Uncategorized

ಶಿಕ್ಷಣ, ಆರೋಗ್ಯ, ಉದ್ಯೋಗ ತರಬೇತಿ ನೀಡುವಂಥಹ ಕಾರ್ಯವನ್ನು ಸಂಘ ಸಂಸ್ಥೆಗಳು ಮಾಡುತ್ತಿರುವುದು ಶ್ಲಾಘನೀಯವೆಂದು ಶಾಸಕ ಬಿ.ಪಿ ಹರೀಶ್

ವಿಜಯ್ ಪ್ರಭಾಸ್ ವಾರ್ತೆ

ಹರಿಹರ 14 ರೋಗ್ಯ, ಉದ್ಯೋಗ ತರಬೇತಿ ನೀಡುವಂಥಹ ಕಾರ್ಯವನ್ನು ಖಾಸಗಿ
ಸಂಘ ಸಂಸ್ಥೆಗಳು ಮಾಡುತ್ತಿರುವುದು ಶ್ಲಾಘನೀಯವೆಂದು ಶಾಸಕ ಬಿ.ಪಿ
ಹರೀಶ್ ಹೇಳಿದರು.
ವಿದ್ಯಾನಿಧಿ ಪೌಂಡೇಶನ್, ಚಕ್ರಪಾಣಿ ಆಯುರ್ವೇದ ಆಸ್ಪತ್ರೆ ಹರಿಹರ ಇವರ
ಸಂಯುಕ್ತಾಶ್ರಯದಲ್ಲಿ, ಅಮರಾವತಿ ಜೈ ಬೀಮ್ ನಗರದ ಸರ್ಕಾರಿ ಹಿರಿಯ
ಪ್ರಾರ್ಥಮಿಕ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ, ಭಾರತ ರತ್ನ ಸಂವಿಧಾನ
ಶಿಲ್ಪಿ ಡಾ| ಬಿ.ಆರ್ ಅಂಬೇಡ್ಕರ್ ರವರ 135ನೇ ಜನ್ಮ ದಿನಾಚರಣೆ ಕಾರ್ಯಕ್ರಮದ
ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿದರು.
ವಿದ್ಯಾನಿಧಿ ಪೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷ ನ್ಯಾಯವಾದಿ ವೀರೇಶ
ಅಜ್ಜನ್ಣನವರ್, ಚಕ್ರಪಾಣಿ ಆಯುರ್ವೇದ ಆಸ್ಪತ್ರೆಯ ವೈದ್ಯ ಡಾ| ನಿಧಿ
ಚಕ್ರಪಾಣಿ, ತಪೋವನ ಆರ್ಯವೇದ ಆಸ್ಪತ್ರೆಯ ಚೇರ್‌ಮನ್ ಡಾ|
ಶಶಿಕುಮಾರ ಮೆರ‍್ವಾಡೆ, ಕಾರ್ಮಿಕ ಮುಖಂಡ ಹೆಚ್.ಕೆ ಕೊಟ್ರಪ್ಪ, ಕ್ಷೇತ್ರ
ಶಿಕ್ಷಣಾಧಿಕಾರಿ ದುರುಗಪ್ಪ ಡಿ, ವಕೀಲರ ಸಂಘದ ಮಾಜಿ ಅಧ್ಯಕ್ಷ ರುದ್ರಗೌಡ ಪಿ,
ನ್ಯಾಯವಾದಿ ಆನಂದ, ಮುಖ್ಯ ಶಿಕ್ಷಕ ಚನ್ನಬಸಪ್ಪ ಬಿ, ಸಂತೋಷ ಗುಡಿಮನಿ
ಇದ್ದರು. ಕಾರ್ಯಕ್ರಮದ ನಿಮಿತ್ತ ಸಾವಿರಾರು ಜನರ ಆರೋಗ್ಯ ತಪಾಸಣಾ
ಶಿಬಿರವನ್ನು ನಡೆಸಲಾಯಿತು.


ವಿದ್ಯಾನಿಧಿ ಪೌಂಡೇಶನ್, ಚಕ್ರಪಾಣಿ ಆಯುರ್ವೇದ
ಆಸ್ಪತ್ರೆ ಹರಿಹರ ಇವರ ಸಂಯುಕ್ತಾಶ್ರಯದಲ್ಲಿ, ಅಮರಾವತಿ ಜೈ ಬೀಮ್
ನಗರದ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ,
ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಶಾಸಕ ಬಿ.ಪಿ ಹರೀಶ್ ಅವರು ತಮ್ಮ
ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

Related Articles

Leave a Reply

Your email address will not be published. Required fields are marked *

Back to top button
Click to listen highlighted text!
error: Content is protected !!