Uncategorized
ಕೊಲ್ಲಿ ರಾಷ್ಟ್ರಗಳಿಗೆ ಇರಾನ್ ಕೊಟ್ಟ ಅತಿದೊಡ್ಡ ವಾರ್ನಿಂಗ್ ಏನು? ರೇಡಿಯೋ, ಟಿವಿಯಲ್ಲಿ ಪ್ರಸಾರವಾದ ಆ ಶಬ್ದಕ್ಕೆ ಜಗತ್ತೇ ಶಾಕ್!
ಕೇವಲ ಮಾತಿನ ಚಕಮಕಿಯಾಗಿದ್ದ ಪರಿಸ್ಥಿತಿ ಈಗ 'ಬಂದರುಗಳ ಧ್ವಂಸ'ದ ಎಚ್ಚರಿಕೆಯವರೆಗೆ ಬಂದು ನಿಂತಿರುವುದು ಜಾಗತಿಕ ಮಟ್ಟದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಅಷ್ಟಕ್ಕೂ ಇರಾನ್ ಮಾಧ್ಯಮಗಳಲ್ಲಿ ಅಬ್ಬರಿಸಿದ ಆ ಭೀಕರ ಸಂದೇಶದ ಹಿಂದಿರುವ ಅಸಲಿ ಉದ್ದೇಶವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
ಕೊಲ್ಲಿ ರಾಷ್ಟ್ರಗಳ (Gulf Nation) ಬಂದರುಗಳನ್ನು ಧೂಳೀಪಟ ಮಾಡುತ್ತೇವೆ. ಇರಾನ್‌ನ ಸರ್ಕಾರಿ ರೇಡಿಯೋ (Radio) ಮತ್ತು ಟಿವಿ ವಾಹಿನಿಗಳಲ್ಲಿ(Tv Chanel) ಹಠಾತ್ತನೆ ಮೊಳಗಿದ ಈ ಒಂದು ಎಚ್ಚರಿಕೆ ಈಗ ಇಡೀ ಅರಬ್ ಜಗತ್ತನ್ನೇ ನಡುಗಿಸಿದೆ. ಪಶ್ಚಿಮ ಏಷ್ಯಾದಲ್ಲಿ(Middle East) ಯುದ್ಧದ (War) ಕಾರ್ಮೋಡ ಕವಿಯುತ್ತಿರುವ ಬೆನ್ನಲ್ಲೇ, ಇರಾನ್ (Iran) ನೇರವಾಗಿಯೇ ಯುಎಇ ಮತ್ತು ಸೌದಿ ಅರೇಬಿಯಾದ ಆರ್ಥಿಕ ಕೇಂದ್ರಗಳ ಮೇಲೆ ಕಣ್ಣಿಟ್ಟಿದೆಯೇ ಎಂಬ ಆತಂಕ ಶುರುವಾಗಿದೆ. ಕೇವಲ ಮಾತಿನ ಚಕಮಕಿಯಾಗಿದ್ದ ಪರಿಸ್ಥಿತಿ ಈಗ ‘ಬಂದರುಗಳ ಧ್ವಂಸ‘ದ ಎಚ್ಚರಿಕೆಯವರೆಗೆ ಬಂದು ನಿಂತಿರುವುದು ಜಾಗತಿಕ ಮಟ್ಟದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಅಷ್ಟಕ್ಕೂ ಇರಾನ್ ಮಾಧ್ಯಮಗಳಲ್ಲಿ ಅಬ್ಬರಿಸಿದ ಆ ಭೀಕರ ಸಂದೇಶದ ಹಿಂದಿರುವ ಅಸಲಿ ಉದ್ದೇಶವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
ಇರಾನ್ ನೀಡಿದ ಪ್ರತಿಕ್ರಿಯೆ ಏನು?
ಅಮೆರಿಕದ ಈ ಕ್ರಮಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿದ ಇರಾನ್, ತನ್ನ ಬಂದರುಗಳಿಗೆ ಬೆದರಿಕೆ ಬಂದರೆ ಪರ್ಷಿಯನ್ ಕೊಲ್ಲಿಯಲ್ಲಿರುವ ಎಲ್ಲಾ ಬಂದರುಗಳೂ ಸುರಕ್ಷಿತವಾಗಿರುವುದಿಲ್ಲ ಎಂದು ತೀವ್ರ ಎಚ್ಚರಿಕೆ ನೀಡಿದೆ. ಈ ಹೇಳಿಕೆ ಯುಎಇ, ಕತಾರ್ ಮತ್ತು ಸೌದಿ ಅರೇಬಿಯಾ ದೇಶಗಳಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿದೆ.
ಇರಾನ್ ನೀಡಿದ ಸ್ಪಷ್ಟ ಸಂದೇಶ ಯಾವುದು ಗೊತ್ತಾ?
ಇರಾನ್ ಸರ್ಕಾರದ ಪ್ರಕಾರ, “ಭದ್ರತೆ ಎಲ್ಲರಿಗೂ ಇರಬೇಕು, ಇಲ್ಲವಾದರೆ ಯಾರಿಗೂ ಇರದು” ಎಂಬುದು ಸ್ಪಷ್ಟ ಸಂದೇಶ. ಅಮೆರಿಕ ತನ್ನ ನೌಕಾ ದಿಗ್ಬಂಧನದ ಮೂಲಕ ಇರಾನ್‌ನ ಆರ್ಥಿಕತೆಯನ್ನು ದುರ್ಬಲಗೊಳಿಸಲು ಯತ್ನಿಸುತ್ತಿದೆ. ಆದರೆ ಇರಾನ್ ಇದನ್ನು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಮತ್ತು “ಕಡಲ್ಗಳ್ಳತನ” ಎಂದು ಕರೆದಿದೆ.
ಹೆಚ್ಚಾದ ಸಂಘರ್ಷ!
ಇದರ ನಡುವೆ, ಯುನೈಟೆಡ್ ಸ್ಟೇಟ್ಸ್ ಸೆಂಟ್ರಲ್ ಕಮಾಂಡ್ ನೀಡಿದ ಮಾಹಿತಿ ಪ್ರಕಾರ, ದಿಗ್ಬಂಧನ ಅಧಿಕೃತವಾಗಿ ಜಾರಿಗೆ ಬಂದಿದೆ. ಇದರಿಂದ ಪರ್ಷಿಯನ್ ಕೊಲ್ಲಿಯ ಸಾಗರ ಮಾರ್ಗಗಳಲ್ಲಿ ಸಂಘರ್ಷ ಮತ್ತಷ್ಟು ಹೆಚ್ಚಾಗಿದೆ. ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತಾ ಸಮಿತಿಯ ಪ್ರತಿನಿಧಿಗಳು ಈ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದು, ಅಗತ್ಯವಿದ್ದರೆ ತಮ್ಮ “ಗುಪ್ತ ಕಾರ್ಡ್‌ಗಳನ್ನು” ಬಳಕೆ ಮಾಡುವುದಾಗಿ ಸೂಚಿಸಿದ್ದಾರೆ.
ಮುಕ್ತ ಸವಾಲು ಹಾಕಿದ ಕುದ್ಸಿ ಕಮಾಂಡರ್!
ಸ್ಥಿತಿಗೆ ಇನ್ನಷ್ಟು ತೀವ್ರತೆಯನ್ನು ನೀಡಿದವರು ಕುದ್ಸ್ ಪಡೆಗಳ ಕಮಾಂಡರ್ ಇಸ್ಮೈಲ್ ಖಾನಿ. ಅವರು ಅಮೆರಿಕ ಪಶ್ಚಿಮ ಏಷ್ಯಾದಿಂದ ಹಿಂತಿರುಗಲೇಬೇಕಾಗುತ್ತದೆ ಎಂದು ಮುಕ್ತ ಸವಾಲು ಹಾಕಿದ್ದಾರೆ. ಯೆಮೆನ್ ಯುದ್ಧದ ಉದಾಹರಣೆಯನ್ನು ನೀಡಿದ ಅವರು, ಇರಾನ್ ಬೆಂಬಲಿತ ಹೌತಿ ಬಂಡುಕೋರರು ಮತ್ತೊಮ್ಮೆ ಮಂದೇಬ್ ಜಲಸಂಧಿಯನ್ನು ಗುರಿಯಾಗಿಸಿ ಕೆಂಪು ಸಮುದ್ರದ ವ್ಯಾಪಾರವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಬಹುದು ಎಂದು ಎಚ್ಚರಿಸಿದರು.
ಯುದ್ಧ ವಿಸ್ತಾರವಾಗುವ ಸಾಧ್ಯತೆ!
ಇದರಿಂದ ಯುದ್ಧದ ವಿಸ್ತರಣೆ ಭೀತಿ ಹೆಚ್ಚಾಗಿದೆ. ಇರಾನ್ ಪ್ರತಿದಾಳಿ ನಡೆಸಿದರೆ, ಸೌದಿ ಅರೇಬಿಯಾದ ಜುಬೈಲ್ ಅಥವಾ ಯುಎಇಯ ಜೆಬೆಲ್ ಅಲಿ ಬಂದರುಗಳಂತಹ ಪ್ರಮುಖ ವಾಣಿಜ್ಯ ಕೇಂದ್ರಗಳು ಗುರಿಯಾಗುವ ಸಾಧ್ಯತೆ ಇದೆ. ಈ ಬಂದರುಗಳು ಜಾಗತಿಕ ತೈಲ ಮತ್ತು ವ್ಯಾಪಾರದ ಜೀವನಾಡಿಯಾಗಿದ್ದು, ಯಾವುದೇ ದಾಳಿ ವಿಶ್ವ ಆರ್ಥಿಕತೆಗೆ ಭಾರೀ ಹೊಡೆತ ನೀಡಬಹುದು.
ಜಾಗತಿಕ ತೈಲ ಮಾರುಕಟ್ಟೆ ಅಸ್ಥಿರ!
ಈಗಾಗಲೇ ದಿಗ್ಬಂಧನದ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಅಸ್ಥಿರತೆ ಕಂಡುಬಂದಿದೆ. ಬೆಲೆಗಳು ಏರಿಳಿತಗೊಳ್ಳುತ್ತಿದ್ದು, ಪೂರೈಕೆ ಸರಪಳಿಯಲ್ಲಿ ಅನಿಶ್ಚಿತತೆ ಉಂಟಾಗಿದೆ. ಹಾರ್ಮುಜ್ ಜಲಸಂಧಿಯ ಮೂಲಕವೇ ವಿಶ್ವದ ಬಹುಪಾಲು ತೈಲ ಸಾಗಾಣಿಕೆ ನಡೆಯುವುದರಿಂದ, ಇಲ್ಲಿ ಉಂಟಾಗುವ ಯಾವುದೇ ವ್ಯತ್ಯಯವು ಜಾಗತಿಕ ಆರ್ಥಿಕತೆಯನ್ನು ನಡುಗಿಸಬಲ್ಲದು.
ಸಧ್ಯಕ್ಕೆ ಉಳಿದಿರುವ ಪ್ರಶ್ನೆ ಇದೆ!
ಅಮೆರಿಕ-ಇರಾನ್ ಸಂಘರ್ಷವು ಈಗ ಕೇವಲ ಪ್ರಾದೇಶಿಕ ಸಮಸ್ಯೆಯಾಗಿ ಉಳಿದಿಲ್ಲ. ಇದು ಜಾಗತಿಕ ಶಾಂತಿ, ತೈಲ ಪೂರೈಕೆ ಮತ್ತು ವ್ಯಾಪಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಮುಂದಿನ ದಿನಗಳಲ್ಲಿ ಈ ಸಂಘರ್ಷ ಯಾವ ದಿಕ್ಕಿಗೆ ಸಾಗುತ್ತದೆ ಎಂಬುದು ವಿಶ್ವದ ಎಲ್ಲ ದೇಶಗಳ ಕಣ್ಣುಗಳ ಮುಂದೆ ನಡೆಯುತ್ತಿರುವ ಅತ್ಯಂತ ಮಹತ್ವದ ಪ್ರಶ್ನೆಯಾಗಿದೆ.