Welcome to ವಿಜಯ್ ಪ್ರಭಾಸ್ ನ್ಯೂಸ್   Click to listen highlighted text! Welcome to ವಿಜಯ್ ಪ್ರಭಾಸ್ ನ್ಯೂಸ್
Uncategorized

ಕುಂದುಕೊರತೆ ಸಭೆ, ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಂಡುಕೊಳ್ಳಲು ಎಸ್.ಪಿ.ಸೂಚನೆ

ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೇಖರ್.ಹೆಚ್.ಟಿ ಪೊಲೀಸ್ ಅಧಿಕಾರಿಗಳಿಗೆ ಸೂಚನೆ

ಕುಂದುಕೊರತೆ ಸಭೆ, ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಂಡುಕೊಳ್ಳಲು ಎಸ್.ಪಿ.ಸೂಚನೆ
ದಾವಣಗೆರೆ, ಜಿಲ್ಲೆಯಲ್ಲಿರುವ ಪ.ಜಾತಿ ಮತ್ತು ಪಂಗಡದವರ ಕುಂದು ಕೊರತೆಗಳ ಬಗ್ಗೆ ತ್ವರಿತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅವರ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೇಖರ್.ಹೆಚ್.ಟಿ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಶನಿವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಪ್ಪರ್ಚನೆ ಸಲ್ಲಿಸಿ ಬಳಿಕ ಮಾತನಾಡಿರು.

ಸಾರ್ವಜನಿಕರು ಸಿಗ್ನಲ್‌ನಲ್ಲಿ ಯಾರು ಪೊಲೀಸ್ ಇಲ್ಲವೆಂದು ಸಿಗ್ನಲ್ ಜಂಪ್ ಮಾಡಿದರೆ ಅದು ನಿಮ್ಮ ಬೇಜವಾಬ್ದಾರಿ, ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಸುಮಾರು ರೂ.33 ಕೋಟಿ ರೂಪಾಯಿಗಳ ದಂಡದ ನೋಟಿಸ್ ಜಾರಿಯಾಗಿರುತ್ತದೆ. ಪರಿಶಿಷ್ಟರ ಕಾಲೋನಿಗಳಲ್ಲಿ ಅಕ್ರಮ ಮದ್ಯ ಮಾರಾಟ, ಸ್ಮಶಾನ ಭೂಮಿ ಕೊರತೆ, ಸ್ಮಶಾನಕ್ಕೆ ಮೂಲಸೌಲಭ್ಯಗಳ ಕೊರತೆ, ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಣೆ, ಹೀಗೆ ಅನೇಕ ಸಮಸ್ಯೆಗಳಿವೆ ಎಂದು ದಲಿತ ಮುಖಂಡರು ಸಭೆಗೆ ತಿಳಿಸಿದರು.

ಹೊನ್ನಾಳಿ ಶಾಲಾ ಆವರಣದಲ್ಲಿ ಕಿಡಿಗೇಡಿಗಳು ಮದ್ಯಪಾನ ಮಾಡುತ್ತಿದ್ದಾರೆ. ಎಂದು ಹೇಳಿದರು ಅದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು. ಚನ್ನಗಿರಿಯ ಹಟ್ಟಿ ಗ್ರಾಮದಲ್ಲಿರುವ ಎ.ಕೆ ಕಾಲೋನಿ ಜನರನ್ನು ಶೋಷಣೆ ಮಾಡುತ್ತಿದ್ದಾರೆ ಎಂದು ದೂರಿದರು. ಕಂಸಾಗರದಲ್ಲಿ ಸ್ಮಾಶನ ಜಾಗವನ್ನು ನೀಡುವಂತೆ ಕೋರಿದರು.
ಸರ್ಕಾರಿ ಶಾಲೆಗಳಲ್ಲಿ ಸರಿಯಾಗಿ ಮಕ್ಕಳಿಗೆ ಶಿಕ್ಷಣ ಸಿಗುತ್ತಿಲ್ಲ. ಶಿಕ್ಷಕರು ಮಕ್ಕಳಿಗೆ ಬೇಕಾ ಬಿಟ್ಟಿ ಪಾಠವನ್ನು ಕಲಿಸಿಕೊಡುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ವರಿಷ್ಠಾಧಿಕಾರಿ ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶವು ಅತಿ ಹೆಚ್ಚು ಅಂಕವನ್ನು ಪಡೆದಿರುವುದು ನಮ್ಮ ಸರ್ಕಾರಿ ಶಾಲೆಗಳು ಎಂದು ಬಹಳ ಹೆಮ್ಮೆಯಿಂದ ಹೇಳಿದರು.
ಸೂಳೆಕೆರೆ ಬಳಿ ಇನ್ನೂ ಅತಿ ಹೆಚ್ಚು ಸಿಸಿ ಕ್ಯಾಮಾರ ಅಳವಡಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಖಾಸಗಿ ಶಾಲೆಗಳಲ್ಲಿ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಫ್ ಬರುವಂತೆ ಮಾಡಿ ಎಂದರು.

ಹರಿಹರ ಸರ್ಕಾರಿ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಸರಿಯಾದ ಔಷಧಿ ನೀಡುತ್ತಿಲ್ಲವೆಂದು ಪ್ರಾಸ್ತಾಪಿಸಿದರು. ಹಾಗೂ ಹರಿಹರದ ಗುರುಭವನದಲ್ಲಿರುವ ಅಂಬೇಡ್ಕರ್ ಪುತ್ಥಳಿಯನ್ನು ಸ್ವಚ್ಚಗೊಳಿಸುವಂತೆ ಮನವಿ ಮಾಡಿದರು. ಹರಿಹರದ ರೈಲ್ವೆ ಬ್ರೀಜ್ ಹತ್ತಿರ ಇರುವ ರಸ್ತೆಗಳ ಗುಂಡಿಗಳನ್ನು ಮುಚ್ಚುವಂತೆ ಹೇಳಿದರು. ಆಶ್ರಯ ಕಾಲೋನಿಯಲ್ಲಿ 150 ಮನೆ ಇವೆ. ಆದರೆ ಅವರಿಗೆ ಮೂಲಭೂತ ಸೌಲಭ್ಯವನ್ನು ಕಲ್ಪಿಸಿಕೊಡುವಂತೆ ಮನವಿ ಮಾಡಿದರು.

ಮಾಯಕೊಂಡದ ಹತ್ತಿರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಲೈಸೆನ್ಸ್ ಇಲ್ಲೆದೇ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ. ಕೂಡಲೇ ಅಬಕಾರಿ ಇಲಾಖೆಯವರು ಕ್ರಮ ಕೈಗೊಳುವಂತೆ ಮನವಿ ಮಾಡಿದರು. ಮಲೇಬೆನ್ನೂರಿನಲ್ಲಿ ಮಟ್ಕಾ, ಜೂಜು ಇನ್ನೂ ಅನೇಕ ರೀತಿ ಅಕ್ರಮ ದಂಧೆ ನಡೆಯುತ್ತಿದೆ ಎಂದು ತಿಳಿಸಿದರು.
ಪಿಎಸ್‌ಐ ಕಳೆದಬಾರಿ ಮಂಡಿಸಿರುವ ಅನುಪಾಲನ ವರದಿಯನ್ನು ಸಭೆಗೆ ಮಂಡಿಸಿದರು. ಡಿವೈಎಸ್‌ಪಿ ಶರಣಬಸವೇಶ್ವರ ಪ್ರಾಸ್ತವಿಕ ಮಾತನಾಡಿದರು.
ಡಿವೈಎಸ್‌ಪಿ ಬಸವರಾಜ್, ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!
Click to listen highlighted text!