Uncategorized

ಮಲೇಬೆನ್ನೂರು: ವಾರ್ಡ್ 16ರಲ್ಲಿ ಕಳಪೆ ಕಾಮಗಾರಿ ಆಕ್ರೋಶ; ಇಂಜಿನಿಯರ್ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಆಗ್ರಹ

ಹಳೇ ಬಾಕ್ಸ್‌ಗೆ ಹೊಸ ಡೋರ್ ಅಳವಡಿಕೆ:

ಮಲೇಬೆನ್ನೂರು: ವಾರ್ಡ್ 16ರಲ್ಲಿ ಕಳಪೆ ಕಾಮಗಾರಿ ಆಕ್ರೋಶ; ಇಂಜಿನಿಯರ್ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಆಗ್ರಹ
ಮಲೇಬೆನ್ನೂರು: ಪಟ್ಟಣದ ವಾರ್ಡ್ ನಂಬರ್ 16ರಲ್ಲಿ ಹಮ್ಮಿಕೊಳ್ಳಲಾದ ಕುಡಿಯುವ ನೀರಿನ ಯೋಜನೆಯಲ್ಲಿ ತೀವ್ರ ಕಳಪೆ ಕಾಮಗಾರಿ ನಡೆದಿದೆ ಎಂದು ವಾರ್ಡ್ ಸದಸ್ಯರಾದ ಸಾಬೀರ್ ಅಲಿ ಹಾಗೂ ಸ್ಥಳೀಯ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಳೇ ಬಾಕ್ಸ್‌ಗೆ ಹೊಸ ಡೋರ್ ಅಳವಡಿಕೆ:

 

ಇಲ್ಲಿನ ಕುಡಿಯುವ ನೀರಿನ ಘಟಕದ ಹಳೆಯ ವಿದ್ಯುತ್ ಬಾಕ್ಸ್ ಒಡೆದು ಹೋಗಿದ್ದರೂ, ಅದಕ್ಕೆ ಹೊಸ ಬಾಕ್ಸ್ ಅಳವಡಿಸುವ ಬದಲಾಗಿ ಹಳೆಯ ಬಾಕ್ಸ್‌ಗೇ ಹೊಸ ಡೋರ್ (ಬಾಗಿಲು) ಅಳವಡಿಸಲು ಗುತ್ತಿಗೆದಾರರು ಮುಂದಾಗಿದ್ದರು. ಇದನ್ನು ಗಮನಿಸಿದ ವಾರ್ಡ್ ಸದಸ್ಯ ಸಾಬೀರ್ ಅಲಿ ಅವರು ತಕ್ಷಣ ಕಾಮಗಾರಿಯನ್ನು ತಡೆದು, ನಿಯಮಾನುಸಾರ ಹೊಸ ಬಾಕ್ಸ್ ಅನ್ನೇ ಅಳವಡಿಸಬೇಕು ಎಂದು ಸೂಚಿಸಿದರು.
ಅಧಿಕಾರಿಗಳ ಆದೇಶಕ್ಕೂ ಕದಡದ ಇಂಜಿನಿಯರ್:
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪುರಸಭೆಯ ಮುಖ್ಯಾಧಿಕಾರಿಗಳು ಕೂಡ ಪರಿಶೀಲನೆ ನಡೆಸಿ, ಹಳೆಯ ಬಾಕ್ಸ್ ತೆಗೆದು ಹೊಸ ವಿದ್ಯುತ್ ಬಾಕ್ಸ್ ಅಳವಡಿಸುವಂತೆ ಸ್ಥಳದಲ್ಲೇ ಕಡಾಖಂಡಿತವಾಗಿ ಸೂಚನೆ ನೀಡಿದ್ದರು. ಆದರೆ ಮುಖ್ಯಾಧಿಕಾರಿಗಳ ಆದೇಶವನ್ನೂ ಗಾಳಿಗೆ ತೂರಿದ ಇಂಜಿನಿಯರ್ ರಾಘವೇಂದ್ರ ಅವರು, ಹಳೆ ಬಾಕ್ಸ್‌ಗೇ ಹೊಸ ಡೋರ್ ಅಳವಡಿಸಿ ಕಾಮಗಾರಿ ಮುಗಿಸಿರುವ ಘಟನೆ ನಡೆದಿದೆ.
ಗುತ್ತಿಗೆದಾರರ ಪರ ವಕಾಲತ್ತು – ತನಿಖೆಗೆ ಆಗ್ರಹ:
ಪಟ್ಟಣದಲ್ಲಿ ನಡೆಯುತ್ತಿರುವ ಇಂತಹ ಹಲವು ಅಭಿವೃದ್ಧಿ ಕಾಮಗಾರಿಗಳಲ್ಲಿ ಇಂಜಿನಿಯರ್ ರಾಘವೇಂದ್ರ ಅವರು ಸಾರ್ವಜನಿಕ ಹಿತಾಸಕ್ತಿ ಕಾಯುವ ಬದಲು, ಗುತ್ತಿಗೆದಾರರ ಪರವಾಗಿ ಕೆಲಸ ಮಾಡುತ್ತಿರುವುದು ಮೇಲ್ನೋಟಕ್ಕೆ ಎದ್ದು ಕಾಣಿಸುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಸರ್ಕಾರದ ಹಣ ಪೋಲಾಗುತ್ತಿರುವುದಕ್ಕೆ ಇಂಜಿನಿಯರ್ ಅವರ ಬೇಜವಾಬ್ದಾರಿತನವೇ ಕಾರಣವಾಗಿದ್ದು, ಉನ್ನತ ಅಧಿಕಾರಿಗಳು ತಕ್ಷಣವೇ ಮಧ್ಯಪ್ರವೇಶಿಸಿ ಸದರಿ ಇಂಜಿನಿಯರ್ ಮೇಲೆ ಸೂಕ್ತ ಶಿಸ್ತುಕ್ರಮ ಜರುಗಿಸಬೇಕು ಎಂದು ವಾರ್ಡ್ ಸದಸ್ಯರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ

Related Articles

Leave a Reply

Your email address will not be published. Required fields are marked *

Back to top button
Click to listen highlighted text!
error: Content is protected !!