರು ಮಾಜಿ ಶಾಸಕ ಅರುಣಕುಮಾರ ಪೂಜಾರ
ಪಂಚಮಸಾಲಿ ಪೀಠದ ಅಭಿವೃದ್ಧಿಗಾಗಿ ಸರ್ಕಾರ, ಸಮಾಜ, ಭಕ್ತರು ಸೇರಿದಂತೆ ರಾಜ್ಯದ ಸುಮಾರು 8 ಲಕ್ಷಕ್ಕೂ ಅಧಿಕ ಪಂಚಮಸಾಲಿ ಭಂದುಗಳು ಕೊಟ್ಯಾಂತರ ರೂಪಾಯಿ ಹಣವನ್ನು ನೀಡಿದ್ದಾರೆ
ಬೆಳ್ಳೂಡಿ ಏ 14 : ಪಂಚಮಸಾಲಿ ಪೀಠದ ಅಭಿವೃದ್ಧಿಗಾಗಿ ಸರ್ಕಾರ,
ಸಮಾಜ, ಭಕ್ತರು ಸೇರಿದಂತೆ ರಾಜ್ಯದ ಸುಮಾರು 8 ಲಕ್ಷಕ್ಕೂ ಅಧಿಕ
ಪಂಚಮಸಾಲಿ ಭಂದುಗಳು ಕೊಟ್ಯಾಂತರ ರೂಪಾಯಿ ಹಣವನ್ನು ನೀಡಿದ್ದಾರೆ.
ನಾವು ಸತ್ಯವಂತರೆಂದು ಹೇಳಿಕೊಳ್ಳುತ್ತಿರುವ ಟ್ರಸ್ಟಿಗಳು ಆದಷ್ಠುಬೇಗ
ಲೆಕ್ಕವನ್ನು ಕೊಡಬೇಕು. ಇಲ್ಲದಿದ್ದಲ್ಲಿ ಸಮಾಜ ಭಾಂದವರ ಬೆಂಬಲದೊAದಿಗೆ
ಟ್ರಸ್ಟಿಗಳಾದ ಚಂದ್ರಶೇಖರ ಪೂಜಾರ ಮನೆಯ ಎದುರು ಧರಣಿ
ಸತ್ಯಾಗ್ರಹ ನಡೆಸಲಾಗುವುದೆಂದು ರಾಣಿಬೆನ್ನೂರು ಮಾಜಿ ಶಾಸಕ
ಅರುಣಕುಮಾರ ಪೂಜಾರ ಗುಡುಗಿದರು.
ನಗರದ ಹೊರಭಾಗದ ಶಿವಮೊಗ್ಗ-ಹೊಸಪೇಟೆ ರಾಜ್ಯ ಹೆದ್ದಾರಿ ಪಕ್ಕದ
ಪಂಚಮಸಾಲಿ ಗುರು(ಹರ) ಪೀಠದಲ್ಲಿ ಮಂಗಳವಾರ ಸಂಜೆ ಕರೆದಿದ್ದ
ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪೀಠಕ್ಕೆ ಹಣ ನೀಡಿದ ಸಾವಿರಾರು
ಭಕ್ತರಲ್ಲಿ, ಸಮಾಜ ಭಾಂದವರಲ್ಲಿ ನಾನೂ ಸಹ ಒಬ್ಬನಾಗಿದ್ದು,
ನಮ್ಮಂಥವರೆಲ್ಲಾ ನೀಡಿರುವ ಹಣವು ಪೀಠದ ಖಾತೆಗೆ ಜಮೆ ಆಗಿದ್ದು,
ಜಮೇಆಗಿರುವ ಹಣವನ್ನು ಪೀಠದ ಸಮಗ್ರ ಅಭಿವೃದ್ಧಿಗೆಗಾಗಿ ಬಳಸುವ ಬದಲು
ತಮ್ಮ ಸ್ವಂತ ವ್ಯಾಪಾರ ವಹಿವಾಟಿಗಾಗಿ ಟ್ರಸ್ಟಿಗಳು ಬಳಸಿಕೊಂಡಿದ್ದಾರೆ.
ಈ ಕುರಿತು ಹಣನೀಡಿದ ನಾವೆಲ್ಲಾ ಲೆಕ್ಕಾ ಕೊಡಿ ಚಳುವಳಿ ಆರಂಭಿಸಿದ್ದು.
ಕುಂಬಳಕಾಯಿ ಕಳ್ಳನೆಂದರೆ ಹೆಗಲು ಮುಟ್ಟಿಕೊಂಡು ನಾನು
ಪ್ರಮಾಣಿಕನೆಂದು ಹೇಳುವಂತೆ ವರ್ತಿಸುತ್ತಿರುವ, ಹನಗವಾಡಿಯ
ಚಂದ್ರಶೇಖರ ಪೂಜಾರ ನನ್ನವಿರುದ್ದ ಇಲ್ಲಸಲ್ಲದ ಆರೋಪಮಾಡುತ್ತಿದ್ದು.
ತಮ್ಮ ವರ್ತನೆಯನ್ನು ತಿದ್ದಿಕೊಳ್ಳದಿದ್ದಲ್ಲಿ ಮುಂದಿನ ದಿನಮಾನಗಳಲ್ಲಿ
ಅವರ ಮನೆಯ ಎದುರು ಲೆಕ್ಕಕ್ಕಾಗಿ, ನಾನು ವಯಕ್ತಿಕವಾಗಿ ನೀಡಿರುವ
ರೊಕ್ಕಕ್ಕಾಗಿ ಸಮಾಜದ ಭಂದುಗಳ ಬೆಂಬಲದೊಂದಿಗೆ ಪ್ರತಿಭಟನೆಯನ್ನು
ಆರಂಭಿಸುತ್ತೆನೆ ಎಂದು ಮಾಜಿ ಶಾಸಕ ಪೂಜಾರ ಗುಡುಗಿದರು.
ಚಂದ್ರಶೇಖರ ಪೂಜಾರ ನನ್ನ ಸಂಭಂದಿಯಾಗಿದ್ದು ನಾನು ಅವರ
ವಿರುದ್ದ ಎಲ್ಲಿಯೂ ಎಂದಿಗೂ ಮಾತನಾಡಿದವನಲ್ಲ. ಅವರಿಂದಲೇ ಮೂದಲು ನನ್ನ
ವಿರುದ್ದ ದ್ವನಿ ಬಂದಾಗಿನಿಂದಲೇ ನಾನು ಅವರ ವಿರುದ್ದ ದ್ವನಿ ಎತ್ತಿರುವೆ. ನಾನು
ಶಾಸಕನಾಗಿದ್ದಾಗ ನನ್ನ ಹೆಸರಿನಲ್ಲಿಯೇ ಸಾಕಷ್ಠು ಅವ್ಯವಹಾರ ನಡೆಸಿ ಇಂದು
ಚಂದ್ರಶೇಖರ ಪೂಜಾರ ಶ್ರೀಮಂತನಾಗಿದ್ದಾನೆ, ಅದಕ್ಕೆ ನಮ್ಮ ಕ್ಷೆತ್ರದ
ನನ್ನ ಕಾರ್ಯಕರ್ತರೆ ಸಾಕ್ಷಿಯಾಗಿದ್ದಾರೆ.
ನಾವಿಬ್ಬರು ಪರಸ್ಪರ ಬಂಧುಗಳಾಗಿದ್ದು ನಮ್ಮ ವಿರುದ್ದ ಅವರು, ಅವರ
ವಿರುದ್ದ ನಾನು ಮಾತನಾಡುತ್ತಾ ಹೋದರೆ ಜನರು ನೋಡುವರು-
ಕೇಳುವರಾಗುತ್ತಾರೆ. ಇದನ್ನೆಲ್ಲಾ ಬಿಟ್ಟು ಪ್ರಮಾಣಿಕರಾದ ಟ್ರಸ್ಟಿಗಳಿಂದ
ಮೊದಲು ಲೆಕ್ಕಕೊಡಿಸಿ ನಂತರ ನನ್ನ ವಿರುದ್ದ ಮಾತನಾಡಬೇಕೆಮದು
ಚಂದ್ರಶೇಖರ ಪೂಜಾರವರಿಗೆ ಮಾಜಿ ಶಾಸಕ ಅರುಣಕುಮಾರ ಪೂಜಾರ
ಸಮಾಲು ಹಾಕಿದರು. ಶ್ರೀಪೀಠದ ಟ್ರಸ್ಟಿ ಬಾಬಣ್ಣ ಹೊನ್ನಾಳಿ, ದಾಸೋಹ ಸಮಿತಿಯ
ನ್ಯಾಯವಾದಿ ಪ್ರಕಾಶ ಪಾಟೀಲ್, ಕೊಟ್ಟೂರು ಭರಮಗೌಡ ಪಾಟೀಲ, ಕೊಟ್ಟೂರು
ಬಸವರಾಜ, ಅಣ್ಣಪ್ಪ ಪೂಜಾರ, ಮಿಟ್ಲಕಟ್ಟೆ ಸಿದ್ರಾಮಪ್ಪ, ಮಿಟ್ಲಕಟ್ಟೆ
ಪರಮೇಶಪ್ಪ, ನಾಗಪ್ಪ ಹೊಳೆಸಿರಿಗೆರೆ, ಹನುಮಂತಪ್ಪ ಮುದ್ದೇರ,
ವಿರುಪಾಕ್ಷಪ್ಪ ಅನ್ವೇರಿ, ಮಂಜುನಾಥ ಪೂಜಾರ, ಸಿರಿಗೆರೆ ಹನುಮಂತಪ್ಪ ಸೇರಿದಂತೆ ಇತರರಿದ್ದರು.

ಮಠದ ಆವರಣದಲ್ಲಿ ಮಾಜಿ ಶಾಸಕ ಅರುಣಕುಮಾರ
ಪೂಜಾರ ಪತ್ರಿಕಾಗೊಷ್ಠಿ ನಡೆಸಿದರು.