ಮಲೇಬೆನ್ನೂರು: ಹಿಂದೂ ಮಹಾಸಭಾ ಗಣಪತಿ ಉತ್ಸವದ ಅಂಗವಾಗಿ ಆಕರ್ಷಕ ರಂಗೋಲಿ ಸ್ಪರ್ಧೆ.
ವಿವಿಧ ಬಗೆಯ ಆಕರ್ಷಕ ರಂಗೋಲಿಗಳನ್ನು ಬಿಡಿಸಿ ನೆರೆದಿದ್ದ ಸಾರ್ವಜನಿಕರ ಗಮನ ಸೆಳೆದರು.

ಮಲೇಬೆನ್ನೂರು: ಹಿಂದೂ ಮಹಾಸಭಾ ಗಣಪತಿ ಉತ್ಸವದ ಅಂಗವಾಗಿ ಆಕರ್ಷಕ ರಂಗೋಲಿ ಸ್ಪರ್ಧೆ.
ಮಲೇಬೆನ್ನೂರು: ಇಲ್ಲಿನ 5ನೇ ವರ್ಷದ ಹಿಂದೂ ಮಹಾ ಸಭಾ ಗಣಪತಿ ಉತ್ಸವದ ಅಂಗವಾಗಿ ಪಿ.ಡಬ್ಲ್ಯೂ.ಡಿ ಕ್ರಿಕೆಟರ್ಸ್ ವತಿಯಿಂದ ಮಹಿಳೆಯರಿಗಾಗಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯು ಅತ್ಯಂತ ಯಶಸ್ವಿಯಾಗಿ ಜರುಗಿತು.
ಗಣಪತಿ ಪೆಂಡಾಲ್ ಆವರಣದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ನೂರಾರು ಮಹಿಳೆಯರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು. ಸ್ಪರ್ಧಾಕಾಂಕ್ಷಿಗಳು ತಮ್ಮ ಕಲಾತ್ಮಕ ಕೈಚಳಕದ ಮೂಲಕ ವಿವಿಧ ಬಗೆಯ ಆಕರ್ಷಕ ರಂಗೋಲಿಗಳನ್ನು ಬಿಡಿಸಿ ನೆರೆದಿದ್ದ ಸಾರ್ವಜನಿಕರ ಗಮನ ಸೆಳೆದರು.
ಮಹಿಳೆಯರು ಬಿಡಿಸಿದ ಸಾಂಪ್ರದಾಯಿಕ ರಂಗೋಲಿಗಳು, ಆಧುನಿಕ ಶೈಲಿಯ ವಿನ್ಯಾಸಗಳು ಹಾಗೂ ಗಣಪತಿ ಹಬ್ಬದ ವಿಶೇಷ ರಂಗೋಲಿಗಳು ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾದವು. ಮಹಿಳೆಯರಲ್ಲಿ ಅಡಗಿರುವ ಸುಪ್ತ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಹೊರಹಾಕಲು ಈ ಸ್ಪರ್ಧೆಯು ಒಂದು ಉತ್ತಮ ವೇದಿಕೆಯನ್ನು ಕಲ್ಪಿಸಿಕೊಟ್ಟಿತ್ತು.
ಈ ಸಂದರ್ಭದಲ್ಲಿ ಹಿಂದೂ ಮಹಾ ಸಭಾ ಗಣಪತಿ ಉತ್ಸವ ಸಮಿತಿಯ ಪದಾಧಿಕಾರಿಗಳು, ಪಿ.ಡಬ್ಲ್ಯೂ.ಡಿ ಕ್ರಿಕೆಟರ್ಸ್ ತಂಡದ ಪ್ರಮುಖ ಸದಸ್ಯರು ಹಾಗೂ ಸ್ಥಳೀಯ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದು, ವಿಜೇತರಿಗೆ ಪ್ರೋತ್ಸಾಹ ನೀಡಿದರು.
ವರದಿ ತೌಫೀಕ್ ಉಲ್ಲ ವಿಜಯ್ ಪ್ರಭಾಸ್ ನ್ಯೂಸ್ ಮಲೆಬೇನ್ನೂರು