ಮೈಲಾರಲಿಂಗೇಶ್ವರ ಪ್ರೌಢಶಾಲೆಯ ಶಾಲಾ ವಿದ್ಯಾರ್ಥಿಗಳಿಂದ ಜಾಗೃತಿ ಜಾಥ ಕಾರ್ಯಕ್ರಮ ಹಾಗೂ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಲೇರಿಯಾ ವಿರೋಧ ಮಸಾಚರಣೆಯ ಪ್ರಯುಕ್ತ ಆರೋಗ್ಯ ಶಿಕ್ಷಣ ಕಾರ್ಯಕ್ರಮ
ಆಯುಷ್ಮಾನ್ ಆರೋಗ್ಯ ಕೇಂದ್ರ ದೇವರಬೆಳಕೆರೆ ಯ ದೇವರಬೆಳಕೆರೆ ಗ್ರಾಮದಲ್ಲಿ ಇಂದು ಮಲೇರಿಯಾ ವಿರೋಧ ಮಾಸಾಚಾರಣೆ
ಪ್ರಾಥಮಿಕ ಆರೋಗ್ಯ ಕೇಂದ್ರ ದೇವರ ಬೆಳಕೆರೆ ವ್ಯಾಪ್ತಿಯ ಆಯುಷ್ಮಾನ್ ಆರೋಗ್ಯ ಕೇಂದ್ರ ದೇವರಬೆಳಕೆರೆ ಯ ದೇವರಬೆಳಕೆರೆ ಗ್ರಾಮದಲ್ಲಿ ಇಂದು ಮಲೇರಿಯಾ ವಿರೋಧ ಮಾಸಾಚಾರಣೆ ಜೂನ್ 2026 ಕಾರ್ಯಕ್ರಮವನ್ನು ಶ್ರೀ ಮೈಲಾರಲಿಂಗೇಶ್ವರ ಪ್ರೌಢಶಾಲೆಯ ಶಾಲಾ ವಿದ್ಯಾರ್ಥಿಗಳಿಂದ ಜಾಗೃತಿ ಜಾಥ ಕಾರ್ಯಕ್ರಮ ಹಾಗೂ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಲೇರಿಯಾ ವಿರೋಧ ಮಸಾಚರಣೆಯ ಪ್ರಯುಕ್ತ ಆರೋಗ್ಯ ಶಿಕ್ಷಣ ಕಾರ್ಯಕ್ರಮ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಆಶ್ರಿತ ರೋಗವಾಹಕ ರೋಗಗಳ ನಿಯಂತ್ರಣ ಅಧಿಕಾರಿಗಳಾದಂತ ಡಾಕ್ಟರ್ ಗಂಗಾಧರ್ ಸರ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಮಲೇರಿಯಾ ವಿರೋಧ ಮಾಸಾಚರಣೆ ಕಾರ್ಯಕ್ರಮದ ಕುರಿತು ವಿದ್ಯಾರ್ಥಿಗಳಿಗೆ ರೋಗ ಮತ್ತು ರೋಗ ಲಕ್ಷಣಗಳ ಕುರಿತು ಹಾಗೂ ನಿಯಂತ್ರಣದ ಕುರಿತು ಮಾತನಾಡಿದರು. ಹರಿಹರ ತಾಲೂಕಿನ ಆರೋಗ್ಯ ಅಧಿಕಾರಿಗಳಾದಂತ ಡಾಕ್ಟರ್ ಅಬ್ದುಲ್ ಖಾದರ್ ಸರ್ ಅವರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರ ದೇವರಬೆಳಕೆರೆಯ ಆಡಳಿತ ಆರೋಗ್ಯ ಅಧಿಕಾರಿಗಳಾದಂತ ಡಾಕ್ಟರ್ ನವ್ಯ ಎಂ ಆರ್ ರವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ಮಲೇರಿಯಾ ರೋಗ ನಿಯಂತ್ರಣ ಹಾಗೂ ಸಾಂಕ್ರಾಮಿಕ ರೋಗಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಹರಿಹರ ತಾಲೂಕಿನ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದಂತ ಶ್ರೀಯುತ ಉಮ್ಮಣ್ಣ ಹಾಗೂ ಜಿಲ್ಲಾಮಟ್ಟದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದಂತ ಶ್ರೀಯುತ ಕರಿಯಪ್ಪ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದಂತ ಶ್ರೀಯುತ ಮಂಜುನಾಥ್ ದೊಡ್ಮನಿ ಹಾಗೂ ಆರೋಗ್ಯ ನಿರೀಕ್ಷಣಾಧಿಕಾರಿ ಪ್ರಹ್ಲಾದ್ ರವರು ಆಗಮಿಸಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿಗಳಾದಂತ ಶ್ರೀಯುತ ಆದರ್ಶ್ ಸ್ವಾಗತ ನಿರೂಪಣೆ ಹಾಗೂ ವಂದನಾರ್ಪಣೆ ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟರು. ಕಾರ್ಯಕ್ರಮದಲ್ಲಿ ಮಹಮ್ಮದ್ ಇಮ್ರಾನ್, ರೇಖಾ ಸಿ ಎಂ, ನಯನ, ಸಂಜು, ಮಹಮದ್ ಖಾನ್, ಅಕ್ಷತಾ, ಪೂಜಾ, ಮಹಮ್ಮದ್, ಕೊಟ್ರೇಶಿ, ಪೂಜಾ ದೀಪ, ಸುನಿತಾ, ಜ್ಯೋತಿ, ಹಾಗೂ ಆಶಾ ಕಾರ್ಯಕರ್ತೆಯರು ಗ್ರಾಮದ ಸಾರ್ವಜನಿಕರು ಶಾಲೆಯ ಶಿಕ್ಷಕರುಂದದವರು ಮತ್ತು ಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು.