Welcome to ವಿಜಯ್ ಪ್ರಭಾಸ್ ನ್ಯೂಸ್   Click to listen highlighted text! Welcome to ವಿಜಯ್ ಪ್ರಭಾಸ್ ನ್ಯೂಸ್
Uncategorized

ನಾಗೇನಹಳ್ಳಿ ಸರ್ಕಾರಿ ಶಾಲೆಯ 2 ಎಕರೆ 30 ಗುಂಟೆ ಜಾಗ ಉಳಿಸಲು ಮುಖ್ಯ ಶಿಕ್ಷಕ ಹಾಗೂ ಎಸ್‌ಡಿಎಂಸಿ ಅಧ್ಯಕ್ಷರ ಹೋರಾಟ

ಅತಿಕ್ರಮಣದಿಂದ ರಕ್ಷಿಸುವಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ನಯಾಜ್ ಅಹ್ಮದ್ ಎ.ಎಸ್. ಹಾಗೂ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಾಮಪ್ಪ ಅವರ ಜಂಟಿ ಪ್ರಯತ್ನ ಫಲಕಾರಿಯಾಗಿದ್ದು, ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ನಾಗೇನಹಳ್ಳಿ ಸರ್ಕಾರಿ ಶಾಲೆಯ 2 ಎಕರೆ 30 ಗುಂಟೆ ಜಾಗ ಉಳಿಸಲು ಮುಖ್ಯ ಶಿಕ್ಷಕ ಹಾಗೂ ಎಸ್‌ಡಿಎಂಸಿ ಅಧ್ಯಕ್ಷರ ಹೋರಾಟ

 

ವಿಜಯ್ ಪ್ರಭಾಸ್ ನ್ಯೂಸ್
ಹರಿಹರ, ಜೂನ್ 6: ಹರಿಹರ ತಾಲ್ಲೂಕಿನ ರಾಜನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿದ ಜಾಗವನ್ನು ಅತಿಕ್ರಮಣದಿಂದ ರಕ್ಷಿಸುವಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ನಯಾಜ್ ಅಹ್ಮದ್ ಎ.ಎಸ್. ಹಾಗೂ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಾಮಪ್ಪ ಅವರ ಜಂಟಿ ಪ್ರಯತ್ನ ಫಲಕಾರಿಯಾಗಿದ್ದು, ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ನಾಗೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸರ್ವೇ ನಂ. 49 ರಲ್ಲಿರುವ 2 ಎಕರೆ 30 ಗುಂಟೆ ಜಾಗ ಶಾಲೆಯ ಹೆಸರಿನಲ್ಲಿದೆ. ಈ ಜಾಗದಲ್ಲಿ ಸ್ಥಳೀಯರೊಬ್ಬರು ಮನೆ ನಿರ್ಮಾಣ ಕಾರ್ಯ ಆರಂಭಿಸಿರುವುದು ಗಮನಕ್ಕೆ ಬಂದ ತಕ್ಷಣ ಮುಖ್ಯ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಅಧ್ಯಕ್ಷರು ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಶಾಲೆಯ ಆಸ್ತಿಯನ್ನು ರಕ್ಷಿಸಲು ಮುಂದಾದರು.

ಮುಖ್ಯ ಶಿಕ್ಷಕ ನಯಾಜ್ ಅಹ್ಮದ್ ಎ.ಎಸ್. ಅವರು ಪೊಲೀಸ್ ಇಲಾಖೆಗೆ ದೂರು ಸಲ್ಲಿಸುವುದರ ಜೊತೆಗೆ ಕ್ಷೇತ್ರ ಶಿಕ್ಷಣಾಧಿಕಾರಿ (BEO) ಅವರಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ರಾಮಪ್ಪ ಅವರು ಸಂಪೂರ್ಣ ಬೆಂಬಲ ನೀಡಿ, ಶಾಲೆಯ ಆಸ್ತಿಯನ್ನು ಕಾಪಾಡುವ ಕಾರ್ಯದಲ್ಲಿ ಮುಖ್ಯ ಶಿಕ್ಷಕರೊಂದಿಗೆ ಹೆಜ್ಜೆ ಹಾಕಿದರು.

ಅವರ ನಿರಂತರ ಪ್ರಯತ್ನದ ಫಲವಾಗಿ ಇಂದು ದಂಡಾಧಿಕಾರಿಗಳಾದ ಸಂತೋಷ್ ಸರ್, ಕಾರ್ಯನಿರ್ವಹಣಾಧಿಕಾರಿಗಳಾದ ಬಸವರಾಜಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ದುರುಗಪ್ಪ ಸರ್, ಪಿಡಿಒ ಸಂಗಮೇಶ್ವರ, ಕೊಟ್ರೇಶ್, ಎಸ್‌ಡಿಎ ಮಾರುತಿ, ವಿಎ ಹರೀಶ್, ಇಸಿಒ, ಸಿಆರ್‌ಪಿ ಸುರೇಶ್ ಹಾಗೂ ಇತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸ್ಥಳ ಪರಿಶೀಲನೆ ವೇಳೆ ಶಾಲೆಯ ಆಸ್ತಿ ದಾಖಲೆಗಳು, ಸರ್ವೇ ನಕ್ಷೆಗಳು ಹಾಗೂ ಅತಿಕ್ರಮಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪರಿಶೀಲಿಸಲಾಯಿತು. ಶಾಲೆಯ ಅಭಿವೃದ್ಧಿ ಮತ್ತು ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಶಾಲೆಯ ಜಾಗವನ್ನು ಯಾವುದೇ ರೀತಿಯ ಅತಿಕ್ರಮಣದಿಂದ ರಕ್ಷಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಶಾಲೆಯ ಆಸ್ತಿಯನ್ನು ಉಳಿಸುವ ಹೋರಾಟದಲ್ಲಿ ಮುಖ್ಯ ಶಿಕ್ಷಕ ನಯಾಜ್ ಅಹ್ಮದ್ ಎ.ಎಸ್. ಅವರ ಜಾಗೃತಿ, ಕರ್ತವ್ಯನಿಷ್ಠೆ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ರಾಮಪ್ಪ ಅವರ ಬೆಂಬಲ ಮತ್ತು ಸಹಕಾರ ಪ್ರಮುಖ ಪಾತ್ರ ವಹಿಸಿದೆ. ಇವರಿಬ್ಬರ ಸಮನ್ವಯದ ಕಾರ್ಯದಿಂದ ಶಾಲೆಯ ಅಮೂಲ್ಯ ಆಸ್ತಿ ಉಳಿಯುವಂತಾಗಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರಿ ಶಾಲೆಗಳ ಆಸ್ತಿ ಸಾರ್ವಜನಿಕರ ಆಸ್ತಿಯಾಗಿದ್ದು, ಅದನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ನಾಗೇನಹಳ್ಳಿ ಶಾಲೆಯ ಈ ಹೋರಾಟ ಇತರ ಶಾಲೆಗಳಿಗೂ ಮಾದರಿಯಾಗಿದ್ದು, ಶಾಲಾ ಆಸ್ತಿಗಳ ಸಂರಕ್ಷಣೆಗೆ ಜಾಗೃತಿ ಮೂಡಿಸುವ ಉದಾಹರಣೆಯಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!
Click to listen highlighted text!