Uncategorized

ಕರ್ನಾಟಕದಲ್ಲಿ ಐವರು ಮುಸ್ಲಿಂ ಸದಸ್ಯರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಹರಿಹರ ಮುಸ್ಲಿಂ ಒಕ್ಕೂಟ ಒತ್ತಾಯ

ಮುಸ್ಲಿಂ ಮತದಾರರ ಬೆಂಬಲದೊಂದಿಗೆ ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದಿದೆ

ವಿಜಯ್ ಪ್ರಭಾಸ್ ನ್ಯೂಸ್ ಹರಿಹರ
ಕರ್ನಾಟಕದಲ್ಲಿ ಐವರು ಮುಸ್ಲಿಂ ಸದಸ್ಯರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಹರಿಹರ ಮುಸ್ಲಿಂ ಒಕ್ಕೂಟ ಒತ್ತಾಯ
ಹರಿಹರ ಕರ್ನಾಟಕದಲ್ಲಿ ಐವರು ಮುಸ್ಲಿಂ ಸದಸ್ಯರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಮುಸ್ಲಿಂ ಹರಿಹರ ಅಂಜುಮನ್ ಅಧ್ಯಕ್ಷರು ಸದಸ್ಯರು ಹಾಗೂ ಹರಿಹರ ಮುಖಂಡರು ಮತ್ತು ಒತ್ತಾಯಿಸಿದ್ದಾರೆ.
ಇದೇ ವೇಳೆ, ಮಾತನಾಡಿದ ಅಂಜುಮನ್ ಅದ್ಯಕ್ಷರಾದ ಆರ್ ಸಿ ಜಾವೀದ್ ಮಾತನಾಡಿ ಕಾಂಗ್ರೆಸ್ ಪಕ್ಷಾ ಮುಸ್ಲಿಂ ಮತದಾರರ ಬೆಂಬಲದೊಂದಿಗೆ ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಪ್ರತಿಪಾದಿಸಿದ್ದಾರೆ. ತಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ನಾಯಕತ್ವಕ್ಕೆ ಎಚ್ಚರಿಕೆ ನೀಡಿದ್ದಾರೆ.

ಹರಿಹರ ನಗರದ ಹಜರತ್ ನಾಡಬಂದ್ ಷಾ ವಲಿ ದರ್ಗಾದಲ್ಲಿ ನಡೆದ ಮುಸ್ಲಿಂ ನಾಯಕರು ಸಭೆಯಲ್ಲಿ ಈ ಬೇಡಿಕೆಯನ್ನು ಇಟ್ಟಿದ್ದಾರೆ. ಅಲ್ಲಿ ವಿಶೇಷ ಪ್ರಾರ್ಥನೆಗಳನ್ನು ಸಹ ಸಲ್ಲಿಸಿದರು.
ಸಮಾಜ ಸೇವಕ ಎಂದು ಖ್ಯಾತ ಪಡೆದ ಸನಾವುಲ್ಲಾ ಮಾತನಾಡಿ ನಮ್ಮ ರಾಜ್ಯದ ಕಾಂಗ್ರೆಸ್‌ ಮುಖಂಡರು ಜಮೀರ್ ಅಹ್ಮದ್ ಖಾನ್, ಎನ್ಎ ಹ್ಯಾರಿಸ್, ತನ್ವೀರ್ ಸೇಠ್ ಮತ್ತು ಸಲೀಮ್ ಅಹ್ಮದ್ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಒತ್ತಾಯಿಸಿದರು.

ಪೈಲ್ವಾನ್ ಅಸೀಫ್ ಅಲಿ ಮಾತನಾಡಿ ಐದು ಮುಸ್ಲಿಮರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡದಿದ್ದರೆ, ಮುಂದಿನ ದಿನಗಳಲ್ಲಿ ನೀವು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಆ ಪರಿಸ್ಥಿತಿಗೆ ನೀವೇ ಜವಾಬ್ದಾರರು ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ ಎಂದು ಹೇಳಿದರು.
ಅಂಜುಮನ್ ಕಾರ್ಯದರ್ಶಿ ಅಸೀಫ್ ಜುನೇದಿ ಮಾತನಾಡಿ ಕರ್ನಾಟಕದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವಲ್ಲಿ ಮುಸ್ಲಿಂ ಸಮುದಾಯವು ಪ್ರಮುಖ ಪಾತ್ರವಹಿಸಿದೆ. ಸರ್ಕಾರದಲ್ಲಿ ಹೆಚ್ಚಿನ ಪ್ರಾತಿನಿಧ್ಯಕ್ಕೆ ಅರ್ಹವಾಗಿದೆ ಎಂದು ತಿಳಿಸಿದರು.
ಈ ಸಮಯದಲ್ಲಿ ಹರಿಹರದ ಮುಸ್ಲಿಂ ಮುಖಂಡರು ಹಾಗೂ ಅಭಿಮಾನಿಗಳು ಸೇರಿದಂತೆ ಅನೇಕರು ಉಪಸ್ಥಿತಿರಿದ್ದರು.
ವರದಿ ಶೇಖ್ ಅಲ್ತಾಫ್ ವಿಜಯ್ ಪ್ರಭಾಸ್ ನ್ಯೂಸ್ ಹರಿಹರ

Related Articles

Leave a Reply

Your email address will not be published. Required fields are marked *

Back to top button
Click to listen highlighted text!
error: Content is protected !!