Uncategorized

ಹರಿಹರ: ಜೆ.ಸಿ ಬಡಾವಣೆ ಯುವಕರಿಂದ ಕಾಂಗ್ರೆಸ್ ಮುಖಂಡ ಹುಲಗೇಶ್ ಹಾಗೂ ಸಮಾಜ ಸೇವಕ ಆರ್. ಮುಸ್ತಫಾಗೆ ಸನ್ಮಾನ

ಈದ್ ಮಿಲಾದ್ ಹಬ್ಬದ ಸೌಹಾರ್ದತೆಯ ಸಂದೇಶ ಸಾರುವ ನಿಟ್ಟಿನಲ್ಲಿ ಬಡಾವಣೆಯ ಯುವಕರು ಈ ಗೌರವ ಸಮರ್ಪಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಹರಿಹರ: ಜೆ.ಸಿ ಬಡಾವಣೆ ಯುವಕರಿಂದ ಕಾಂಗ್ರೆಸ್ ಮುಖಂಡ ಹುಲಗೇಶ್ ಹಾಗೂ ಸಮಾಜ ಸೇವಕ ಆರ್. ಮುಸ್ತಫಾಗೆ ಸನ್ಮಾನ
ಹರಿಹರ: ನಗರದ ಜೆ.ಸಿ ಬಡಾವಣೆಯ ಯುವಕರು ಈದ್ ಮಿಲಾದ್ ಹಬ್ಬದ ಅಂಗವಾಗಿ ನಗರದ ಪ್ರಮುಖ ಕಾಂಗ್ರೆಸ್ ಮುಖಂಡರು ಹಾಗೂ ಪತ್ತಿನ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಹುಲಗೇಶ್ ಸಿ ಎನ್ ಮತ್ತು ಹರಿಹರದ ಖ್ಯಾತ ಸಮಾಜ ಸೇವಕರಾದ ಆರ್. ಮುಸ್ತಫಾ ಅವರಿಗೆ ಆತ್ಮೀಯವಾಗಿ ಸನ್ಮಾನಿಸಿ, ಗೌರವಿಸಿದರು.
ಈದ್ ಮಿಲಾದ್ ಹಬ್ಬದ ಸೌಹಾರ್ದತೆಯ ಸಂದೇಶ ಸಾರುವ ನಿಟ್ಟಿನಲ್ಲಿ ಬಡಾವಣೆಯ ಯುವಕರು ಈ ಗೌರವ ಸಮರ್ಪಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮುಖಂಡರು, ಯುವಕರ ಈ ಪ್ರೀತಿ ಮತ್ತು ಸೌಹಾರ್ದತಾ ಮನೋಭಾವಕ್ಕೆ ಧನ್ಯವಾದ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಶೇಖ್ ಅಲ್ತಾಫ್, ಅಕ್ಬರ್ ಅಲಿ, ಅಸಂಘಟಿತ ಕಾರ್ಮಿಕರ ತಾಲೂಕು ಅಧ್ಯಕ್ಷರಾದ ಗೌಸಪೀರ್, ಸಮಾಜ ಸೇವಕ ಗೌಸ್,ಕನ್ನಡ ರಕ್ಷಣ ವೇದಿಕೆ ಯ ತಾಲೂಕ ಅಧ್ಯಕ್ಷರಾದ ರಮೇಶ್ ಮಾನೆ,ನಗರ ಘಟಕ ಅಧ್ಯಕ್ಷರಾದ ಪ್ರೀತಮ್ ಬಾಬು,ರೇಹಮತುರ ರೆಮಾನ್, ಸೇರಿದಂತೆ ಬಡಾವಣೆಯ ಹಲವಾರು ಯುವಕರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
Click to listen highlighted text!
error: Content is protected !!