ಸಮಾಜದ ಎಸ್,ಎಸ್,ಎಲ್,ಸಿ ಮತ್ತು ಪಿ.ಯು.ಸಿ ಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಬಡ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿ ಕಿಟ್ ವಿತರಣಾ ಸಮಾರಂಭ

ಹರಿಹರ ಮಾದಿಗ ಸಮಾಜದ ವತಿಯಿಂದ ಪ್ರತಿ ವರ್ಷದಂತೆ. ಈ ವರ್ಷವೂ ಸಹ ಬಸವಾದಿ ಶರಣರ ಅಗ್ರ ಪಂಕ್ತಿಯಲ್ಲಿ ಬರುವ, “ಶಿವಶರಣ ಶ್ರೀ ಮಾದಾರ ಚನ್ನಯ್ಯನವರ ಜಯಂತೋತ್ಸವ ಅಂಗವಾಗಿ ಮಾದಿಗರ ಜನ ಜಾಗೃತಿ ಸಮಾವೇಶ ಹಾಗೂ ಸಮಾಜದ ಎಸ್,ಎಸ್,ಎಲ್,ಸಿ ಮತ್ತು ಪಿ.ಯು.ಸಿ ಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಬಡ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿ ಕಿಟ್ ವಿತರಣಾ ಸಮಾರಂಭವನ್ನು ದಿ: 30/05/2026 ರಂದು ಕಾ ಟ್ವೆ ಭವನದಲ್ಲಿ ಹೆಮ್ಮಿಕೊಳ್ಳಲಾಗಿದೆ ಎಂದು ಮಾದಿಗ ಸಮಾಜದ ಅಧ್ಯಕ್ಷ ಎಂ ಎಸ್ ಅನಂದ ಕುಮಾರ ತಿಳಿಸಿದರು.
<span;>ಅವರು ನಗರದ ಪತ್ರಿಕಾ ಭವನದಲ್ಲಿ ಏರ್ಪಡಿಸಿದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು.ಹರಿಹರ ಬಸವಾದಿ ಶರಣರ ಅಗ್ರ ಪಂಕ್ತಿಯಲ್ಲಿ ಬರುವ ಶಿವಶರಣ ಶ್ರೀ ಮಾದಾರ ಚನ್ನಯ್ಯನವರ ಜಯಂತೋತ್ಸವ ಇರುವ ಆದಕಾರಣ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಶೇ %75, ಕಿಂತಲೂ ಹೆಚ್ಚು ಅಂಕ ಪಡೆದ ಅರ್ಹ ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 2024-25, 2025-26ನೇ ಸಾಲಿನ ಹರಿಹರ ತಾಲ್ಲೂಕಿನ ಮಾದಿಗ ಸಮುದಾಯದ ವಿದ್ಯಾರ್ಥಿಗಳು ದಿನಾಂಕ-20-05-2026ರ ಒಳಗೆ ತಮ್ಮ ಅಂಕಪಟ್ಟಿ ಧೃಡೀಕರಣ ಪ್ರತಿ, ಜಾತಿ ಪ್ರಮಾಣಪತ್ರ, ಅಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯೊಂದಿಗೆ 2 ಪಾಸಪೋರ್ಟ್ ಫೋಟೊಗಳೊಂದಿಗೆ ಸಮಾಜದ ಅಧ್ಯಕ್ಷರು ಎಂ.ಎಸ್ ಆನಂದ ಕುಮಾರ್ ಮೊಬೈಲ್ ನಂ-7406609623, & ಕಾರ್ಯದರ್ಶಿ ಹೆಚ್. ಶಿವಪ್ಪ ಮೊಬೈಲ್ ನಂ-<span;>9342696588, ದಾಖಲೆಗಳೊಂದಿಗೆ ಸಂಪರ್ಕಿಸಲು ತಿಳಿಸಿದರು.
<span;>ಈ ಸಮಯದಲ್ಲಿ ಕೊಕ್ಕನೂರು ಬಸುರಾಜಪ್ಪ ,ಬನ್ನಿಕೋಡ ಹನುಮಂತಪ್ಪ, ಹಳಿಹಾಳ ಹನುಮಂತಪ್ಪ, ಎಂಎಸ್ ಶ್ರೀ ನಿವಾಸ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.