Welcome to ವಿಜಯ್ ಪ್ರಭಾಸ್ ನ್ಯೂಸ್   Click to listen highlighted text! Welcome to ವಿಜಯ್ ಪ್ರಭಾಸ್ ನ್ಯೂಸ್
Uncategorized

! ಭವನ ನಿರ್ಮಾಣಕ್ಕೆ ಸರ್ವರೂ ಸಹಕರಿಸಬೇಕೆಂದು, ರಾಜ್ಯ ಗಣಿ ಮತ್ತು ಭೂ ವಿಜ್ಞಾನ, ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ

ವರದಿ: ಶೇಖ್ ಅಲ್ತಾಫ್ ವಿಜಯ್ ಪ್ರಭಾಸ್ ನ್ಯೂಸ್ ಹರಿಹರ

ವಿಜಯ್ ಪ್ರಭಾಸ್ ವಾರ್ತೆ ಹರಿಹರ , ಏ 28 : ಸಂವಿದಾನ ಶಿಲ್ಪಿ ಡಾ| ಬಾಬಾಸಾಹೇಬ
ಅಂಬೇಡ್ಕರವರ ಭವ್ಯವಾದ ಭವನವನ್ನು ನಗರದ ಹೃದಯ
ಭಾಗದಲ್ಲಿ ಕಟ್ಟಬೇಕೆಂಬುದು, ಹರಿಹರ ನಗರ ಮತ್ತು
ಗ್ರಾಮಾಂತರ ಪ್ರದೇಶದ ಜನರ ಕನಸಾಗಿತ್ತು. ಇಂದು 2 ಕೋಟಿ
ರೂ ಅನುದಾನದಲ್ಲಿ ಡಾ| ಬಿ.ಆರ್ ಅಂಬೇಡ್ಕರ್ ಅವರ ಭವ್ಯವಾದ, ಸುಸಜ್ಜಿತ
ಸಕಲ ಸೌಲಭ್ಯವುಳ್ಳ ಭವನವನ ನಿರ್ಮಾಣ ಮಾಡಲು ಭೂಮಿ ಪೂಜೆ
ಮಾಡಿದ್ದು. ! ಭವನ ನಿರ್ಮಾಣಕ್ಕೆ ಸರ್ವರೂ
ಸಹಕರಿಸಬೇಕೆಂದು, ರಾಜ್ಯ ಗಣಿ ಮತ್ತು ಭೂ ವಿಜ್ಞಾನ, ಜಿಲ್ಲಾ ಉಸ್ತುವಾರಿ
ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಕರೆ ನೀಡಿದರು.
ತಾಲೂಕು ಆಡಳಿತ, ತಾಲೂಕು ಪಂಚಾಯತ, ನಗರಸಭೆ ಹಾಗೂ
ಸಮಾಜ ಕಲ್ಯಾಣ ಇಲಾಖೆ, ದಲಿತ ಸಂಘಟನೆಗಳ ಒಕ್ಕೂಟ ದಿಂದ, ನಗರದ
ಹಳೆ ನ್ಯಾಯಾಲಯದ ಆವರಣದಲ್ಲಿ ಮೀಸಲಿರಿಸಿದ್ದ ಸ್ಥಳದಲ್ಲಿ
ಮಂಗಳವಾರ ಡಾ| ಬಿ.ಆರ್ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಭೂಮಿ
ಪೂಜೆ ನೆರವೇರಿಸಿದ ಅವರು ಮಾತನಾಡಿದರು.
ಈಗಾಗಲೇ ಸರ್ಕಾರದಿಂದ ಭವನ ನಿರ್ಮಾಣಕ್ಕಾಗಿ 2 ಕೋಟಿ ರೂ ಹಣ
ಮಂಜೂರಾಗಿದೆ, ಇಲ್ಲಿ ಭವ್ಯವಾದ ಸುಸಜ್ಜಿತ ಎಲ್ಲಾ ಸೌಕರ್ಯವಿರುವ
ಕಟ್ಟಡ ನಿರ್ಮಾಣವಾಗ ಬೇಕಿದೆ, ಇನ್ನೂ ಹೆಚ್ಚಿನ 5 ಕೋಟಿ ರೂಗಳಲ್ಲಿ
ಭವ್ಯವಾದ, ತಾಲೂಕಿನ ಎಲ್ಲಾ ಸಮುದಾಯದ ಜನರಿಗೆ ಇದರ
ಸದುಪಯೋಗ ವಾಗುವಂಥಹ ಭವನ ನಿರ್ಮಾಣ ಮಾಡೋಣವೆಂದು
ಸಚಿವರು ಸರ್ವರಿಗೂ ಕರೆನೀಡಿದರು.
ಮಾಜಿ ಶಾಸಕ ಎಸ್ ರಾಮಪ್ಪ, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ
ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್ ಬಿ
ಹನುಮಂತಪ್ಪ, ಮಲೆಬೇನ್ನೂರಿನ ವಾಗೀಶ್ ಸ್ವಾಮಿ, ಸಿ ಎನ್ ಹುಲಿಗೆಶ್,
ಗೂತ್ತೂರಿನ ಹಾಲೇಶ್ ಗೌಡ್ರು,ನಗರಸಭೆ ಮಾಜಿ ಸದಸ್ಯ ಎನ್
ರಜನಿಕಾಂತ್, ಮಾದಿಗ ಸಮಾಜದ ಅಧ್ಯಕ್ಷ ಎಂ ಎಸ್ ಆನಂದ ಕುಮಾರ್,
ದಾವಣಗೆರೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸಿದ್ದಲಿಂಗೇಶ್
ಬೇವಿನಮಟ್ಟಿ,ತಹಸೀಲ್ದಾರ್ ಜಿ ಸಂತೋಷ ಕುಮಾರ್, ತಾ, ಪಂ, ಇಓ ಹೆಚ್
ಬಸವರಾಜ್, ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ
ಹನುಮಂತಪ್ಪ ಲಂಬಾಣಿ, ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷ
ಮರಿಯೊಜಿರಾವ್, ಬಿಜೆಪಿ ಮುಖಂಡ ಚಂದ್ರಶೇಖರ ಪೂಜಾರ್, ಹರೀಶ್
ಬಸಪೂರ್, ಮಂಜುನಾಥ್ ಪಾಟೀಲ್ ಶೂಭ ಹಾರೈಸಿದರು.
ಹೆಚ್ ಶಿವಪ್ಪ, ಜಮಲಪ್ಪರ ಸಂತೋಷ, ಬಿ ಎನ್ ರಮೇಶ್,
ಪತ್ರಕರ್ತರ ಸಂಗದ ಅಧ್ಯಕ್ಷ ಹೆಚ್. ಸುದಾಕರ್, ತಿಪ್ಪೇಶ್, ವಿಜಯ
ಕುಮಾರ್, ಸಾರಥಿ ಹೆಚ್ ಹನುಮಂತಪ್ಪ, ಪರಶಪ್ಪ, ಕೊಕ್ಕನೂರಿನ
ಬಸವರಾಜಪ್ಪ, ಹಳ್ಳಿಹಳ್ ಹನುಮಂತಪ್ಪ, ರಾಜನಹಳ್ಳಿ ಎ ಕೆ
ನಾಗೇಂದ್ರಪ್ಪ, ವೈ ರಘುಪತಿ, ಹೆಚ್ ಮಂಜುನಾಥ್, ದೂಳೆಹೊಳೆ ಮಂಜುನಾಥ್ ಇದ್ದರು.
ವರದಿ: ಶೇಖ್ ಅಲ್ತಾಫ್ ವಿಜಯ್ ಪ್ರಭಾಸ್ ನ್ಯೂಸ್ ಹರಿಹರ

Related Articles

Leave a Reply

Your email address will not be published. Required fields are marked *

Back to top button
error: Content is protected !!
Click to listen highlighted text!