ಹರಿಹರದ ಕ್ರಿಲೋಸ್ಕರ ಹೆಚ್ಪಿ ಗ್ಯಾಸ್ ಏಜೆನ್ಸಿ ಅಮಾನತು ಗೊಳಿಸಿಲಾಗಿದೆ ಎಂದು ಶಾಸಕ ಬಿಪಿ ಹರೀಶ್ ಹೇಳಿದರು.
ಹರಿಹರ ಮಧ್ಯಪ್ರಾಚ್ಯ ಸಂಘರ್ಷದಿಂದ ಉದ್ಭವಿಸಿರುವ ಎಲ್‌ಪಿಜಿ ಸಮಸ್ಯೆಯನ್ನೇ ಕೆಲವರು ಬಂಡವಾಳ ಮಾಡಿಕೊಂಡು ಗೃಹಬಳಕೆ ಗ್ಯಾಸ್ ಸಿಲಿಂಡರ್ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಕಂಡುಬಂದಿದ್ದು, ತಾಲೂಕಾಡಳಿತ, ಆಹಾರ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಅಕ್ರಮ ಕಡಿವಾಣಕ್ಕೆ ಶನಿವಾರ ತಾಲೂಕ ಅಡಳಿತ ಸಂಭಾಂಗಣದಲ್ಲಿ ಹರಿಹರ ಕ್ಷೇತ್ರದ ಶಾಸಕರಾದ ಬಿ.ಪಿ ಹರೀಶ್ ರವರ ಅಧ್ಯಕ್ಷತೆಯಲ್ಲಿ ಗ್ಯಾಸ್ ಏಜೆನ್ಸಿ ಮಾಲೀಕರ ಸಭೆ ಕರೆದು ಅವರಿಂದ ಅಗುತ್ತಿರು ಜನರಿಗೆ ಅನಾನೂಕುಲದ ಬಗ್ಗೆ ವಿವರಣೆ ಪಡೆದು ಯಾರು ಎಜ್ಜೆನ್ಸಿ ಹತ್ತಿರ ಯಾರಿಗೂ ಸಿಲಿಂಡರ್ ಕೊಡಬಾರದು ಮನೆ ಮನೆಗೆ ಹೊಗಿ ಸಿಲೆಂಡರ ವಿತರಣೆ ಮಾಡಬೇಕು ಎಂದು ಸೂಚನೆ ನೀಡಿದರು.
ಹರಿಹರದ ಕ್ರೀಲೋಸ್ಕರ ಕಂಪನಿಯ ಹೆಚ್ ಪಿ ಗ್ಯಾಸ್ ಎಜೆನ್ಸಿ ಅಮಾನತುಗೊಳಿಸಿ ದಾವಣಗೆರೆಯ ಜೊತಿ ಗ್ಯಾಸ್ ಎಜೆನ್ಸಿ ಹಾಗೂ ದೇವನಗರಿ ಗ್ಯಾಸ್ ಎಜೆನ್ಸಿಗೆ ಕೊಡಲಾಗಿದೆ ಅವರು ನಮ್ಮ ಹರಿಹರದಲ್ಲಿ ಇನ್ನೂ ಮುಂದೆ ಯಾರಿಗೂ ತೊಂದರೆ ಅಗದಂತೆ ಮನೆ ಮನೆಗೆ ಗ್ಯಾಸ್ ವಿತರಣೆ ಮಾಡುತ್ತಾರೆ ಎಂದು ಹೇಳಿದರು
ರಾಜ್ಯದೆಲ್ಲೆಡೆಯಂತೆ ನಮ್ಮ ತಾಲೂಕಿನಲ್ಲಿ ಗ್ರಾಹಕರು, ಹೋಟೆಲ್ ಮಾಲೀಕರು ಎಲ್‌ಪಿಜಿ ಸಿಲಿಂಡರ್‌ಗಾಗಿ ಪರದಾಡುತ್ತಿದ್ದಾರೆ. ಸಿಲಿಂಡರ್ ಪೂರೈಕೆಯಲ್ಲಿ ಸಮಸ್ಯೆಯಿಲ್ಲ, ಭಯಪಡುವ ಅಗತ್ಯವಿಲ್ಲಎಂದು ಅಭಯ ನೀಡಿದರೂ ಎಲ್‌ಪಿಜಿ ವಿತರಣಾ ವ್ಯವಸ್ಥೆಯಲ್ಲಿ ಸಮಸ್ಯೆಯಾಗಿದೆ ಎಂಬ ದೂರು ವ್ಯಾಪಕವಾಗಿದೆ ಎಂದು ಶಾಸಕ ಬಿಪಿ ಹರೀಶ್ ಹೇಳಿದರು.
ಹಳ್ಳಿಗೆ ಬರುತ್ತಿಲ್ಲ:

ಗ್ರಾಮೀಣ ಪ್ರದೇಶದಲ್ಲಿ ಗ್ಯಾಸ್ ಸಿಲಿಂಡರ್ ಹೊತ್ತು ತರುತ್ತಿದ್ದ ಗೂಡ್ಸ್ ಆಟೋಗಳ ಸದ್ದಿಲ್ಲದಂತಾಗಿದೆ. ಖಾಲಿ ಸಿಲಿಂಡರ್ ಹಿಡಿದುಕೊಂಡು ತಾಲೂಕು, ಹೋಬಳಿ ಕೇಂದ್ರದ ಏಜೆನ್ಸಿ ಮುಂದೆ ಮುಂಜಾನೆ 5 ಕ್ಕೆ ಜನರು ಸರತಿಯಲ್ಲಿ ನಿಲ್ಲುತ್ತಿದ್ದಾರೆ. ಆದರೆ 30 ಸಿಲೆಂಡರ್ ವಿತರಿಸಿದ ಬಳಿಕ ‘ನಾಳೆ ಬನ್ನಿ’ ಎನ್ನುತ್ತಾರೆ ಎಂಬ ದೂರು ನಮ್ಮ ತಾಲೂಕಿನಲ್ಲಿಹೆಚ್ಚಾಗಿ ಕೇಳಿಬಂದಿದೆ. ಇದೇ ಸಮಸ್ಯೆ ಜಿಲ್ಲೆಯ ಎಲ್ಲೆಡೆ ಇದೆ.
ರೀಫಿಲ್ಲಿಂಗ್ ಅಕ್ರಮ:
ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡಿರುವ ಹಲವರು ಗೃಹಬಳಕೆ ಗ್ಯಾಸ್ ಸಿಲಿಂಡರ್ ಅನ್ನು ವಾಣಿಜ್ಯ ಬಳಕೆ ಸಿಲಿಂಡರ್‌ಗೆ ರೀಫಿಲ್ಲಿಂಗ್ ಮಾಡುವವರಿಗೆ ಹೆಚ್ಚಿನ ಹಣಕ್ಕೆ ಮಾರಾಟ ಮಾಡಿ ಲಾಭಮಾಡಿಕೊಳ್ಳುತ್ತಿದ್ದಾರೆ ಎಂಬ ದೂರು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ತಾಲೂಕಾಡಳಿತ ಅಕ್ರಮ ತಡೆಗೆ ನಿಗಾ ವಹಿಸಿದೆ.
ಎಲ್ಲೆಡೆ ದಾಳಿ:
ಈ ಸಮಯದಲ್ಲಿ ಮಾತನಾಡಿದ ತಾಲೂಕ ದಂಡಾಧಿಕಾರಿ ಹಾಗೂ ತಹಸಿಲ್ದಾರರವರು ಅಹಾರ ಇಲಾಖೆಯ ಶಿರಸ್ತೆದಾರ ಮಂಜುನಾಥ ಅಹಾರ ನೀರಕ್ಷಕರಾದ ಶಿವಕುಮಾರ,ನಜುರುಲ್ಲಾ ರವರು ಸೇರಿದಂತೆ ಸಿಬ್ಬಂದಿಗಳು.ಹೋಟೆಲ್, ಫುಡ್‌ಕೋರ್ಟ್, ಕ್ಯಾಂಟೀನ್ ಹೀಗೆ ಹಲವೆಡೆ ದಾಳಿ ಮಾಡುತ್ತಿರುವ ಆಹಾರ ಇಲಾಖೆ ಅಧಿಕಾರಿಗಳು ಗೃಹ ಬಳಕೆ ಗ್ಯಾಸ್ ಬಳಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ ಎಂದು ಹೇಳಿದರು.
ಆಟೋ ಗ್ಯಾಸ್ ದುಬಾರಿ :
ನಗರದಲ್ಲಿ ಆರು ಆಟೋಗ್ಯಾಸ್ ಬಂಕ್‌ಗಳಿದ್ದು, ಲೀಟರ್‌ಗೆ 56 ರೂ.ನಿಂದ 99 ರೂ.ಗೆ ಹೆಚ್ಚಳವಾಗಿದೆ ಹೊರತು ಸಮಸ್ಯೆಯಾಗಿಲ್ಲ. ಕೇಳಿದಷ್ಟು ಶೀಘ್ರವಾಗಿ ಗ್ಯಾಸ್ ದೊರೆಯುತ್ತಿದೆ. ಹೊರ ಜಿಲ್ಲೆಯಂತೆ ಸಮಸ್ಯೆಯಾಗಿಲ್ಲಎಂಬ ಸಂತಸ ಒಂದೆಡೆಯಾದರೆ ಬೆಲೆ ಹೆಚ್ಚಳ ಹೊರೆಯಾಗಿದೆ ಎಂಬುದು ಆಟೋ ಚಾಲಕರ ದೂರಾಗಿದೆ. ಪ್ರತಿಭಟನೆ ಮತ್ತಿತರ ದಾರಿ ಹಿಡಿದರೆ ಬಂಕ್‌ಗಳು ಬಾಗಿಲು ಮುಚ್ಚಿದರೆ ಇನ್ನಷ್ಟು ಸಮಸ್ಯೆ ಎದುರಿಸಬೇಕಾದಿತು ಎಂಬ ಆತಂಕದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಒಂದಿಷ್ಟು ಆಟೋಚಾಲಕರು ಸುಮ್ಮನಾಗಿದ್ದಾರೆ. ಯುದ್ಧದ ನಡುವೆ ಆಗುತ್ತಿರುವ ಸಮಸ್ಯೆಯನ್ನು ಬಂಡವಾಳ ಮಾಡಿಕೊಂಡು ಅಕ್ರಮ ಎಸಗುತ್ತಿರುವ ಒಂದಿಷ್ಟು ಜನರಿಗೆ ಕಡಿವಾಣ ಹಾಕಿದರೆ ಜನತೆ ಕೂಡ ನಿಟ್ಟುಸಿರು ಬಿಡಬಹುದಾಗಿದೆ ಎಂಬುದು ಗೃಹಿಣಿಯರ ನಿರೀಕ್ಷೆಯಾಗಿದೆ.
ಕಳೆದ 20-25 ದಿನಗಳಿಂದ ಗ್ಯಾಸ್ ಸಿಲಿಂಡರ್ ಸಮಸ್ಯೆ ಎದುರಾಗಿದ್ದು, ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳಿಗೆ ಕೆಲವು ಗ್ಯಾಸ್ ಏಜೆನ್ಸಿಯವರು ಗೃಹ ಬಳಕೆಗೆ ಮೀಸಲಾದ ಸಿಲಿಂಡರ್‍ಗಳನ್ನು ಅನಧಿಕೃತವಾಗಿ ಹೆಚ್ಚಿನ ಹಣ ಪಡೆದು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಗೃಹ ಬಳಕೆಯ ಸಿಲಿಂಡರ್‍ಗಳನ್ನು ಹೆಚ್ಚಿನ ಹಣ ಪಡೆದು ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳಿಗೆ ನೀಡುತ್ತಿರುವುದರಿಂದ ಗೃಹ ಬಳಕೆ ಸಿಲಿಂಡರ್‍ಗಳ ಕೊರತೆಯುಂಟಾಗುತ್ತಿದೆ. ಅಲ್ಲದೆ ಒಂದು ಸಿಲಿಂಡರ್ ಬುಕ್ ಮಾಡಿದ ನಂತರ 15 ದಿನಗಳ ನಂತರ ಪೂರೈಕೆ ಮಾಡಲಾಗುತ್ತಿದೆ. ಕೆಲವೊಂದು ವಿಭಕ್ತ ಕುಟುಂಬಗಳಲ್ಲಿ ಹೆಚ್ಚಿನ ಜರು ಇರುವುದರಿಂದ ಅಂತಹ ಕುಟುಂಬಗಳು ಒಂದು ಸಿಲಿಂಡರ್‍ನ್ನು 30 ದಿನಗಳವರೆಗೆ ಬಳಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳಿಗೆ ವಾಣಿಜ್ಯ ಬಳಕೆಯ ಸಿಲಿಂಡರ್ ದೊರೆಯುತ್ತಿದ್ದರೂ ಕೆಲ ಏಜೆನ್ಸಿಯವರು 1800 ರೂ ರಿಂದ 1900 ಪಡೆದು ಅನಧಿಕೃತವಾಗಿ ಸಿಲಿಂಡರ್‍ಗಳನ್ನು ಮಾರಾಟ ಮಾಡುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಬಗ್ಗೆ ಗಮನ ಹರಿಸಿ ಗ್ಯಾಸ್ ಸಿಲಿಂಡರ್ ವಿತರಣೆಯಲ್ಲಿ ಅವ್ಯವಹಾರ ನಡೆಸುತ್ತಿರುವ ಏಜೆನ್ಸಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಈ ಸಮಯದಲ್ಲಿ ಬಾನೂವಳ್ಳಿ ಏಜೆನ್ಸಿ ಮಲೆಬೇನ್ನೂರು ಏಜೆನ್ಸಿ ಮತ್ತು ಹರಿಹರದ ಇಂಡಿಯಾ ಹೊಸ ಅಂಗಡಿ ಏಜೆನ್ಸಿ, ಲಕ್ಷ್ಮೀ ಏಜೆನ್ಸಿ ಸೇರಿದಂತೆ ಅನೇಕರು ಹಾಜರಿದ್ದರು.