Uncategorized

ಜಿಲ್ಲೆಯಲ್ಲಿ ಮೇವಿನ ಕೊರತೆಯಿಲ್ಲ: ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ

ಮುಂದಿನ ಎರಡು ವರ್ಷಗಳಿಗೆ ಆಗುವಷ್ಟು ಮೇವನ್ನು ಮುನ್ನೆಚ್ಚರಿಕೆಯಾಗಿ ಶೇಖರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.

ಜಿಲ್ಲೆಯಲ್ಲಿ ಮೇವಿನ ಕೊರತೆಯಿಲ್ಲ: ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ
ದಾವಣಗೆರೆ,ಜಿಲ್ಲೆಯಲ್ಲಿ ಪ್ರಸ್ತುತ ಯಾವುದೇ ಮೇವಿನ ತೊಂದರೆಯಿಲ್ಲ ಹಾಗೂ ಮುಂದಿನ ಎರಡು ವರ್ಷಗಳಿಗೆ ಆಗುವಷ್ಟು ಮೇವನ್ನು ಮುನ್ನೆಚ್ಚರಿಕೆಯಾಗಿ ಶೇಖರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಶಾಮ್ಲಾ ಇಕ್ಬಾಲ್ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಶನಿವಾರ ನಡೆಸಿದ ವೀಡಿಯೋ ಸಂವಾದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲೆಯ ಅಭಿವೃದ್ದಿ ಕುರಿತು ಅಂಕಿ ಅಂಶಗಳೊಂದಿಗೆ ಮಾಹಿತಿ ನೀಡಿದರು.

ಪ್ರಸ್ತುತ ಜಿಲ್ಲೆಯಲ್ಲಿ ಬೇಸಿಗೆ ರಾಗಿ ಮತ್ತು ಭತ್ತದ ಕಟಾವು ಜಾರಿಯಲ್ಲಿದ್ದು, ಅಧಿಕಾರಿಗಳ ಮನವಿಗೆ ಓಗೊಟ್ಟು ರೈತರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಪ್ರತಿಯೊಬ್ಬ ರೈತರೂ ಸ್ವಯಂಪ್ರೇರಿತರಾಗಿ ತಲಾ ಒಂದು ಕಂತೆ ಮೇವನ್ನು ಉಚಿತವಾಗಿ ನೀಡುತ್ತಿರುವುದು ಶ್ಲಾಘನೀಯವಾಗಿದೆ.

ಹೀಗೆ, ಸಂಗ್ರಹವಾದ ಮೇವನ್ನು ಮೊದಲು ಜಿಲ್ಲೆಯ ಗೋಶಾಲೆಗಳಿಗೆ ಮತ್ತು ಬಡ ರೈತರಿಗೆ ಉಚಿತವಾಗಿ ವಿತರಿಸಲಾಗುವುದು. ಜಿಲ್ಲೆಯ ಅಗತ್ಯತೆ ಪೂರ್ಣಗೊಂಡ ನಂತರ, ಉಳಿಯುವ ಹೆಚ್ಚುವರಿ ಮೇವನ್ನು ತೀವ್ರ ಬರಗಾಲ ಎದುರಿಸುತ್ತಿರುವ ಜಿಲ್ಲೆಗಳಿಗೆ ಸರಬರಾಜು ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button
Click to listen highlighted text!
error: Content is protected !!