ಹರಿಹರದಲ್ಲಿ ಪೈಲವಾನ್ ಸುರೇಶ್ ಚಂದಾಪುರ್ ಅವರಿಗೆ ಭವ್ಯ ಸನ್ಮಾನ.
ಪೈಲವಾನ ಸುರೇಶ್ ಚಂದಾಪುರ್ ರವರ 46ನೇ ಜನ್ಮದಿನಾ

ಹರಿಹರದಲ್ಲಿ ಪೈಲವಾನ್ ಸುರೇಶ್ ಚಂದಾಪುರ್ ಅವರಿಗೆ ಭವ್ಯ ಸನ್ಮಾನ.
ಹರಿಹರ: ಇಲ್ಲಿನ ಸ್ಥಳೀಯ ಪೈಲವಾನ್ ಸಂಘದ ವತಿಯಿಂದ ಪೈಲವಾನ ಸುರೇಶ್ ಚಂದಾಪುರ್ ರವರ 46ನೇ ಜನ್ಮದಿನಾ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಸಮಾರಂಭದಲ್ಲಿ ರಾಜ್ಯದ ಕೀರ್ತಿ ಹೆಚ್ಚಿಸಿದ ಹಿರಿಯ ಕುಸ್ತಿ ಪಟು ಪೈಲವಾನ್ ಸುರೇಶ್ ಚಂದಾಪುರ್ ಅವರಿಗೆ ಭವ್ಯ ಸನ್ಮಾನ ನೆರವೇರಿಸಲಾಯಿತು.
ಸಂಘದ ಅಧ್ಯಕ್ಷರಾದ ವೈ. ರಘುಪತಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಸಂಘದ ಸಮಸ್ತ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಒಟ್ಟಾಗಿ ಸುರೇಶ್ ಚಂದಾಪುರ್ ಅವರಿಗೆ ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ ಹಾಗೂ ಹೂಗುಚ್ಛ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷರಾದ ವೈ. ರಘುಪತಿ ಅವರು, “ಸುರೇಶ್ ಚಂದಾಪುರ್ ಅವರು ಅಖಾಡದಲ್ಲಿ ತಮ್ಮ ಅದ್ಭುತ ಕೌಶಲ್ಯದ ಮೂಲಕ ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದವರು. ಅವರ ಶಿಸ್ತು ಮತ್ತು ಸಾಧನೆ ಇಂದಿನ ಯುವ ಪೀಳಿಗೆಯ ಕುಸ್ತಿ ಪಟುಗಳಿಗೆ ದೊಡ್ಡ ಪ್ರೇರಣೆಯಾಗಿದೆ. ಅವರಿಗೆ ಭಗವಂತನು ಉತ್ತಮ ಆರೋಗ್ಯ, ದೀರ್ಘಾಯುಷ್ಯ ನೀಡಿ ಆಶೀರ್ವದಿಸಲಿ” ಎಂದು ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪೈಲವಾನ್ ಸುರೇಶ್ ಚಂದಾಪುರ್ ಅವರು, ಸಂಘದ ಅಧ್ಯಕ್ಷರಿಗೆ, ಪದಾಧಿಕಾರಿಗಳಿಗೆ ಹಾಗೂ ತಮ್ಮನ್ನು ಸದಾ ಬೆಂಬಲಿಸಿ ಬೆಳೆಸಿದ ಕ್ರೀಡಾಭಿಮಾನಿಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಪೈಲವಾನ್ ಸಂಘದ ಪ್ರಮುಖ ಮುಖಂಡರು, ಪದಾಧಿಕಾರಿಗಳು, ಸರ್ವ ಸದಸ್ಯರು ಹಾಗೂ ಅಪಾರ ಸಂಖ್ಯೆಯ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ: ಶೇಖ್ ಅಲ್ತಾಫ್, ವಿಜಯ್ ಪ್ರಭಾಸ್ ನ್ಯೂಸ್, ಹರಿಹರ.