Uncategorized

ಹರಿಹರ: ನಾಡಬಂದ್ ಷಾ ವಲಿ ದರ್ಗಾ ಆವರಣದ ಚರಂಡಿ ದುರ್ವಾಸನೆ – ರೋಗಭೀತಿಯಲ್ಲಿ ನಿವಾಸಿಗಳು: ನಗರಸಭೆ ಕ್ರಮಕ್ಕೆ ಆಗ್ರಹ

ಸ್ಥಳೀಯರ ತುರ್ತು ಬೇಡಿಕೆಗಳು:ಚರಂಡಿಯಲ್ಲಿ ಬ್ಲಾಕ್ ಆಗಿರುವ ಹೂಳು ಮತ್ತು ಕಸವನ್ನು ತಕ್ಷಣವೇ ಯಂತ್ರಗಳ ಮೂಲಕ ಸ್ವಚ್ಛಗೊಳಿಸಬೇಕು.

ಹರಿಹರ: ನಾಡಬಂದ್ ಷಾ ವಲಿ ದರ್ಗಾ ಆವರಣದ ಚರಂಡಿ ದುರ್ವಾಸನೆ – ರೋಗಭೀತಿಯಲ್ಲಿ ನಿವಾಸಿಗಳು: ನಗರಸಭೆ ಕ್ರಮಕ್ಕೆ ಆಗ್ರಹ
ಹರಿಹರ: ಇಲ್ಲಿನ ನಗರದ ಪ್ರಮುಖ ಧಾರ್ಮಿಕ ಸ್ಥಳಗಳಲ್ಲೊಂದಾದ ನಾಡಬಂದ್ ಷಾ ವಲಿ ದರ್ಗಾ ಆವರಣದಲ್ಲಿ ಹಾದು ಹೊಗಿರುವ ಚರಂಡಿ ಸಂಪೂರ್ಣವಾಗಿ ಹೂಳು ತುಂಬಿ, ಕೊಳತು ನಾರುತ್ತಿದ್ದು, ಸುತ್ತಮುತ್ತಲಿನ ನಿವಾಸಿಗಳು ಹಾಗೂ ದರ್ಗಾಕ್ಕೆ ಬರುವ ಭಕ್ತಾದಿಗಳು ತೀವ್ರ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಪರದಾಡುವಂತಾಗಿದೆ.ಕಳೆದ ಕೆಲವು ದಿನಗಳಿಂದ ಚರಂಡಿ ನೀರು ಸರಾಗವಾಗಿ ಹರಿಯದೆ ಒಂದೇ ಕಡೆ ನಿಂತು ಕೊಂಡಿರುವುದರಿಂದ ತೀವ್ರ ದುರ್ವಾಸನೆ ಹರಡುತ್ತಿದೆ. ಇದರಿಂದಾಗಿ ಇಡೀ ಪ್ರದೇಶದಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ಡೆಂಗ್ಯೂ, ಮಲೇರಿಯಾದಂತಹ ಮಾರಕ ರೋಗಗಳು ಹರಡುವ ಆತಂಕ ಎದುರಾಗಿದೆ. ಸ್ಥಳೀಯ ನಿವಾಸಿಗಳು, ವೃದ್ಧರು ಹಾಗೂ ಮಕ್ಕಳು ಈಗಾಗಲೇ ಆರೋಗ್ಯ ಸಮಸ್ಯೆಗಳಿಂದ ಕಂಗಾಲಾಗಿದ್ದಾರೆ.ಧಾರ್ಮಿಕ ಪಾವಿತ್ರ್ಯತೆ ಇರುವ ಮತ್ತು ಸಾರ್ವಜನಿಕರು ವಾಸಿಸುವ ಈ ಪ್ರದೇಶದಲ್ಲಿ ಇಷ್ಟೊಂದು ಗಲೀಜು ವಾತಾವರಣವಿದ್ದರೂ ನಗರಸಭೆಯ ಆರೋಗ್ಯ ವಿಭಾಗದ ಅಧಿಕಾರಿಗಳು ಇತ್ತ ಗಮನ ಹರಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸ್ಥಳೀಯರ ತುರ್ತು ಬೇಡಿಕೆಗಳು:ಚರಂಡಿಯಲ್ಲಿ ಬ್ಲಾಕ್ ಆಗಿರುವ ಹೂಳು ಮತ್ತು ಕಸವನ್ನು ತಕ್ಷಣವೇ ಯಂತ್ರಗಳ ಮೂಲಕ ಸ್ವಚ್ಛಗೊಳಿಸಬೇಕು.

ಸೊಳ್ಳೆಗಳ ನಿಯಂತ್ರಣಕ್ಕಾಗಿ ಇಡೀ ವಾರ್ಡ್‌ನಲ್ಲಿ ಫಾಗಿಂಗ್ (ಹೊಗೆ) ಮಾಡಿಸಿ, ಬ್ಲೀಚಿಂಗ್ ಪೌಡರ್ ಸಿಂಪಡಿಸಬೇಕು.ಚರಂಡಿ ನೀರು ಸರಾಗವಾಗಿ ಹರಿದು ಹೋಗಲು ಶಾಶ್ವತ ಡ್ರೈನೇಜ್ ವ್ಯವಸ್ಥೆ ಕಲ್ಪಿಸಬೇಕು.ಸ್ಥಳೀಯ ನಾಗರಿಕರ ಆರೋಗ್ಯದ ದೃಷ್ಟಿಯಿಂದ ಹರಿಹರ ನಗರಸಭೆಯ ಪೌರಾಯುಕ್ತರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ಕೂಡಲೇ ಕ್ರಮ ಜರುಗಿಸುತ್ತಾರೆಯೇ ಅಥವಾ ಅಧಿಕಾರಿಗಳು ಇನ್ನೂ ನಿರ್ಲಕ್ಷ್ಯ ವಹಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ ಎಂದು ಸ್ಥಳೀಯ ನಿವಾಸಿಗಳು ಎಚ್ಚರಿಸಿದ್ದಾರೆ.
ವರದಿ:ಶೇಖ್ ಅಲ್ತಾಫ್ ವಿಜಯ್ ಪ್ರಭಾಸ್ ನ್ಯೂಸ್ ಹರಿಹರ

Related Articles

Leave a Reply

Your email address will not be published. Required fields are marked *

Back to top button
Click to listen highlighted text!
error: Content is protected !!