Welcome to ವಿಜಯ್ ಪ್ರಭಾಸ್ ನ್ಯೂಸ್   Click to listen highlighted text! Welcome to ವಿಜಯ್ ಪ್ರಭಾಸ್ ನ್ಯೂಸ್
ಉನ್ನತ ಸುದ್ದಿರಾಜ್ಯ

ಲೆಕ್ಕ ಕೊಡ್ತೀವಿ.. ಕೂಡಲೇ ಮಠ ಖಾಲಿ ಮಾಡಿ: ವಚನಾನಂದ ಶ್ರೀಗಳಿಗೆ ಟ್ರಸ್ಟ್ ತಾಕೀತು

(ಟ್ರಸ್ಟ್) ಹಾಗೂ ವಚನಾನಂದ ಸ್ವಾಮೀಜಿ ನಡುವಿನ ಶೀತಲ ಸಮರ ಈಗ ಬಹಿರಂಗ ಸಂಘರ್ಷಕ್ಕೆ ತಿರುಗಿದೆ.

ಲೆಕ್ಕ ಕೊಡ್ತೀವಿ.. ಕೂಡಲೇ ಮಠ ಖಾಲಿ ಮಾಡಿ: ವಚನಾನಂದ ಶ್ರೀಗಳಿಗೆ ಟ್ರಸ್ಟ್ ತಾಕೀತು
ಲೆಕ್ಕ ಪಡೆದು ಮಠ ಖಾಲಿ‌ ಮಾಡುವಂತೆ ಸ್ವಾಮೀಜಿಗೆ ಟ್ರಸ್ಟಿನವರು ತಾಕೀತು ಮಾಡಿದ್ದಾರೆ. ಆ ಮೂಲಕ ಹರಿಹರದ ಪಂಚಮಸಾಲಿ ಮಠದ ಆಡಳಿತ ಮಂಡಳಿ (ಟ್ರಸ್ಟ್) ಹಾಗೂ ವಚನಾನಂದ ಸ್ವಾಮೀಜಿ ನಡುವಿನ ಶೀತಲ ಸಮರ ಈಗ ಬಹಿರಂಗ ಸಂಘರ್ಷಕ್ಕೆ ತಿರುಗಿದೆ.
ಪಂಚಮಸಾಲಿ ಟ್ರಸ್ಟ್ ಮತ್ತು ವಚನಾನಂದ ಸ್ವಾಮೀಜಿ ನಡುವಿನ ಸಂಘರ್ಷ ತೀವ್ರಗೊಂಡಿದ್ದು ಮಠ ವ್ಯವಹಾರಗಳ ಲೆಕ್ಕ ಕೊಡ್ತೀವಿ ಕೂಡಲೇ ಮಠ ಖಾಲಿ ಮಾಡಿ ಎಂದು ಟ್ರಸ್ಟಿನವರು ಶ್ರೀಗಳಿಗೆ ತಾಕೀತು ಮಾಡಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪಂಚಮಸಾಲಿ ಟ್ರಸ್ಟಿನವರು, ಏಪ್ರಿಲ್​​ 27ರಂದು ಲೆಕ್ಕಾ ಕೊಡಲು ಸಿದ್ಧರಿದ್ದೇವೆ. ಲೆಕ್ಕ ಪಡೆದು ಮಠ ಖಾಲಿ‌ ಮಾಡುವಂತೆ ಸ್ವಾಮೀಜಿಗೆ ಟ್ರಸ್ಟಿನವರು ತಾಕೀತು ಮಾಡಿದ್ದಾರೆ. ಆ ಮೂಲಕ ಹರಿಹರದ ಪಂಚಮಸಾಲಿ ಮಠದ ಆಡಳಿತ ಮಂಡಳಿ (ಟ್ರಸ್ಟ್) ಹಾಗೂ ವಚನಾನಂದ ಸ್ವಾಮೀಜಿ ನಡುವಿನ ಶೀತಲ ಸಮರ ಈಗ ಬಹಿರಂಗ ಸಂಘರ್ಷಕ್ಕೆ ತಿರುಗಿದೆ.

ಧರ್ಮದರ್ಶಿ ಸಮಿತಿಯ ಮುಖಂಡರು ಸ್ವಾಮೀಜಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಲೆಕ್ಕ ಕೊಡುತ್ತೇವೆ. ಲೆಕ್ಕ ಪಡೆದು ಮಠ ಖಾಲಿ‌ ಮಾಡುವಂತೆ ಸ್ವಾಮೀಜಿಗೆ ಟ್ರಸ್ಟಿ ಹೆಚ್​.ಎಸ್.ನಾಗರಾಜ್ ತಾಕೀತು ಮಾಡಿದ್ದಾರೆ.

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಬಳಿಯ ಪಂಚಮಸಾಲಿ ಮಠದಲ್ಲಿ ಮಾತನಾಡಿದ ಪಂಚಮಸಾಲಿ ಟ್ರಸ್ಟಿ ಹೆಚ್​.ಎಸ್.ನಾಗರಾಜ್, ನಮಗೆ ಲೆಕ್ಕ ಕೊಡಿ ಎಂದು ಕೇಳಿದ್ದಾರೆ, ನಾಳೆ ‌ಲೆಕ್ಕ ಕೊಡುತ್ತೇವೆ. ಈಗಾಗಲೇ ಎಲ್ಲ ದಾಖಲೆಗಳು ನಮ್ಮ ಬಳಿ ಇವೆ. ಲೆಕ್ಕ ಪಡೆದು ಮಠ ಖಾಲಿ‌ ಮಾಡುವಂತೆ ವಚನಾನಂದ ಸ್ವಾಮೀಜಿಗೆ ತಾಕೀತು ಮಾಡಿದರು.

ಈಗಾಗಲೇ ಕೂಡಲಸಂಗಮ ಪಂಚಮಸಾಲಿ ಪೀಠ ಮುಗಿಸಲಾಗಿದೆ. ಈಗ ಹರಿಹರ ಪೀಠಕ್ಕೆ ಬಂದಿದ್ದಾರೆ, ಇಂದು ಲೆಕ್ಕ ಕೊಡುತ್ತೇವೆ. ಲೆಕ್ಕ ಕೊಡುವುದಕ್ಕಾಗಿಯೇ ವೇದಿಕೆ ಸಿದ್ಧ ಮಾಡಿದ್ದೇವೆ. ಎಲ್ಲರ ಸಮ್ಮುಖದಲ್ಲಿಯೇ ಲೆಕ್ಕ ಕೊಡುತ್ತೇವೆ ಎಂದು ಹೇಳಿದ್ದಾರೆ.

ಪಂಚಮಸಾಲಿ ಮಠಕ್ಕೆ ಇನ್ನೊಬ್ಬರ ಪ್ರವೇಶ: 25 ಕೋಟಿ ರೂ ಅವ್ಯವಹಾರ

ಇನ್ನು ಇಷ್ಟು ದಿನ ಸುಮ್ಮನಿದ್ದ ಪಂಚಮಸಾಲಿ ರಾಜ್ಯ ಸಂಘದ ಅಧ್ಯಕ್ಷ ಸೋಮನಗೌಡ ಮಾಲಿ ಪಾಟೀಲ್​ ಇದೀಗ​​ ರಂಗ ಪ್ರವೇಶ ಮಾಡಿದ್ದು, ಮಠದ ವ್ಯವಹಾರದಲ್ಲಿ ಅವ್ಯವಹಾರ ನಡೆದರೆ, ಸ್ವಾಮೀಜಿ ವಿಚಾರಕ್ಕೆ ಬಂದಾಗ ಪಂಚಮಸಾಲಿ ರಾಜ್ಯ ಸಂಘ ಪ್ರವೇಶ ಮಾಡಬಹುದು ಎಂದು ನಿಯಮವಿದೆ. ಅದೇ ಅಧಿಕಾರ ಬಳಸಿಕೊಂಡು ಮೂವರನ್ನು ಉಚ್ಚಾಟನೆ ಮಾಡಿದ್ದೇವೆ ಎಂದರು.
ಮಠದ ಆವರಣದಲ್ಲಿ ಏರ್ಪಡಿಸಿದ ಸಮಾರಂಭಕ್ಕೆ ಭಕ್ತರು ಆಗಮಿಸಿದ್ದಾರೆ. ಸಭೆ ಆರಂಭವಾದ ಕೆಲ ಹೊತ್ತಿನ ಬಳಿಕ ಸಭೆಯಿಂದ ಹೊರ ನಡೆದ ಕೆಲವರು ಲೆಕ್ಕಪತ್ರ ಮಂಡನೆ ಸಭೆಗೆ ಬಹಿಷ್ಕಾರ ಹಾಕಿದರು.

ಬಳಿಕ ಸ್ವಾಮೀಜಿ ಪರ ಗುಂಪು ವೇದಿಕೆ ಸಮೀಪ ಧಾವಿಸಿ ಟ್ರಸ್ಟ್ ಸದಸ್ಯ ಎಚ್‌.ಎಸ್.ನಾಗರಾಜ್ ಅವರ ಭಾಷಣಕ್ಕೆ ಅಡ್ಡಿಪಡಿಸಿತು. ಇದರಿಂದ ಸಭೆಯಲ್ಲಿ ಕೋಲಾಹಲ ಸೃಷ್ಟಿ ಆಯಿತು. ವೇದಿಕೆಗೆ ನುಗ್ಗುವ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದರು. ಟ್ರಸ್ಟ್ ಪರವಾಗಿರುವವರು ‘ಹರ ಹರ ಮಹಾದೇವ’, ‘ಜೈ ಪಂಚಮಸಾಲಿ’ ಘೋಷಣೆ ಮೊಳಗಿಸಿದರು.

ಮಧ್ಯೆ ಪ್ರವೇಶಿಸಿದ ಪೊಲೀಸರು ಸ್ವಾಮೀಜಿ ಪರ ಬಣದ ಭಕ್ತರನ್ನು ದೇಗುಲದ ಸಮೀಪ ತಡೆದರು. ಗೊಂದಲ ಉಂಟಾಗದಂತೆ ಎಚ್ಚರಿಕೆ ನೀಡಿದರು. ಕೆಲ ಹೊತ್ತಿನ ಬಳಿಕ ಸ್ವಾಮೀಜಿ ಪರ ಭಕ್ತರು ಗುರುಪೀಠದ ಕಟ್ಟಡದ ಕಡೆ ಸಾಗಿದರು. ಬಳಿಕ ಟ್ರಸ್ಟ್ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಅವರು ಲೆಕ್ಕಪತ್ರ ಮಂಡನೆ ಮಾಡುತ್ತಿದ್ದಾರೆ.

ನಾನಲ್ಲ, ಟ್ರಸ್ಟಿಗಳು ಮೊದಲು ಮಠ ತೊರೆಯಲಿ: ವಚನಾನಂದ ಸ್ವಾಮೀಜಿ
ಹರಿಹರ (ದಾವಣಗೆರೆ): ‘ನನ್ನ ಪರವಾಗಿ ಅಪಾರ ಭಕ್ತ ಸಮೂಹವಿದೆ. ಎಂಟು
ವರ್ಷಗಳಿಂದ ಮಠವನ್ನು ಅತ್ಯುತ್ತಮವಾಗಿ ಕಟ್ಟಿದ್ದೇನೆ. ನಾನಲ್ಲ, ಟ್ರಸ್ಟಿಗಳು ಮೊದಲು ಮಠ ತೊರೆಯಲಿ’ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ತಿಳಿಸಿದರು.

ಹರಿಹರ ಸಮೀಪದ ಮಠದ ಆವರಣದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠ ಟ್ರಸ್ಟ್ ಸೋಮವಾರ ಹಮ್ಮಿಕೊಂಡಿರುವ ಲೆಕ್ಕಪತ್ರ ಮಂಡನೆ ಸಭೆಗೂ ಮುನ್ನ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

‘ಟ್ರಸ್ಟಿಗಳು ಒತ್ತಾಯ ಮಾಡಿ ಮಠಕ್ಕೆ ಕರೆತಂದು ಪೀಠಕ್ಕೆ ಕೂರಿಸಿದ್ದಾರೆ. ಎಂಟು ವರ್ಷಗಳ ಹಿಂದೆ ನಾವು ಪಟ್ಟಾಧಿಕಾರ ತೆಗೆದುಕೊಂಡಾಗ ಮಠದಲ್ಲಿ ಏನೂ ಇರಲಿಲ್ಲ. ಮಠಕ್ಕೆ ರೂಪವೊಂದನ್ನು ನೀಡಿ, ಸಾವಿರಾರು ಭಕ್ತರು ಮಠಕ್ಕೆ ಬರುವಂತೆ ಮಾಡಿದ್ದೇವೆ. ಈಗ ಮಠದಿಂದ ಹೊರ ಹಾಕಿದರೆ ಹೇಗೆ? ಯಾವುದೇ ಕಾರಣಕ್ಕೂ ಮಠದಿಂದ ಹೊರ ನಡೆಯುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ನಾನು ಬಡ ಪಂಚಮಸಾಲಿ ರೈತ ಕುಟುಂಬದಿಂದ ಬೆಳೆದು ಬಂದಿದ್ದೇನೆ. ಮಠದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದೇನೆ ಎಂಬ ಆರೋಪದಲ್ಲಿ ಹುರುಳಿಲ್ಲ. ನಾನು ವಿಐಪಿ ಸಂಸ್ಕೃತಿ ಪಾಲನೆ ಮಾಡಿದ್ದರೆ ಸಾಮಾನ್ಯ ಭಕ್ತರು ನನ್ನ ಪರವಾಗಿ ಮಠಕ್ಕೆ ಬರುತ್ತಿದ್ದರೇ’ ಎಂದು ಪ್ರಶ್ನಿಸಿದರು.

‘ಗುರುಪೀಠದ ಟ್ರಸ್ಟ್‌ನಲ್ಲಿ ಭಾರಿ ಅವ್ಯಹಾರ ನಡೆದಿದೆ. ಪೀಠದ ಮೊದಲ ಗುರುಗಳಾದ ಮಹಂತ ಶಿವಾಚಾರ್ಯ ಸ್ವಾಮೀಜಿ ಕೂಡ ಲೆಕ್ಕಪತ್ರ ಕೇಳಿದ್ದರು. ಇದೇ ಕಾರಣಕ್ಕೆ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರನ್ನು ಮಠದಿಂದ ಹೊರಹಾಕಲಾಯಿತು. ಈಗ ಲೆಕ್ಕ ಪತ್ರವನ್ನು ಭಕ್ತರು ಕೇಳಿದ ಕಾರಣಕ್ಕೆ ನನ್ನನ್ನು ಮಠದಿಂದ ಹೊರಹಾಕುವ ಪ್ರಯತ್ನ ನಡೆಯುತ್ತಿದೆ. ಇದು ಸಫಲವಾಗುವುದಿಲ್ಲ’ ಎಂದರು.

‘ಹೊನ್ನಳಿಯ ರಾಜಕುಮಾರ್ ಅವರು ಮಠದ ಆಡಳಿತಾಧಿಕಾರಿಯಾಗಿ ನೇಮಕಗೊಂಡ ಬಳಿಕ ಆಡಳಿತ ಚೆನ್ನಾಗಿ ನಡೆಯುತ್ತಿದೆ. ಆಡಳಿತಾಧಿಕಾರಿ ಮಠವನ್ನು ಚೆನ್ನಾಗಿ ಬೆಳಸುತ್ತಿದ್ದಾರೆ. ಅಧ್ಯಾತ್ಮ, ಅಕ್ಷರ ಹಾಗೂ ಅನ್ನ ದಾಸೋಹ ಮಠದಲ್ಲಿ ನಡೆಯಬೇಕು. ಪೀಠಕ್ಕೆ ಬಂದ ಬಳಿಕ ಒಮ್ಮೆಯೂ ಮನೆಗೆ ಆಹ್ವಾನಿಸಿ ಪಾದಪೂಜೆ ಮಾಡದ ಟ್ರಸ್ಟ್ ಸದಸ್ಯರಲ್ಲಿ ಅಹಂಕಾರ ಭಾವ ಹೆಚ್ಚಾಗಿದೆ’ ಎಂದು ಕಿಡಿಕಾರಿದರು.

‘ಮಠದಲ್ಲಿ ವಸತಿ ನಿಲಯ ನಿರ್ಮಾಣಕ್ಕೆ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಇಲಾಖೆ 2021 ಜ.18ರಂದು ₹ 10 ಕೋಟಿ ಅನುದಾನ ಬಿಡುಗಡೆ ಆಗಿದೆ. ಟ್ರಸ್ಟ್ ಸದಸ್ಯರು ನಕಲಿ ಸಹಿ ಹಾಕಿ ಹಣ ಪಡೆದು ದುರ್ಬಳಕೆ ಮಾಡಿಕೊಂಡಿದ್ದಾರೆ. ವಸತಿ ನಿಲಯದ ಕಟ್ಟಡ ಕೂಡ ಪೂರ್ಣಗೊಳಿಸಿಲ್ಲ’ ಎಂದು ದೂರಿದರು.

ಮಠದಲ್ಲಿ ಬಿಗುವಿನ ವಾತಾವರಣ

ಲೆಕ್ಕಪತ್ರ ಮಂಡನೆ ಸಭೆಯನ್ನು ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಟ್ರಸ್ಟ್ ಸೋಮವಾರ ಆಯೋಜಿಸಿದ್ದರಿಂದ ಮಠದ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಮಠದಲ್ಲಿ ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದಾರೆ.

ಮಠದಲ್ಲಿ ಸ್ವಾಮೀಜಿ ಪರ ಭಕ್ತರು ಹಾಗೂ ಟ್ರಸ್ಟ್ ಪರವಾಗಿ ಇರುವ ಸಮುದಾಯದ ಜನರು ಸೇರಿದ್ದಾರೆ. ಸ್ವಾಮೀಜಿ ಪರವಾಗಿ ಭಕ್ತರು ಹಾಗೂ ಟ್ರಸ್ಟ್ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ ಪರ ಜನರು ಪರಸ್ಪರ ಘೋಷಣೆ ಕೂಗುತ್ತಿದ್ದಾರೆ.

ಒಂದು ಕಡೆ ಮಠದ ಪೀಠದ ಸಭಾಂಗಣದಲ್ಲಿ ಸ್ವಾಮೀಜಿ ಕುಳಿತಿದ್ದು, ಭಕ್ತರಿಗೆ ದರ್ಶನ ನೀಡುತ್ತಿದ್ದಾರೆ.ಇನ್ನೊಂದು ಕಡೆ ಮಠದ ಅವರಣದಲ್ಲಿ ಶಾಮಿಯಾನ ಹಾಕಿ ವೇದಿಕೆಯನ್ನು ಹಾಕಿ ಲೇಕಾ ಕೊಡುತ್ತಿರುವ ದೃಶ್ಯವನ್ನು ಕಂಡು ಬಂದಿದೆ.
ಸಂಘದ ತೀರ್ಮಾನವಲ್ಲ: ಉಪಾಧ್ಯಕ್ಷ
ಹರಿಹರ: ‘ಗುರುಪೀಠದ ಟ್ರಸ್ಟ್‌ ಪದಾಧಿಕಾರಿಗಳ ಉಚ್ಚಾಟಿಸಲು ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ತೀರ್ಮಾನ ಕೈಗೊಂಡಿಲ್ಲ. ಈ ಸಂಬಂಧ ಯಾವುದೇ ಸಭೆ ನಡೆದಿಲ್ಲ’ ಎಂದು ಪಂಚಮಸಾಲಿ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಶಂಕರ ಬಸರಹಳ್ಳಿ ತಿಳಿಸಿದರು.

‘ಟ್ರಸ್ಟ್‌ ಮೇಲೆ ಸಂಘಕ್ಕೆ ಅಧಿಕಾರವಿಲ್ಲ. ಗುರುಪೀಠ ಹಾಗೂ ಟ್ರಸ್ಟ್‌ ಬಗ್ಗೆ ಸಂಘದಲ್ಲಿ ಚರ್ಚೆ ನಡೆದಿಲ್ಲ. ಇದಕ್ಕೆ ಸಂಬಂಧಿಸಿದ ಸೂಕ್ತ ದಾಖಲೆಗಳು ಕೂಡ ಇಲ್ಲ. ಕೆಲವು ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ಸೋಮನಗೌಡ ಪಾಟೀಲ ಹೇಳಿಕೆ ನೀಡಿದ್ದಾರೆ. ಅವರ ವಿರುದ್ಧ ಸಂಘ ಸೂಕ್ತ ಕ್ರಮ ಕೈಗೊಳ್ಳಲಿದೆ’ ಎಂದು ವಿವರಿಸಿದರು.

ಪಂಚಮಸಾಲಿ ಪೀಠ: ವಿರೋಧದ ನಡುವೆಯೂ ಲೆಕ್ಕ ಮಂಡಿಸಿದ ಧರ್ಮದರ್ಶಿಗಳು
ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಲ್ಲಿ ಟ್ರಸ್ಟ್‌ನ ಲೆಕ್ಕಪತ್ರ ಮಂಡನೆಗೆ ಶ್ರೀವಚನಾನಂದ ಸ್ವಾಮೀಜಿ ಪರ ಇರುವ ಭಕ್ತರು ವಿರೋಧ ವ್ಯಕ್ತಪಡಿಸಿದ ನಡುವೆಯೇ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಲೆಕ್ಕಪತ್ರ ಮಂಡಿಸಿದರು.
ನಗರದ ಹೊರವಲಯದಲ್ಲಿರುವ ಮಠದ ಆವರಣದಲ್ಲಿ ಸೋಮವಾರ 2008ರಿಂದ 2026ರವರೆಗೆ ಪಂಚಮಸಾಲಿ ಜಗದ್ಗುರು ಪೀಠದ ಟ್ರಸ್ಟಿಗಳಿಂದ ಲೆಕ್ಕ ಕೊಡುವ ಕಾರ್ಯಕ್ರಮ ನಡೆಯಿತು.
ಬೆಳಗ್ಗೆ 11ಗಂಟೆಗೆ ನಿಗದಿಯಾಗಿದ್ದ ಲೆಕ್ಕಕೊಡುವ ಕಾರ್ಯಕ್ರಮ ತಡವಾಗಿ ಆರಂಭವಾಯಿತು. ಕಾವೇರಿದ ವಾತಾವರಣದ ನಡುವೆಯೂ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಸತತವಾಗಿ ಮೂರ್ನಾಲ್ಕು ಗಂಟೆ ಸುದೀರ್ಘವಾಗಿ 2008ರಿಂದ 2026ರವರೆಗೆ ಪೀಠಕ್ಕೆ ದೇಣಿಗೆ ರೂಪದಲ್ಲಿ ಬಂದಿದ್ದ ದೇಣಿಗೆ, ಧವಸ, ಧಾನ್ಯ, ನಿವೇಶನ, ಜಮೀನು ಸೇರಿದಂತೆ ಆಸ್ತಿ ಪತ್ರಗಳನ್ನು ಭಕ್ತರ ಮುಂದೆ ಒಪ್ಪಿಸಿದರು.
18 ವರ್ಷಗಳಲ್ಲಿ ಮಠಕ್ಕೆ ದೇಣಿಗೆ ರೂಪದಲ್ಲಿ ಒಟ್ಟು 27,61,57,518 ರೂ.ಗಳು ಬಂದಿದ್ದು, ಅಷ್ಟೂ ಹಣವನ್ನು ಮಠದ ಆವರಣದಲ್ಲಿ ದೇವಸ್ಥಾನ, ಗುರುಧ್ಯಾನ ಮಂದಿರ, ದಾಸೋಹ ಭವನ ನಿರ್ಮಾಣ, ಮಠದ ಸ್ಥಳದಲ್ಲಿ ಮಣ್ಣು ತುಂಬಿ ಸಮತಟ್ಟು ಮಾಡಲು, ಹರಜಾತ್ರೆ, ಶ್ರೀಗಳ ಪೀಠಾರೋಹಣ, ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ, ಅನ್ನದಾಸೋಹ ಸೇರಿದಂತೆ ವಿವಿಧ ಧರ್ಮ ಕಾರ್ಯಗಳಿಗೆ ಖರ್ಚು ಮಾಡಲಾಗಿದೆ. 1.68 ಕೋಟಿ ರೂ. ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಡಲಾಗಿದೆ ಎಂದು ಪ್ರತಿಯೊಂದು ಲೆಕ್ಕವನ್ನೂ ವಿವರಿಸಿದರು.
ಸರ್ಕಾರದಿಂದ 12.70 ಕೋಟಿ ರೂ., ಮರಳು ಮಾರಾಟದಿಂದ 10 ಲಕ್ಷ ರೂ., ಸಂಡೂರು ನಾಗನಗೌಡ 2 ಕೋಟಿ ರೂ., ಬಸವರಾಜ ಬೊಮ್ಮಾಯಿ 15 ಲಕ್ಷ, ದೇವಸ್ಥಾನ ನಿರ್ಮಾಣಕ್ಕೆ ಶಾಮನೂರು ಶಿವಶಂಕರಪ್ಪ 1 ಕೋಟಿ ರೂ. ನೀಡಿರುವುದು ಸೇರಿದಂತೆ ಒಟ್ಟು 27 ಕೋಟಿ ರೂ. ಹಣ ಸಂಗ್ರಹವಾಗಿತ್ತು ಎಂದು ಮಾಹಿತಿ ನೀಡಿದರು.

ಸಹಕಾರ ಕಾಯ್ದೆಯಡಿ ನೋಂದಣಿಯಾಗಿರುವ ಸಂಘಕ್ಕೆ ಟ್ರಸ್ಟ್‌ ಮೇಲೆ ಯಾವುದೇ ಅಧಿಕಾರವಿಲ್ಲ. ಟ್ರಿಸ್ಟ್‌ನ ಬೈಲಾ ಭಿನ್ನವಾಗಿದೆ. ಟ್ರಸ್ಟಿಗಳನ್ನು ಉಚ್ಚಾಟಿಸಲು ಸಂಘಕ್ಕೆ ಸಾಧ್ಯವಿಲ್ಲ.
-ಬಿ.ಸಿ. ಉಮಾಪತಿ, ಪ್ರಧಾನ ಧರ್ಮದರ್ಶಿ, ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಟ್ರಸ್ಟ್‌
ಭಕ್ತರು ನೀಡಿದ ದೇಣಿಗೆ ಮಾಹಿತಿಯನ್ನು ಟ್ರಸ್ಟ್‌ ಮರೆಮಾಚಿದೆ. ಪ್ರಾಮಾಣಿಕರಾಗಿದ್ದರೆ ಧರ್ಮಸ್ಥಳದ ಮಂಜುನಾಥೇಶ್ವರ ಅಥವಾ ಕೊಟ್ಟೂರಿನ ಕೊಟ್ಟೂರೇಶ್ವರ ಸನ್ನಿಧಾನದಲ್ಲಿ ಪ್ರಮಾಣ ಮಾಡಲಿ.
-ಎಚ್‌.ಎಸ್‌.ಶಿವಶಂಕರ್, ಮಾಜಿ ಶಾಸಕ ಹರಿಹರ
ಮಾಜಿ ಶಾಸಕರಾದ ಅರುಣ್‌ಕುಮಾರ್ ಪೂಜಾರ್, ನಂದಿಹಳ್ಳಿ ಹಾಲಪ್ಪ, ರಾಜ್ಯ ಸಂಘದ ಉಪಾಧ್ಯಕ್ಷ ಶಂಕರೇಗೌಡ ಬುರುಪನಹಳ್ಳಿ, ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಮಠದ ಆಡಳಿತಾಧಿಕಾರಿ ರಾಜ್‌ಕುಮಾರ್ ಹೊನ್ನಾಳಿ ಹಾಜರಿದ್ದರು.

 

Related Articles

Leave a Reply

Your email address will not be published. Required fields are marked *

Back to top button
error: Content is protected !!
Click to listen highlighted text!