Uncategorized
ಸ್ವಚ್ಛತಾ ಅಭಿಯಾನದಡಿ ಸಾರ್ವಜನಿಕರಿಗೆ ಕಸ ವಿಂಗಡನೆ ಮತ್ತು ನಿರ್ವಹಣೆ ಬಗ್ಗೆ ಅರಿವು
10 ಕೆ ಜಿ ಪ್ಲಾಸ್ಟಿಕ್ ನ್ನು ವಶಪಡಿಸಿಕೊಂಡು, 5000 ರೂಪಾಯಿಗಳ ದಂಡವನ್ನು ವಸೂಲಿ

ಮಲೆಬೇನ್ನೂರು ಪುರಸಭೆಗಳು ಸ್ವಚ್ಛತಾ ಅಭಿಯಾನದಡಿ ಸಾರ್ವಜನಿಕರಿಗೆ ಕಸ ವಿಂಗಡನೆ ಮತ್ತು ನಿರ್ವಹಣೆ ಬಗ್ಗೆ ಅರಿವು ಮೂಡಿಸುತ್ತಿದ್ದು, ಮನೆಯಲ್ಲೇ ಕಸವನ್ನು ಹಸಿ ಮತ್ತು ಒಣ ತ್ಯಾಜ್ಯವಾಗಿ ಪ್ರತ್ಯೇಕಿಸಿ ಕಸದ ವಾಹನಗಳಿಗೆ ನೀಡುವಂತೆ ಸೂಚಿಸುತ್ತಿವೆ. ತ್ಯಾಜ್ಯ ವಿಲೇವಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಚ್ಚರಿಸಲಾಗುತ್ತಿದ್ದು, ರಸ್ತೆ ಬದಿ ಕಸ ಎಸೆಯುವವರಿಗೆ ದಂಡ ವಿಧಿಸುವ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಮಲೇಬೆನ್ನೂರು ಪುರಸಭೆ ವ್ಯಾಪ್ತಿಯಲ್ಲಿ ಬರುವ ನಂದಿಗುಡಿ ರೋಡ್ ನಲ್ಲಿರುವ ವ್ಯಾಪಾರ ಮಳಿಗೆಗಳಿಗೆ ಭೇಟಿ ನೀಡಿ ಕಸ ವಿಲೇವಾರಿಯ ಬಗ್ಗೆ ಅರಿವು ಮೂಡಿಸಿ ಮತ್ತು ಪ್ಲಾಸ್ಟಿಕ್ ರೈಡ್ ಮಾಡಲಾಯಿತು ಈ ಸಂದರ್ಭದಲ್ಲಿ ಪರಿಸರ ಅಭಿಯಂತರರು , ಹಿರಿಯ ಆರೋಗ್ಯ ನಿರೀಕ್ಷಕರು, ಕಮ್ಯುನಿಟಿ ಮೊಬೈಲೈಜರ್ಸ್ ,ಆಟೋ ಚಾಲಕರು ಹಾಜರಿದ್ದು 10 ಕೆ ಜಿ ಪ್ಲಾಸ್ಟಿಕ್ ನ್ನು ವಶಪಡಿಸಿಕೊಂಡು, 5000 ರೂಪಾಯಿಗಳ ದಂಡವನ್ನು ವಸೂಲಿ ಮಾಡಲಾಯಿತು
