ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಭಾಜನರಾದ ಟೀಪು ಸುಲ್ತಾನ್ ನಾಯಕವಾಡಿ ಅವರನ್ನು ಹರಿಹರ ಗಾಂಧಿ ನಗರದ ಮುಖಂಡರು ಹಾಗೂ ಅವರ ಅಭಿಮಾನಿಗಳು ಸನ್ಮಾನಿಸಿ ಗೌರವಿಸಿದರು.
ವರದಿ ಶೇಖ್ ಅಲ್ತಾಫ್ ವಿಜಯ್ ಪ್ರಭಾಸ್ ನ್ಯೂಸ್ ಹರಿಹರ
ಹರಿಹರ ವಿಜಯ್ ಪ್ರಭಾಸ್ ವಾರ್ತೆ 2025ನೇ ಸಾಲಿನ ಪ್ರತಿಷ್ಠಿತ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಭಾಜನರಾದ ಟೀಪು ಸುಲ್ತಾನ್ ನಾಯಕವಾಡಿ ಅವರನ್ನು ಹರಿಹರ ಗಾಂಧಿ ನಗರದ ಮುಖಂಡರು ಹಾಗೂ ಅವರ ಅಭಿಮಾನಿಗಳು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಹರಿಹರ ಅಂಜುಮನ್ ಸಂಸ್ಥೆಯ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು ಟೀಪು ಸುಲ್ತಾನ್ ಅವರನ್ನು ಸನ್ಮಾನಿಸಿ ಮಾತನಾಡಿ, ಪೋಲಿಸ್ ಇಲಾಖೆಯಲ್ಲಿ ಅವರ ಕುಟುಂಬದವರು ಬ್ರಿಟಿಷ್ ಕಾಲದಿಂದಲೂ ಸೇವೆ ಸಲ್ಲಿಸುತ್ತ ಬಂದಿದ್ದು 6ನೇ ತಲೆಮಾರಿನವರಾದ ಟೀಪು ಸುಲ್ತಾನ್ ಅವರು ತಮ್ಮ ತಂದೆ-ತಾತರು ಸಲ್ಲಿಸಿದ ಸೇವೆಯಂತೆ ಸೇವೆ ಸಲ್ಲಿಸುತ್ತಿದ್ದು, ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ಪಡೆದಿರುವುದು ಹೆಮ್ಮೆಯ ಸಂಗತಿ ಎಂದರು. ಅವರ ಸೇವಾ ಕಾರ್ಯಗಳು ಹೀಗೆ ಮುಂದುವರಿಯಲಿ ಎಂದು ಹಾರೈಸಿದರು.
ಹರಿಹರ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರಾದ ನಂದಿಗಾವಿ ಶ್ರೀನಿವಾಸ್ ಅವರು ಟೀಪು ಸುಲ್ತಾನ್ ಅವರನ್ನು ಸನ್ಮಾನಿಸಿ ಶುಭಾಶಯ ಕೋರಿದರು. ಕಿರಿಯ ವಯಸ್ಸಿನಲ್ಲಿ ಪೋಲಿಸ್ ಇಲಾಖೆಗೆ ಆಯ್ಕೆಯಾಗಿರುವ ಅವರು ಮುಂದೆ ಇನ್ನಷ್ಟು ಉನ್ನತ ಹುದ್ದೆಗಳನ್ನು ಪಡೆದು ಜನಸೇವೆ ಮಾಡಲಿ ಹಾಗೂ ಅವರ ಸೇವೆ ಸಮಾಜಕ್ಕೆ ಮಾದರಿಯಾಗಲಿ ಎಂದು ಹೇಳಿದರು.
ಟೀಪು ಸುಲ್ತಾನ್ ಅವರನ್ನು ಗಾಂಧಿ ನಗರದ ಮಾಜಿ ಮುತ್ತವಳ್ಳಿ ಹರಾಜ್ ವಾಲೆ ಅಬ್ದುಲ್ ಖಲೀಲ್ ಸಾಬ್ ಅವರ ಕುಟುಂಬದ ಸದಸ್ಯರು ಸಹ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಹರಿಹರ ಗ್ರಾಮಾಂತರ ಕಾಂಗ್ರೆಸ್ ಬ್ಲಾಕ್ ಸಮಿತಿಯ ಅಧ್ಯಕ್ಷ ಎಂ.ಬಿ. ಅಬಿದ್ ಅಲಿ, ನಗರಸಭೆಯ ಮಾಜಿ ಸದಸ್ಯ ಮುಜಾಮಿಲ್ ಬಿಲ್ಲು, ಅಂಜುಮನ್ ಸಂಸ್ಥೆಯ ಸದಸ್ಯ ಹೆಚ್. ನೂರುಲ್ಲಾ, ಗುಬ್ಬಿ ಅತಾವುಲ್ಲ, ಇನಾಯತ್ ಅತಾವುಲ್ಲ ಕೆಬಿಎಂ ರೈಮಾನ್ ಮಸೀದಿ ಕುಬಾ ಅಧ್ಯಕ್ಷರು ಇರ್ಫಾನ್ ಖಾನ್ ಹಾಗೂ ಇತರ ಮುಖಂಡರು ಭಾಗವಹಿಸಿದ್ದರು.
ವರದಿ ಶೇಖ್ ಅಲ್ತಾಫ್ ವಿಜಯ್ ಪ್ರಭಾಸ್ ನ್ಯೂಸ್ ಹರಿಹರ
