Welcome to ವಿಜಯ್ ಪ್ರಭಾಸ್ ನ್ಯೂಸ್   Click to listen highlighted text! Welcome to ವಿಜಯ್ ಪ್ರಭಾಸ್ ನ್ಯೂಸ್
Uncategorized

ಬೆಂಗಳೂರಿನಲ್ಲಿ ಮಳೆಯಿಂದ ಸರಣಿ ಅವಾಂತರ: ಇನ್ಮುಂದೆ ಫುಟ್‌ಪಾತ್​ನಲ್ಲಿ ವ್ಯಾಪಾರಕ್ಕೆ ಬ್ರೇಕ್!

ನಿನ್ನೆ ಸಂಜೆ ಸುರಿದ ರಣಮಳೆ ಮರಣ ಮೃದಂಗವನ್ನೇ ಬಾರಿಸಿದೆ. ಬೌರಿಂಗ್ ಆಸ್ಪತ್ರೆ ಕಾಂಪೌಂಡ್‌ ಕುಸಿದು 7 ಜನರು ಸಾವನ್ನಪ್ಪಿದ್ದಾರೆ

ಬೆಂಗಳೂರಿನಲ್ಲಿ ನಿನ್ನೆ ಸಂಜೆ ಸುರಿದ ರಣಮಳೆ ಮರಣ ಮೃದಂಗವನ್ನೇ ಬಾರಿಸಿದೆ. ಬೌರಿಂಗ್ ಆಸ್ಪತ್ರೆ ಕಾಂಪೌಂಡ್‌ ಕುಸಿದು 7 ಜನರು ಸಾವನ್ನಪ್ಪಿದ್ದಾರೆ. ಈ ಬೆನ್ನಲ್ಲೇ ಇಂತಹ ಅಪಾಯಕಾರಿ ಕಾಂಪೌಂಡ್ ಗೋಡೆಗಳನ್ನು ಗುರುತಿಸಲು ಸೂಚಿಸಲಾಗಿದ್ದು, ಫುಟ್‌ಪಾತ್‌ನಲ್ಲಿ ಇನ್ಮುಂದೆ ಯಾವುದೇ ವ್ಯಾಪಾರವನ್ನು ನಡೆಸುವಂತಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್​​ ಖಡಕ್​ ಸೂಚನೆ ನೀಡಿದ್ದಾರೆ.

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಏಪ್ರಿಲ್ 29ರಂದು ಕೇವಲ ಒಂದು ಗಂಟೆ ಸುರಿದ ಮರಣ ಮಳೆಗೆ ಸಿಲಿಕಾನ್ ಸಿಟಿಯಲ್ಲಿ ಅನಾಹುತಗಳ ಮೇಲೆ ಅನಾಹುತಗಳನ್ನು ಸೃಷ್ಟಿಸಿದೆ. ಬೌರಿಂಗ್ ಆಸ್ಪತ್ರೆಯ ಕೌಂಪೌಂಡ್ ಗೋಡೆ ಕುಸಿದು ಬಿದ್ದು 7 ಜನರು ಮೃತಪಟ್ಟಿದ್ದು 7 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಹೊಟ್ಟೆಪಾಡಿಗಾಗಿ ಸಣ್ಣಪುಟ್ಟ ವ್ಯಾಪಾರ ನಡೆಸಿ ಬದುಕು ಕಟ್ಟಿಕೊಳ್ಳಲೆಂದು ಬೆಂಗಳೂರಿಗೆ ಬಂದಿದ್ದ ಅಮಾಯಕರು ಹೆಣವಾಗಿ ಹೋಗಿದ್ದಾರೆ. ಬೆಂಗಳೂರಿನ, ಉತ್ತರ ಪ್ರದೇಶ ಮೂಲದ, ಕೇರಳ ಹಾಗೂ ಅಸ್ಸಾಂ ಮೂಲದ ಒಟ್ಟು 7 ಜನರು ಕಾಂಪೌಂಡ್ ಕುಸಿತದಲ್ಲಿ ಬಲಿಯಾಗಿದ್ದಾರೆ. ಈ ಘಟನೆ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರ ಬೆಂಗಳೂರಿನ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಕಟ್ಟಡ ಹಾಗೂ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸುವಂತೆ ಸೂಚಿಸಿದೆ. ಮತ್ತೊಂದೆಡೆ ಡಿಸಿಎಂ ಡಿ.ಕೆ.ಶಿವಕುಮಾರ್ ಇನ್ಮುಂದೆ ಫುಟ್ ಪಾತ್ ಮೇಲೆ ಯಾವುದೇ ವ್ಯಾಪಾರ ಮಾಡುವಂತಿಲ್ಲ ಎಂದು ಖಡಕ್ ಸೂಚನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಇಂತಹ ಅಪಾಯಕಾರಿ ಕಾಂಪೌಂಡ್ ಗೋಡೆಗಳನ್ನು ಗುರುತಿಸಲು ಸೂಚಿಸಲಾಗಿದ್ದು, ಫುಟ್‌ಪಾತ್‌ನಲ್ಲಿ ಇನ್ಮುಂದೆ ಯಾವುದೇ ವ್ಯಾಪಾರವನ್ನು ನಡೆಸುವಂತಿಲ್ಲ ಎಂದು ತಿಳಿಸಿದ್ದಾರೆ.
ರಸ್ತೆ ಮೇಲೆ ಬಿದ್ದಿರುವ ಮರದ ಕೊಂಬೆ ತೆರವು ಮಾಡಲು ಪೊಲೀಸರಿಗೆ ಈಗಾಗಲೇ ನಿರ್ದೇಶನವನ್ನೂ ನೀಡಿದ್ದೇನೆ. ಈಗಾಗಲೇ ನಗರದಾದ್ಯಂತ ಇರುವ ಸಮಸ್ಯೆ ಪಟ್ಟಿ ಮಾಡಲಾಗಿದೆ. ಎಲ್ಲಾ ಮಾಹಿತಿಯನ್ನ ಈಗ ಕಂಟ್ರೋಲ್ ರೂಂನಲ್ಲಿ ಕಲೆ ಹಾಕಿದ್ದಾರೆ. ಗೋಡೆ ಕುಸಿತ ಕೇಸ್​ನಲ್ಲಿ ಅಧಿಕಾರಿ ನಿರ್ಲಕ್ಷವೂ ಇದೆ ಎನ್ನಲ್ಲ. ಇನ್ಮುಂದೆ ಫುಟ್‌ಪಾತ್‌ನಲ್ಲಿ ಯಾರೂ ವ್ಯಾಪಾರ ಮಾಡುವಂತಿಲ್ಲ ಎಂದರು.
ಇಂತಹ ಅಪಾಯಕಾರಿ ಕಾಂಪೌಂಡ್ ಗೋಡೆಗಳನ್ನು ಮೊದಲೇ ಗುರುತಿಸಲು ಸೂಚಿಸಿದ್ದೇನೆ. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಫುಟ್‌ಪಾತ್‌ಗಳ ಮೇಲೆ ಇನ್ಮುಂದೆ ಯಾವುದೇ ವ್ಯಾಪಾರವನ್ನು ನಡೆಸುವಂತಿಲ್ಲ. ಮುಖ್ಯವಾಗಿ ವಾಜಪೇಯಿ ಆಸ್ಪತ್ರೆ ಪಕ್ಕದಂತಹ ಸ್ಥಳಗಳಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಮಳೆ‌ ಜಾಸ್ತಿ ಬರಲಿ ಅಂತಾ ನಾನು ದೇವರಲ್ಲಿ ಬೇಡಿಕೊಳ್ಳುತ್ತೇನೆ
ಈ ರೀತಿಯ ಗೋಡೆಗಳನ್ನು ಗುರುತು ಮಾಡಲು ತಿಳಿಸಿದ್ದೇನೆ. ಮಳೆ ಜಾಸ್ತಿ ಬಂದಾಗ ನಾವು ಸಿದ್ಧತೆಯನ್ನು ಮಾಡಿಕೊಳ್ಳಬೇಕು. ಮಳೆ‌ ಜಾಸ್ತಿ ಬರಲಿ ಅಂತಾ ನಾನು ದೇವರಲ್ಲಿ ಬೇಡಿಕೊಳ್ಳುತ್ತೇನೆ. ಮಳೆಯ ಪ್ರಮಾಣ ಕುಸಿಯಲಿದೆ ಅನ್ನೋ ವರದಿಗಳು ಬಂದಿವೆ. ಮಳೆ ಕಡಿಮೆಯಾದರೆ ವಿದ್ಯುತ್‌ಗೂ ಸಮಸ್ಯೆ ಉಂಟಾಗಲಿದೆ. ಡ್ಯಾಂಗಳಿಗೂ ಸಮಸ್ಯೆ ಆಗುತ್ತದೆ. ಶರಾವತಿಯಲ್ಲಿ ಈಗಾಗಲೇ ಆ ರೀತಿ ಕಾಣಿಸುತ್ತಿದೆ. ಮೇ 3ರಂದು ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡುತ್ತಿದ್ದೇನೆ ಎಂದು ತಿಳಿಸಿದರು.
ನಾಳೆ ಡಿಕೆ ಶಿವಕುಮಾರ್ ಸಿಟಿ ರೌಂಡ್ಸ್
ಇನ್ನ ನಗರದ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಲು ಡಿಸಿಎಂ ಡಿ.ಕೆ. ಶಿವಕುಮಾರ್ ನಾಳೆ ಬೆಂಗಳೂರು ಸಿಟಿ ರೌಂಡ್ಸ್ ನಡೆಸಲಿದ್ದಾರೆ. ನಾಳೆ ಮಧ್ಯಾಹ್ನ ಸಿಟಿ ರೌಂಡ್ಸ್ ಹಾಕಲಿರುವ ಡಿಕೆ ಶಿವಕುಮಾರ್​, ಮಳೆಯಿಂದಾದ ಸಮಸ್ಯೆ, ಅವಾಂತರಗಳನ್ನು ವೀಕ್ಷಿಸಲಿದ್ದಾರೆ.

 

Related Articles

Leave a Reply

Your email address will not be published. Required fields are marked *

Back to top button
error: Content is protected !!
Click to listen highlighted text!