Welcome to ವಿಜಯ್ ಪ್ರಭಾಸ್ ನ್ಯೂಸ್   Click to listen highlighted text! Welcome to ವಿಜಯ್ ಪ್ರಭಾಸ್ ನ್ಯೂಸ್
Uncategorized

ಹರಿಹರ ನಗರದಲ್ಲಿ ನಡೆಯುತ್ತಿರುವ ಎಸ್‌ಐಆ‌ರ್ ಜಾಗೃತಿ ಪುಕ್ರಿಯೆಯಲ್ಲಿ ತಾಲ್ಲೂಕಿನ ವಿವಿಧ ಸಂಘ ಸಂಸ್ಥೆಗಳು ಮತ್ತು ಸಂಘಟನೆಗಳನ್ನು ಆಹ್ವಾನಿಸಲು ಮನವಿ.

ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡರ ಬಣ ವತಿಯಿಂದ ತಾಲೂಕ ಅಧ್ಯಕ್ಷರಾದ ರಾಜೇಶ್ ಹೆಚ್ ಅವರ ನೇತೃತ್ವದಲ್ಲಿ ಮನವಿ

 

 

 

 

ಹರಿಹರ ನಗರದಲ್ಲಿ ನಡೆಯುತ್ತಿರುವ ಎಸ್‌ಐಆ‌ರ್ ಜಾಗೃತಿ ಪುಕ್ರಿಯೆಯಲ್ಲಿ ತಾಲ್ಲೂಕಿನ ವಿವಿಧ ಸಂಘ ಸಂಸ್ಥೆಗಳು ಮತ್ತು ಸಂಘಟನೆಗಳನ್ನು ಆಹ್ವಾನಿಸಲು ಮನವಿ.

ಹರಿಹರ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡರ ಬಣ ವತಿಯಿಂದ ತಾಲೂಕ ಅಧ್ಯಕ್ಷರಾದ ರಾಜೇಶ್ ಹೆಚ್ ಅವರ ನೇತೃತ್ವದಲ್ಲಿ ತಾಲೂಕು ದಂಡಾಧಿಕಾರಿಗಳು ಹಾಗೂ ತಹಸಿಲ್ದಾರರ ಮೂಲಕ ಸರಕಾರಕ್ಕೆ ಎಸ್ ಐ ಆರ್ ಜಾಗೃತಿ ಪ್ರಕ್ರಿಯೆಯಲ್ಲಿ ಸಂಘ ಸಂಸ್ಥೆಗಳ ಮತ್ತು ಸಂಘಟನೆಗಳನ್ನು ಅಹ್ವಾನಿಸಲು ತಾಲೂಕ ಕಛೇರಿ ಅವರಣದಲ್ಲಿ ಮನವಿ ಕೊಡಲಾಯಿತು.
ಈ ಸಮಯದಲ್ಲಿ ಮಾತನಾಡಿದ ತಾಲೂಕ ಅಧ್ಯಕ್ಷರಾದ ರಾಜೇಶ್ ಹೆಚ್ ಪ್ರಸ್ತುತ ಹರಿಹರ ತಾಲ್ಲೂಕು ಮತ್ತು ನಗರದ ವ್ಯಾಪ್ತಿಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಅತ್ಯಂತ ಪ್ರಮುಖವಾದ ಎಸ್ ಐಆರ್ ಪ್ರಕ್ರಿಯೆಯು ಪ್ರಗತಿಯಲ್ಲಿದೆ ಎಂಬುದು ತಮಗೆ ತಿಳಿದೇ ಇದೆ. ಈ ಪ್ರಕ್ರಿಯೆಯು ನಮ್ಮ ತಾಲೂಕಿನ ಪ್ರತಿಯೊಬ್ಬ ನಾಗರಿಕನಿಗೂ ಅತ್ಯಂತ ನಿರ್ಣಾಯಕವಾಗಿದೆ. ಈ ಮಹತ್ವದ ಆಡಳಿತಾತ್ಮಕ ಕಾರ್ಯವು ಯಶಸ್ವಿಯಾಗಿ ಗರಿಷ್ಠ ಮಟ್ಟದಲ್ಲಿ ಜನರನ್ನು ತಲುಪಲು ಮತ್ತು ಸಾರ್ವಜನಿಕರಲ್ಲಿ ಈ ಬಗ್ಗೆ ಸಂಪೂರ್ಣ ಅರಿವು ಮೂಡಿಸಲು ತಾಲ್ಲೂಕಿನ ಮತ್ತು ನಗರದ ಸ್ಥಳೀಯ ಸಂಘ ಸಂಸ್ಥೆಗಳು ಸಂಘಟನೆಗಳ ಹಾಗೂ ಸಮುದಾಯಗಳ ಸಹಭಾಗಿತ್ವ ಅತ್ಯಗತ್ಯ ಎಂದು ನಾವು ಬಲವಾಗಿ ನಂಬುತ್ತೇವೆ. ಆದ್ದರಿಂದ, ತಾವು ಸಭೆಯನ್ನು ಕರಿಸಿ ಅವರಿಗೆ ಮಾಹಿತಿಯನ್ನು ನೀಡಬೇಕು ಎಂದು ವಿನಂತಿಸಿದರು.
ಈ ಪ್ರಕ್ರಿಯೆಯಲ್ಲಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಟಿ ಎ ನಾರಾಯಣಗೌಡರು ನೇತೃತ್ವದ ಹರಿಹರ ತಾಲೂಕು ಘಟಕದಿಂದ ತಮ್ಮ ಅಧಿಕಾರಿಗಳ ಜೊತೆ ಸಹಕಾರ ಪಡೆಯಲು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಎಂದರು.

ನಂತರ ಮಾತನಾಡಿದ ತಾಲೂಕ ಗೌರವ ಅಧ್ಯಕ್ಷರಾದ ಅಮಾನುಲ್ಲಾ ಮಾತನಾಡಿ ಎಸ್‌ಐಆ‌ರ್ ಬಿಎಲ್‌ಒ ಗಳೊಂದಿಗೆ ಸಮನ್ವಯತೆ: ನಮ್ಮ ಮುಖ್ಯ ಸಮಿತಿಯ ಸದಸ್ಯರನ್ನು ಆಯಾ ಭಾಗದ ಬೂತ್ ಮಟ್ಟದ ಅಧಿಕಾರಿಗಳಿಗೆ ಪರಿಚಯಿಸಿಕೊಟ್ಟಲ್ಲಿ. ನಾವು ತಳಮಟ್ಟದಲ್ಲಿ ಅವರೊಂದಿಗೆ ಸಮನ್ವಯ ಸಾಧಿಸಿ ಕೆಲಸ ಮಾಡಬಹುದು ಎಂದು ಹೇಳಿದರು.
ನಂತರ ಮಾತನಾಡಿದ ತಾಲೂಕ ಪ್ರಧಾನ ಕಾರ್ಯದರ್ಶಿ ಮುರಳೀಧರ್ ದುರ್ಗಿಜಿ ಮಾತನಾಡಿ ಹರಿಹರದ ಸಾರ್ವಜನಿಕರ ಹಿತರಕ್ಷಣೆ ಹಾಗೂ ಅಭಿವೃದ್ಧಿಗಾಗಿ ನಡೆಯುತ್ತಿರುವ ಈ ಉತ್ತಮ ಕಾರ್ಯಕ್ಕೆ ನಮ್ಮ ವಿವಿಧ ವೇದಿಕೆಯ ಸಂಘಟನೆಗಳು ಜನ ಜಾಗೃತಿ ಕಾರ್ಯಕ್ರಮದಲ್ಲಿ ಸಹಕರಿಸುತ್ತಿವೆ ಎಂದು ಮನವಿ ಮಾಡಿದರು.
ಉಪಾಧ್ಯಕ್ಷರಾದ ಅಬ್ದುಲ್ ರಜಾಕ್ನಗರ ಘಟಕದ ಅಧ್ಯಕ್ಷ ಶಕೀಲ್ ಅಹಮ್ಮದ್ ರವಿ ಬಳ್ಳಾರಿ, ಅಬ್ದುಲ್‌ ರಜಾಕ್,ನಿರಂಜನ್, ಮನ್ಸೂರ್ ಅಲಿ ಹುರಕಡಲಿ,ದುರ್ಗೆಶ್ ಸೇರಿದಂತೆ ಅನೇಕರು ಇದ್ದರು

Related Articles

Leave a Reply

Your email address will not be published. Required fields are marked *

Back to top button
error: Content is protected !!
Click to listen highlighted text!